ದಾವಣಗೆರೆ: ಶಾಸಕ ಡಾ|| ಶಾಮನೂರು
ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್
ಅವರುಗಳು ಮಾಡುತ್ತಿರುವ ಜೀವ ಉಳಿಸುವ
ಕಾರ್ಯಕ್ರಮದಿಂದಾಗಿ ಅವರ ಕುಟುಂಬದ ಹೆಸರು ಇತಿಹಾಸದಲ್ಲಿ
ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಮಾಜಿ ಕೇಂದ್ರ
ಸಚಿವರಾದ ಕೆ.ಹೆಚ್.ಮುನಿಯಪ್ಪನವರು ಶ್ಲಾಘಿಸಿದರು.
ಇಂದು ದಾವಣಗೆರೆಗೆ ಆಗಮಿಸಿದ ಮುನಿಯಪ್ಪನವರು
ದಾವಣಗೆರೆಯ ಎಪಿಎಂಸಿ ಮಾರುಕಟ್ಟೆಯ ಹೊಲ್‍ಸೆಲ್ ತರಕಾರಿ
ವ್ಯಾಪಾರಸ್ಥರಿಗೆ ಏರ್ಪಡಿಸಿದ್ದ ಉಚಿತ ಲಸಿಕಾ ಶಿಬಿರವನ್ನುದ್ದೇಶಿಸಿ
ಅವರು ಮಾತನಾಡಿದರು.

ಒಂದು ಸರ್ಕಾರ ನಡೆಸುವಂತಹ ಕಾರ್ಯಕ್ರಮವನ್ನು
ಒಬ್ಬ ವ್ಯಕ್ತಿ ಮಾಡುತ್ತಾರೆಂದರೆ. ಅವರು ವ್ಯಕ್ತಿಯಲ್ಲ
ಶಕ್ತಿ ಎಂಬುದನ್ನು ಪ್ರಶಂಶಿಸಿದ ಅವರು ಪ್ರತಿಯೊಬ್ಬ
ನಾಗರೀಕರಿಗೂ ಲಸಿಕೆ ನೀಡುವುದು ಸರ್ಕಾರದ ಕರ್ತವ್ಯ.
ಆದರೆ ಸರ್ಕಾರ ಇಂದು ವಾರಕ್ಕೊಮ್ಮೆ ಲಸಿಕೆ ನೀಡುತ್ತಿಲ್ಲ.
ಶಾಮನೂರು ಕುಟುಂಬದವರು ಪ್ರತಿನಿತ್ಯ ಲಸಿಕೆ
ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ
ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಕೆಪಿಸಿಸಿ ಕಾರ್ಯದರ್ಶಿ
ಗುರಪ್ಪ ನಾಯ್ಡು, ಅಮೃತೇಶ್, ಕೆ.ಎಸ್.ಬಸವಂತಪ್ಪ,
ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯ
ಜಿ.ಎಸ್.ಮಂಜುನಾಥ್, ನಗರಸಭೆ ಮಾಜಿ ಉಪಾಧ್ಯಕ್ಷರಾದ
ಎಸ್.ಎನ್.ಚಂದ್ರಪ್ಪ, ಮುಖಂಡರುಗಳಾದ
ಎಸ್.ಎನ್.ತಿಪ್ಪೇಸ್ವಾಮಿ, ಆರ್.ವಾಸುದೇವ್, ಕೆ.ನೀಲಪ್ಪ, ಡಿಟಿಎನ್
ನಾರಾಯಣಪ್ಪ, ಎ.ಆರ್. ರಾಮಚಂದ್ರಪ್ಪ, ಎಂ.ಎನ್.
ಮಹಾದೇವಣ್ಣ, ಮಲ್ಲೇಶ್, ರಾಕೇಶ್, ಮಾರುತಿ, ಆನಂದ
ಮತ್ತಿತರರು ಉಪಸ್ಥಿತರಿದ್ದರು.
