ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಅವರು ಪ್ರತಿದಿನ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಪ್ರತಿ ಹಳ್ಳಿಗಳಿಗೆ ತೆರಳಿ 1 ಮತ್ತು 2ನೇ ಅಲೆಯಲ್ಲಿ ಕೊರೊನಾದಿಂದ ಮೃತಪಟ್ಟಿರುವ ಕಾಂಗ್ರೆಸ್ ಕಾರ್ಯಕರ್ತರ ಗಳ ಮನೆಗಳಿಗೆ ತೆರಳಿ, ಸಾಂತ್ವಾನದ ಜೊತೆಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ .
ಇದು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವು ಸಹ ಆಗಿದೆ. ಇದರ ಜೊತೆಗೆ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡರ ಪುತ್ರರಾದ ಡಿ ಎಸ್ ಪ್ರದೀಪ್ ಗೌಡ್ರು ಮತ್ತು ಡಿ ಎಸ ಸುರೇಂದ್ರ ಗೌಡ್ರು ಯಾಕೆ ಹಳ್ಳಿಗಳಿಗೆ ಬರುತ್ತಿಲ್ಲ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ಕೂಗಾಗಿದೆ. ಡಿ.ಜಿ ಶಾಂತನಗೌಡ್ರು ಮತ್ತು ಅವರ ಮಕ್ಕಳು ಹಳ್ಳಿಗಳಿಗೆ ತೆರಳಿ ಕಾರ್ಯಕರ್ತರ ಸಂಘಟನೆಯನ್ನು ಮಾಡಿದರೆ, ಮುಂದಿನ ದಿನಮಾನಗಳಲ್ಲಿ 2023ಕ್ಕೆ ತಾಲೂಕಿನ ಅಧಿಕಾರ ಚುಕ್ಕಾಣಿ ಹಿಡಿಯುವುದು ಖಚಿತವಾಗಿರುತ್ತದೆ.
ಇಲ್ಲದೆ ಹೋದರೆ ಮುಂದಿನ ದಿನಮಾನಗಳಲ್ಲಿ ಅವರು ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ .ಎಂದು ತಾಲೂಕ್ ಆಫೀಸ್ ,ಬಸ್ ನಿಲ್ದಾಣ, ಇತರೆ ಆಯಕಟ್ಟಿನ, ಜಾಗದಲ್ಲಿ ಜನರು ಮಾತನಾಡುತ್ತಿದ್ದಾರೆ. ಆದ್ದರಿಂದ ಶಾಂತನಗೌಡ್ರು ಮತ್ತು ಅವರ ಮಕ್ಕಳು ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಬಹುದು? ಎಂದು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರುಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಹಾಗಾಗಿ ಅವರ ಮುಂದಿನ ನಡೆಯನ್ನು ಕಾದು ನೋಡೋಣ
ಇದು ಅವಳಿ ತಾಲೂಕುಗಳ ಜನರ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿದೆ.