ಪ್ರಚೋದನಕಾರಿ ಹಾಗೂ ಅವ್ಯಚ ಶಬ್ದದ ಹೇಳಿಕೆಗಳನ್ನು ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ರನ್ನು ಬಂಧಿಸಲು ಆಗ್ರಹಿಸಿ – ಯುವ ಕಾಂಗ್ರೆಸ್ ನಿಂದ ಎರಡು ದೂರು ದಾಖಲು
ದೂರಿನ ಪ್ರತಿ 1
ಗೆ
ಪೊಲೀಸ್ ಇನ್ಸ್ಪೆಕ್ಟರ್
ಕೋಟೆ ಪೊಲೀಸ್ ಠಾಣೆ, ಶಿವಮೊಗ್ಗ
ಇಂದ
ಹೆಚ್.ಪಿ. ಗಿರೀಶ್
ಜಿಲ್ಲಾಧ್ಯಕ್ಷರು
ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ
134 ಕೆ.ಹೆಚ್.ಬಿ. ಕಾಲೋನಿ ವಿನೋಬನಗರ ಶಿವಮೊಗ್ಗ
ಮಾನ್ಯರೇ
ವಿಷಯ: ಪ್ರಚೋದನಕಾರಿ ಹೇಳಿಕೆ ನೀಡಿದ ಸಚಿವ ಕೆಎಸ್ ಈಶ್ವರಪ್ಪನವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದೂರು
ದಿನಾಂಕ: 8-8 -2022ರ ಭಾನುವಾರ ನಗರದ ಮಾತ ಮಾಂಗಲ್ಯ ಮಂದಿರದಲ್ಲಿ ನಡೆದ ಬಿಜೆಪಿ ಪಕ್ಷದ ನಗರ ಸಮಿತಿ ಕಾರ್ಯಕಾರಿ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಚಿವರು ಶಿವಮೊಗ್ಗ ನಗರದ ಶಾಸಕರಾದ ಕೆ ಎಸ್ ಈಶ್ವರಪ್ಪ ನವರು ಒಂದಕ್ಕೆ ಎರಡು ತಲೆ ತೆಗೆಯಿರಿ ಎಂಬ ಪ್ರಚೋದನಾಕಾರಿ ಹೇಳಿಕೆಯನ್ನು ನೀಡುವ ಮುಖಾಂತರ ಒಬ್ಬ ಸಂವಿಧಾನಿಕವಾಗಿ ಆಯ್ಕೆಯಾದ ಜನಪ್ರತಿನಿಧಿಯು ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಕೋಮು ಸಂಘರ್ಷಕ್ಕೆ ನಾಂದಿ ಹಾಡುತ್ತಿದ್ದು ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಇಂತಹ ಪ್ರಚೋದನಕಾರಿ ಹೇಳಿಕೆಗಳು ಪುಷ್ಟಿ ನೀಡುವಂತಿದೆ ಈ ಕೂಡಲೇ ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿದ ಸಚಿವರ ವಿರುದ್ಧ ಸಮಾಜಘಾತುಕ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ
ದೂರಿನ ಪ್ರತಿ 2
ಗೆ
ಪೊಲೀಸ್ ಇನ್ಸ್ಪೆಕ್ಟರ್
ಕೋಟೆ ಪೊಲೀಸ್ ಠಾಣೆ, ಶಿವಮೊಗ್ಗ
ಇಂದ
ಎಂ ಪ್ರವೀಣ್ ಕುಮಾರ್
ರಾಜ್ಯ ಪ್ರಧಾನ ಕಾರ್ಯದರ್ಶಿ
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ
6 ನೇ ತಿರುವು ಬಸವನಗುಡಿ ಶಿವಮೊಗ್ಗ
ಮಾನ್ಯರೇ
ವಿಷಯ:
ಕಾಂಗ್ರೆಸ್ ಪಕ್ಷದ ನಾಯಕರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಸಚಿವ ಕೆಎಸ್ ಈಶ್ವರಪ್ಪನವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದೂರು
ದಿನಾಂಕ 10-08- 2022ರ ಮಂಗಳವಾರದ ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಚಿವರು ಶಿವಮೊಗ್ಗ ನಗರದ ಶಾಸಕರಾದ ಕೆ ಎಸ್ ಈಶ್ವರಪ್ಪ ನವರು ವಿರೋಧ ಪಕ್ಷ ಕಾಂಗ್ರೆಸ್ ನಾಯಕರನ್ನು ಕುಡುಕ ಸೂ…. ಮಕ್ಕಳು ಎಂಬ ಅವ್ಯಾಚ್ಯ ಶಬ್ದ ಕೈಗಳಲ್ಲಿ ನಿಂದಿಸಿರುವುದು ಈಗಾಗಲೇ ರಾಜ್ಯಾದ್ಯಂತ ಎಲ್ಲ ಮಾಧ್ಯಮಗಳಲ್ಲೂ ಬಿತ್ತರ ಗೊಂಡಿದ್ದು,
ಒಬ್ಬ ಸಂವಿಧಾನಿಕವಾಗಿ ಆಯ್ಕೆಯಾದ ಜನಪ್ರತಿನಿಧಿಯು ಈ ರೀತಿ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಲ್ಲಿ ನಿಂದಿಸುವ ಹೇಳಿಕೆಯು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ರಿಗೆ ನೋವುಂಟಾಗಿದೆ ಜೊತೆಗೆ ಒಬ್ಬ ಸಂವಿಧಾನಿಕವಾಗಿ ಆಯ್ಕೆಯಾದ ಜನಪ್ರತಿನಿಧಿಯು ಈ ರೀತಿ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ಹೇಳಿಕೆ ನೀಡುವುದು ನೋಡಿದರೆ ರಾಜ್ಯದ ಜನತೆಗೆ ಅಗೌರವ ತೋರಿಸಿದಂತೆ ಕೂಡಲೇ ಇವರ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ.
ದೂರು ಸಲ್ಲಿಸುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ ರಂಗನಾಥ್, ಕರ್ನಾಟಕ ಪ್ರದೇಶಗಳು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ ಪ್ರವೀಣ್ ಕುಮಾರ್, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಎಚ್. ಪಿ. ಗಿರೀಶ್ ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಎಚ್.ಸಿ. ಯೋಗೇಶ್ ಹಾಗೂ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್ ಕುಮರೇಶ್ , ಯುವ ಕಾಂಗ್ರೆಸ್ ಮುಖಂಡರಾದ ಟಿವಿ ರಂಜಿತ್ ಪದಾಧಿಕಾರಿಗಳಾದ ರಾಹುಲ್, ವೆಂಕಟೇಶ್ ಕಲ್ಲೂರು, ಇರ್ಫಾನ್, ಸಚಿನ್, ಸೀನ, ಸುಹಾಸ್ ಗೌಡ, ನಂದಕುಮಾರ್ ಚೇತನ್ ಇತರರು ಇದ್ದರು.