ಅಕ್ಕರೆಯ ಆಲಿಂಗನ
ಅನುರಾಗದ ಸವಿ ಸಿಂಚನ
ಅತ್ಯಧಿಕ ಕಾಳಜಿಯು ನನ್ನವರಲ್ಲಿರಬೇಕು..
ಅರಮನೆಯ ಬಯಕೆಯಿಲ್ಲ
ಪಟ್ಟರಸಿಯ ಕನಸಿಲ್ಲ
ಗುಡಿಸಲೇ ಆದರೂ ನಾನವರ
ಮೆಚ್ಚಿನ ಸತಿಯಾಗಿರಬೇಕು
ಅವರ ಬಾವನೆಗಳಲ್ಲಿ ಬೆರೆವ
ಜೀವಗೆಳತಿಯಾಗಿರಬೇಕು…..
ನನ್ನವರ ಏಳ್ಗೆಗೆ
ನಾ ಏಣಿಯಾಗಬೇಕು
ನನ್ನೆಲ್ಲಾ ನೋವಿಗೂ
ನನ್ನವರ ಹೆಗಲಿರಬೇಕು…..
ಇಳೆಗೂ ಮಳೆಗೂ ಇರುವಂಥ
ಮದುರ ಮೃತ್ರಿ ನಮ್ಮಲ್ಲಿರಬೇಕು
ಬಿಟ್ಟು ಬಾಳಲಾರೆನೆಂಬ ಬಾವದ
ಬಾಂಧವ್ಯ ಭದ್ರವಾಗಿರಬೇಕು….
ನನ್ನವರ ಅಕ್ಕರೆಯ ಕರೆಯಲ್ಲಿ
ನನಗೇಂತಾ ಮುದ್ದಾದ ಹೆಸರೊಂದಿರಬೇಕು
ನನ್ನವರ ತಂಟತನ ಸದಾ
ನನ್ನ ಸುತ್ತುತ್ತಿರಬೇಕು…..
ಇಹಲೋಕದ ನನ್ನ ಕೊನೆಯ
ಪಯಣದ ಆ ಗಳಿಗೆಯಲಿ
ನನ್ನವರ ಮಡಿಲಲ್ಲೇ ನಾ ಮಲಗಿರಬೇಕು
ಈ ಲೋಕದ ನನ್ನ ಕೊನೆಯ ಗುಟುಕು
ನನ್ನವರ ಕಣ್ಣೀರ ಬಿಂದುವಾಗಿರಬೇಕು
ಜನುಮ ಜನುಮಕ್ಕೂ
ನಮ್ಮ ಮೃತ್ರಿ ಹೀಗೆ ಇರಬೇಕು ನನ್ನ ಪ್ರೀತಿಯ
ಹುಡುಗ
ಜಿ ಕೆ ಹೆಬ್ಬಾರ್ ಶಿಕಾರಿಪುರ