ಶಿಕಾರಿಪುರ
ದೇಶವೇ ಹಿಂದೆಂದು ಕಾಣದಂತಹ ಸಂಕಷ್ಟ ಎದುರಿಸುತ್ತಿದೆ .ಕೂ ರೋ ನಾ ವೈರಸ್ ರೋಗದ ಹೆಮ್ಮಾರಿ ಕರಿ ನೆರಳು ಜನರನ್ನು ಕಾಡಿ ಜನರ ಜೀವನ ಹಾಗೂ ಜೀವವನ್ನು ತೆಗೆಯುತ್ತಿದೆ.ಇಂತಹ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು. ರಾಜ ಕಾರಣಿಗಳು.ಸಂಘ ಸಂಸ್ಥೆಗಳು.ಜನರಿಗೆ ಸಹಾಯ ಹಸ್ತ ನೀಡುವುದು ಸಾಮಾನ್ಯ ಕರ್ತವ್ಯ ವಾಗಿದೆ. ಸೊರಬ ದ ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕೂ ರೋ ನಾ ಸಂದರ್ಬದಲ್ಲಿ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟ ದಲ್ಲಿರುವ ಕಡು ಬಡ ಬ್ರಾಹ್ಮಣ ರನ್ನು ಗುರುತಿಸಿ ಅವರ ಮನೆಬಾಗಿಲಿಗೆ ಹೋಗಿ ದಿನಸಿ ಸಾಮಗ್ರಿಗಳ ಆಹಾರ ಕಿಟ್ ನೀಡಿ ರುವುದೂ ಸ್ವಾಗತಾರ್ಹ ಬೆಳವಣಿಗೆ ಇದು ಬೇರೊಬ್ಬರಿಗೆ ಪ್ರೇರೇಪಣೆ ಆಗುವ ಸಂದೇಶ ನೀಡುವ ಸಮಾಜ ಸೇವೆ ಎಂದು ಮಾದ್ಯಮ ಮಿತ್ರ ಜಿ ಕೆ ಹೆಬ್ಬಾರ್ ತಮ್ಮ ಅಭಿಪ್ರಾಯದ ಅಭಿಮತ ವ್ಯಕ್ತ ಪಡಿಸಿದರು.
[: ಶಿಕಾರಿಪುರದಲ್ಲಿ ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಧ್ಯಕ್ಷ ರಾಮಚಂದ್ರ ನೇತೃತ್ವದಲ್ಲಿ ಕಡು ಬಡ ಬ್ರಾಹ್ಮಣ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ಕಾರ್ಯಕ್ರಮ ಧಲ್ಲಿ ಬಾಗೀಯಾಗಿ ಮಾತನಾಡಿದರು.
ದಾನ ಮಾಡುವ ಅತವಾ ಸೇವೆ ಮಾಡುವ ಸಂಕಲ್ಪ ಮನದಾಳದಿಂದ ಬರಬೇಕು. ಇದ್ದವರು ಕೊಡುವುದು ದೊಡ್ಡದಲ್ಲ .ಇಲ್ಲದವರು ಕೊಡುವುದು ವಿಶೇಷ.ಕೆಲವರು ಕೊಡುವ ಸ್ಥಿತಿಯಲ್ಲಿದ್ದರೂ ಕೊಡುವ ಮನಸ್ಥಿತಿ ಇರುವುದಿಲ್ಲ.ಅದನ್ನು ಈ ಸೇವಾ ಟ್ರಸ್ಟ್ ಮಾಡಿರುವುದು ಸ್ವಾಗತಾರ್ಹ .ಅನೇಕ ಸಮಾಜ ಸೇವಾ ಕಾರ್ಯ ಕ್ರಮದಲ್ಲಿ ತೊಡಗಿಸಿ ಕೊಂಡಿರುವ ಈ ಟ್ರಸ್ಟ್ ಶಿಕಾರಿಪುರದಲ್ಲಿ ಇತ್ತೀಚೆಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಕೆಲಸ ಮಾಡಿ ಅವರಿಗೆ ಅವರಿಗೆ ಸುರಭಿ ಶ್ರಿ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.ಶಿರಾಳಕೊಪ್ಪದ ನಿರಾಶ್ರಿತ ಸರ್ಕಸ್ ಕಂಪನಿ ಕಾರ್ಮಿಕರಿಗೆ ತಮ್ಮ ಸಹಾಯಹಸ್ತ ನೀಡಿದ್ದಲ್ಲದೆ ಸೊರಬ ಮತ್ತು ಸಿರ್ಸಿ ಗಳಲ್ಲಿ ತಮ್ಮ ಸಹಾಯದ ಕಾರ್ಯ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಮಚಂದ್ರ ಅವರು ಗೊ ಶಾಲೆ ಆರಂಭ. ಮಾಡುವ ವಿಚಾರ ಪ್ರಸ್ತಾಪಿಸಿದರು
: ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಮಾತನಾಡಿ ದೊಡ್ಡ ಪ್ರಮಾಣದಲ್ಲಿ ಕೊಡಲು ಆಗಲಿಲ್ಲ ಸಣ್ಣ ಪ್ರಮಾಣದಲ್ಲಿ ಒಂದು ದಿನದ ಅಡಿಗೆ ಸಾಮಾಗ್ರಿ ನೀಡಿದ್ದೇವೆ ಅನ್ಯತಾ ಬಾವಿಸಬೇಡು ಅಳಿಲು ಸೇವೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಿದರು.ಮುಂದಿನ ದಿನಗಳಲ್ಲಿ ಭಗವಂತನ ಅನುಗ್ರಹ ಮಾಡಿದರೆ ಇನ್ನೂ ಹೆಚ್ಚಿನ ಸಹಾಯ ಮಾಡುವುದಾಗಿ ತಿಳಿಸಿದರು
ಪಲಾನುಭವಿ ಎಲೆಮರೆ. ಕಾಯಿ ಕಲಾವಿದ ಶ್ರಿದರ ಮಾತನಾಡಿ ನಮ್ಮ ಸಮಾಜದ ಬಡ ವರನ್ನು ಗುರುತಿಸಿ ಬೇರೊಬ್ಬರಿಗೆ ಸಹಾಯ ಮಾಡುವುದಕ್ಕೆ ಪ್ರೇರೇಪಣೆ ಮಾಡಿ ದಕ್ಕೆ ಧನ್ಯವಾದ ತಿಳಿಸಿ ಭಗವಂತ ಅವರಿಗೆ ಹೆಚ್ಚಿನ ಆಯಸ್ಸು ಐ ಶ್ವರ್ಯ ಕೊಡಲೆಂದು ಹಾರೈಸಿದರು .
ಈ ಸಂದರ್ಬದಲ್ಲಿ ಮಾದ್ಯಮ ಮಿತ್ರ ಜಿ ಕೆ ಹೆಬ್ಬಾರ್.ಟ್ರಸ್ಟ್ ಅಧ್ಯಕ್ಷ ರಾಮಚಂದ್ರ.ಮೋಹನ್ ಹೆಬ್ಬಾರ್ ಲತಮೋಹನ್ ಹೆಬ್ಬಾರ್ ಸಿರಿ ಸಂಪನ್ನೆ .ಇತರರು ಉಪಸ್ಥಿತರಿದ್ದರು.
