ಸಚಿವರ ಜಿಲ್ಲಾ ಪ್ರವಾಸ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ
ಕೆ.ಎಸ್ ಈಶ್ವರಪ್ಪ ಇವರು ಏ.04 ರಂದು ದಾವಣಗೆರೆ ಜಿಲ್ಲೆಯ
ಹರಿಹರ ತಾಲ್ಲೂಕಿನ ಬೆಳ್ಳೂಡಿಗೆ ಪ್ರವಾಸ ಕೈಗೊಳ್ಳಲಿದ್ದಾರೆ.
ಏ.04 ರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದಿಂದ ಹೊರಟು ಹರಿಹರ
ತಾಲ್ಲೂಕಿನ ಬೆಳ್ಳೂಡಿಗೆ ಆಗಮಿಸುವರು. ನಂತರ 11 ಗಂಟೆಗೆ
ಶಾಖಾಮಠದ ಆವರಣದಲ್ಲಿ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ
ಗುರುಪೀಠ ಟ್ರಸ್ಟ್(ರಿ) ಇವರು ಆಯೋಜಿಸಿರುವ ವಿದ್ಯಾರ್ಥಿನಿಲಯ,
ಸಮುದಾಯ ಭವನ ಮತ್ತು ಮುಖ್ಯಮಹಾದ್ವಾರದ ಉದ್ಘಾಟನೆ
ಹಾಗೂ ಶಾಖಾಮಠದ 5ನೇ ವರ್ಷದ ವಾರ್ಷಿಕೋತ್ಸವ
ಸಮಾರಂಭದಲ್ಲಿ ಭಾಗವಹಿಸುವರು. ಹಾಗೂ ಮಧ್ಯಾಹ್ನ 3
ಗಂಟೆಗೆ ಬೆಳ್ಳೂಡಿಯಿಂದ ರಸ್ತೆಯ ಮೂಲಕ ಶಿವಮೊಗ್ಗ
ತಲುಪುವರೆಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್
ರಾಜ್ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಕೆ.ಬಿ.ಲೋಕೇಶಪ್ಪ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
