ಮಾನ್ಯ ಮುಖ್ಯಮಂತ್ರಿಗಳಾದ
ಬಿ.ಎಸ್.ಯಡಿಯೂರಪ್ಪನವರು ಏ.04 ರಂದು ದಾವಣಗೆರೆ
ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿಗೆ ಪ್ರವಾಸ
ಕೈಗೊಳ್ಳಲಿದ್ದಾರೆ.
ಏ.04 ರ ಬೆಳಿಗ್ಗೆ 8.30 ಕ್ಕೆ ಬೆಂಗಳೂರಿನಿಂದ ರಸ್ತೆಯ
ಮೂಲಕ ಹೊರಟು ಹರಿಹರ ತಾಲ್ಲೂಕಿನ ಬೆಳ್ಳೂಡಿಗೆ
ಆಗಮಿಸುವರು. ನಂತರ 11.30ಕ್ಕೆ ಶಾಖಾಮಠದ ಆವರಣದಲ್ಲಿ
ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಟ್ರಸ್ಟ್(ರಿ)
ಇವರು ಆಯೋಜಿಸಿರುವ ವಿದ್ಯಾರ್ಥಿನಿಲಯ, ಸಮುದಾಯ ಭವನ
ಮತ್ತು ಮುಖ್ಯಮಹಾದ್ವಾರದ ಉದ್ಘಾಟನೆ ಹಾಗೂ ಶಾಖಾಮಠದ
5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ
ಭಾಗವಹಿಸುವರು. ಹಾಗೂ 1.30ಕ್ಕೆ ಬೆಳ್ಳೂಡಿಯಿಂದ ರಸ್ತೆಯ
ಮೂಲಕ ಬೆಂಗಳೂರಿಗೆ ತಲುಪುವರೆಂದು ಮಾನ್ಯ
ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ
ಬಿ.ಪಿ.ಚನ್ನಬಸವೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *