ಹೊನ್ನಾಳಿ : ಕೋವಿಡ್ ಕೇರ್ ಸೆಂಟರ್‍ಗಳನ್ನು ಸೋಂಕಿತರು ತಮ್ಮ ಮನೆ ಎಂದು ತಿಳಿದು ಕೊಂಡು ಸ್ವಚ್ಚವಾಗಿಟ್ಟುಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೋಂಕಿತರಿಗೆ ಕಿವಿ ಮಾತು ಹೇಳಿದರು.
ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ಮೂರನೇ ದಿನದ ವಾಸ್ತವ್ಯ ಮಾಡಿ, ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ ಮಾತನಾಡಿದರು. ಕೋವಿಡ್ ಕೇರ್ ಸೆಂಟರ್‍ನಲ್ಲಿ ನಾನು ವಾಸ್ತವ್ಯ ಮಾಡುತ್ತಿರುವುದು ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬ ಬೇಕೆಂಬ ಉದ್ದೇಶದಿಂದ ಎಂದ ಶಾಸಕರು ಸೋಂಕಿತರು ತಮ್ಮ ಕೊಠಡಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಕಿವಿ ಮಾತು ಹೇಳಿದರು.
ನನಗೆ ಎರಡು ಬಾರೀ ಪಾಸಿಟಿವ್ ಬಂದಾಗ ನಾನೇ ನನ್ನ ಕೊಠಡಿಯನ್ನ ಸ್ವಚ್ಚ ಮಾಡಿಕೊಳ್ಳುತ್ತಿದ್ದೇ, ಅದೇ ರೀತಿ ನೀವು ಕೂಡ ನಿಮ್ಮ ಕೊಠಡಿಗಳನ್ನು ಸ್ವಚ್ಚ ಮಾಡಿಕೊಳ್ಳುವ ಮೂಲಕ ಕೋವಿಡ್ ಕೇರ್ ಸೆಂಟರ್ ಅನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಕಿವಿ ಮಾತು ಹೇಳಿದರು.

Leave a Reply

Your email address will not be published. Required fields are marked *