ಭಾರತೀಯ ಮನಸುಗಳು ಜಾತಿ-ಮತ-ಪಂಥಗಳ ಬದಿಗೊತ್ತಿ ಮತ್ತೆ ಒಂದಾಗುವ ಜರೂರತ್ತಿದೆ, ಕೋವಿಡ್ ಸಾಂಕ್ರಮಿಕ ಕದನದಲ್ಲಿ ಮಾನವೀಯ ಅಸ್ತ್ರವನ್ನು ಒಕ್ಕರೊಲಿನಿಂದ ಬಳಸಬೇಕಿದೆ, ಇದಾಗದೇ ಹೋದರೆ ಭಾರತಿಯರೆಂದಿಗೂ ಕೋವಿಡ್ ವಿರುದ್ದ ಜಯಗಳಿಸಲು ಸಾಧ್ಯವಿಲ್ಲ, ಹೀಗಾಗಿ ಮಾನವೀಯ ಮೌಲ್ಯಗಳು ಮನುಕುಲದ ಎದೆಗಳಲ್ಲಿ ಶಾಶ್ವತೀಕರಿಸಬೇಕಿದೆ.

ಯಾವ ರಂಗದವರೇ ಆಗಲಿ ಮನುಷ್ಯತ್ವದ ತಳಹದಿಯಲ್ಲಿ ಸೇವೆ ತಲ್ಲೀನವಾಗಿಸಲಿ ಎಂದು ಸಣ್ಣದೊಂದು ಟಿಪ್ಪಣಿಯನ್ನು ತಮ್ಮ ಮುಂದಡಿಯಿಟ್ಟು ಮತ್ತೊಬ್ಬರ ಅಸೀಮ ಹೆಜ್ಜೆಗಳನ್ನು ಇಲ್ಲಿ ವಿಸ್ತ್ರತಗೊಳಿಸುತ್ತಿದ್ದೇನೆ.
ಇಂತಿವರನ್ನು ಶಿವಮೊಗ್ಗದ ಮಲೆನಾಡಿನಲ್ಲೋರ್ವ ಸೋನು ಸೂದ್ ಎಂದರೆ ತಪ್ಪಾಗಲಾರದು ಈ ಪರಿಚಯದ ಮುನ್ನದಿ, ಮೊನ್ನೆ ತಾನೇ ಸಂಕಷ್ಟದ ಬದುಕುಗಳಿಗೆ ಅನಾನಸ್ ಕೊಟ್ಟು ಪೋಟೋ ಕ್ಲಿಕ್ಕಿಸಿಕೊಂಡು ಟ್ರೋಲ್ ಆದ ಹಾಲಿ ಸಚಿವರೊಬ್ಬರ ಸಹಾಯ ಹಸ್ತದ ಸ್ಟೋರಿ ರಾಜ್ಯದಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ ಇಂತಹ ಸಾಕಷ್ಟು ಹಿರಿಯ ತಲೆಮಾರಿನ ಮುತ್ಸದ್ದಿಗಳು ಕೂಡ ನಾಚುವಂತೆ ಶಿವಮೊಗ್ಗಕ್ಕೆ #ಆಕ್ಸಿಜನ್ ಸರಬರಾಜಿನ ಕೊರತೆ ಇದೆ ಅದನ್ನು ನೀಗಿಸುವ ಸಲುವಾಗಿ ಏನಾದರು ಪ್ರಯತ್ನ ಮಾಡಬೇಕೆಂದು ಕೊಂಡು ಮೆಗ್ಗಾನ್ ನಲ್ಲಿನ ಆಕ್ಸಿಜನ್ ಕೊರತೆಯ ಸುದ್ದಿಯನ್ನು ಈ ಹಿಂದೆ ತಮ್ಮದೆ “ಆಜಾದ್ ಹಿಂದ್” ಯೂಟ್ಯೂಬ್ ಚಾನೆಲ್ನಲ್ಲಿ ಬಿತ್ತರಗೊಳಿಸಿದ್ದ ಇವರು ಮುಂಬೈ ಮೂಲದ “ಯೂನೈಟೆಡ್ ವ್ಹೇ ‘ ಬೆಂಗಳೂರಿನ ಶಾಖಾ ಸಂಸ್ಥೆಯೊಂದಿಗೆ ಸಂಪರ್ಕ ಬಳಸಿ ಶಿವಮೊಗ್ಗಕ್ಕೆ 50 ಆಕ್ಸಿಜನ್ ಸಿಲಿಂಡರ್ ತರಿಸಿ ಜಿಲ್ಲಾಡಳಿತದ ಮೂಲಕ “ಜಿಲ್ಲಾ ಆರೋಗ್ಯ ಇಲಾಖೆ” ಗೆ ಹಸ್ತಾಂತರಿಸಿದ *ಶಿವಮೊಗ್ಗದ ಮಲೆನಾಡಿನಲ್ಲೋರ್ವ ಸೋನು ಸೂದ್ ಜರ್ನಲಿಸ್ಟ್ ಅರವಿಂದ್” ಕುರಿತಾಗಿ ಇಡೀ ಮಲೆನಾಡು ಪ್ರಶಂಸೆ ವ್ಯಕ್ತಪಡಿಸಲೇ ಬೇಕಾಗಿದೆ.
ಮಲೆನಾಡಿನಲ್ಲಿ ಕೋವಿಡ್ ಸೋಂಕಿತರು ಹೆಚ್ಚಾದಂತೆ ಆಕ್ಸಿಜನ್ ಬೇಡಿಕೆ ಕೂಡ ಅದರಂತೆ ಪೂರೈಸಬೇಕಾಗಿತ್ತು. ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆಯು ಏರಿಕೆಯಾಗಿದೆ ಎನ್ನುವ ಹಿನ್ನಲೆಯಲ್ಲಿ ಭದ್ರಾವತಿಯ ವಿಐಎಸ್ಎಲ್ ನಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಘಟಕಗಳು ಆರಂಭಗೊಂಡವಾದರೂ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ (ಆಮ್ಲಜನಕ ) ಪೂರೈಕೆಗಾಗಿ ಅನ್ಯ ಮಾರ್ಗಗಳಿಗೆ ಜಿಲ್ಲಾಡಳಿತ ಚಿಂತನೆ ನಡೆಸಿತ್ತು,
ಇಂತಹ ವಿಷಮ ಸಂದರ್ಭಗಳಲ್ಲಿ ರಾಜ್ಯದಲ್ಲಿ ಮೆಡಿಕಲ್‌ ಆಕ್ಸಿಜನ್‌ ಉತ್ಪಾದಿಸಿ ಪೂರೈಸುತ್ತಿರುವ ಕೆಲ ಕಂಪನಿಗಳು ಒಮ್ಮೆಲೆ ಉತ್ಪಾದನೆಗೆ ಬ್ರೇಕ್ ಹಾಕಿಕೊಂಡಾಗಲೂ ರಾಜ್ಯದಲ್ಲಿ ಆತಂಕ ಮಡುಗಟ್ಟಿತ್ತು ಈ ಎಲ್ಲಾ ಹಿನ್ನಲೆಯಲ್ಲಿಯೇ ಚಾಮರಾಜನಗರದ ಆಕ್ಸಿಜನ್ ದುರಂತಕ್ಕೆ ಅಸಮರ್ಪಕ ನಿರ್ವಹಣೆಯೇ ಕಾರಣವಾಯಿತು.
ಈ ದುರಂತದ ತನಿಖೆಯೂ ನಡೆದು ಮೇ 2ರಂದು ರಾತ್ರಿ 10.30ರ ಹೊತ್ತಿಗೆ ‌ಆಸ್ಪತ್ರೆಯಲ್ಲಿ ಆಮ್ಲಜನಕವೇ ಲಭ್ಯವಿರಲಿಲ್ಲ ಎಂದು ತನಿಖಾ ವರದಿ ಈಗಾಗಲೇ ತಿಳಿಸಿದೆ, ಇದರಿಂದ ರಾಜ್ಯದ ಮುಖ್ಯಮಂತ್ರಿಗಳು ಮೃತ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ ಪರಿಹಾರವನ್ನು ಘೋಷಣೆ ಮಾಡಿದ್ದಾರೆ,
*ಮೊದಲು ದುರಂತ, ನಂತರ ತಜ್ಞರ ವರದಿ, ತದನಂತರ ಪರಿಹಾರ ಘೋಷಣೆ, ಇಂತಹ ಎಲ್ಲಾ ಬೆಳವಣಿಗೆಗಳ ಆರಂಭದಲ್ಲಿಯೇ ನಟ “ಸೋನು ಸೂದ್” ಆಕ್ಸಿಜನ್ ಪೂರೈಸಲು ಮುಂದಾದರು. ಇಲ್ಲಿ ಈ ಸಂಗತಿಯನ್ನು ಒಂದಿಷ್ಟು ತಿಳಿಸುವುದಕ್ಕೂ ಕಾರಣವಿದೆ,*
ಆರ್ಥಿಕ ತೊಳಲಾಟಗಳ ನಡುವೆ ಬದುಕು ಕಟ್ಟಿಕೊಂಡಿರುವ ಅರವಿಂದ್.ಡಿಪಿ ಓರ್ವ ಕ್ರಿಯಾಶೀಲ ಸಾಮಾಜಿಕ ತುಡಿತಗಳೊತ್ತ ಯುವ ಪತ್ರಕರ್ತ ಎಂದೇ ಹೇಳಬಹುದು ನಾನು ಕೂಡ ಅವರೊಂದಿಗೆ ಮಾತನಾಡುವಾಗ ಅಂತಹದೊಂದು ಕಾಳಜಿಯನ್ನು ಗಮನಿಸಿದ್ದೇನೆ, ಕೋಟಿ -ಕೋಟಿ ಕಂತೆಗಳಿಟ್ಟುಕೊಂಡು ವೈಟ್ ಕಾಲರ್ಗಳಾಗಿ ಇನ್ನಿಲ್ಲದ ಡೀಲಿಂಗ್ ವರಾತಗಳಲ್ಲಿರುವ ಬಹುತೇಕ ಸಾಮಾಜಿಕ ಸೋಗಿನ ವ್ಯಾಘ್ರಿಗಳನ್ನು ನೋಡಿದಾಗ ಅರವಿಂದ್.ಡಿಪಿ ಅಗ್ರಮಾನ್ಯರಾಗಿ ಕಾಣಸಿಗುತ್ತಾರೆ. ಬಡವರ ಕಷ್ಟ ಬಡವರಿಗೆ ಗೊತ್ತಾಗುತ್ತದೆ ಎನ್ನುವ ಮಾತು ಇವರು ಅಕ್ಷರಶಃ ಸಮಾಜಕ್ಕೆ ಸೇವಾಮುಖಿಯಾಗಿ ತಿಳಿಸಲೊರಟಿದ್ದಾರೆ.
ಕಳೆದ ಇಪ್ಪತ್ತು ವರುಷಗಳಿಂದ ಮಲೆನಾಡಿನ ಹೆಬ್ಬಾಗಿಲಿನ ಶಿವಮೊಗ್ಗದಲ್ಲಿ ಅಗ್ರಮುಖಿಯಾಗಿ ಪತ್ರಿಕಾ ಸೇವೆ ಸಲ್ಲಿಸುತ್ತಿರುವ ಅರವಿಂದ್.ಡಿಪಿ ಮೊದಲು #ಟಿವಿ-9 ನಲ್ಲಿ ಕ್ಯಾಮೆರಮೆನ್ ಹಾಗೂ ವರದಿಗಾರರಾಗಿ ನಂತರ ರಾಜ್ ನ್ಯೂಸ್ ಚಾನೆಲ್ನಲ್ಲಿ ವರದಿಗಾರರಾಗಿ, ತನ್ನದೇ ಆದ “ಆಜಾದ್ ಹಿಂದ್” ಯೂಟ್ಯೂಬ್ ಚಾನೆಲ್ ಆರಂಭಿಸಿ ಸಾಕಷ್ಟು ಸಂಗತಿಗಳ ಸುದ್ದಿಯಲ್ಲಿ ರಚನಾತ್ಮಕವಾಗಿ ಸದ್ದಿಟ್ಟಿದ್ದ ಇವರು ಅಸಡ್ಡೆಗೆ-ತಾತ್ಸಾರತೆಗೆ, ತೇಜೋವಧೆಗೆ ಗುರಿಯಾಗುತ್ತಾರೆ, ಆದರೂ ಇಂತಿವುದರ ವಿಕೃತ ಬೆಳವಣಿಗೆಯ ದಾಳಿಯನ್ನು ಕೂಡ ನಗುತ್ತಲೇ ಸ್ವೀಕರಿಸಿ ತನ್ನ ಕ್ರಿಯಾಶೀಲತೆಗೆ ಗೋರಿ ಕಟ್ಟಿಕೊಳ್ಳದೆ ಕೋಟೆ ಕಟ್ಟುವ ಕೈಂಕರ್ಯಕ್ಕೆ ಮುಂದಾಗುತ್ತಾರೆ.
ಇದು ಕೆಲವರಿಗೆ ಸಹಿಸಲಾಸಾಧ್ಯವಾಗಿ ವಾಮಮಾರ್ಗದಿ ಅರವಿಂದ್.ಡಿಪಿಯವರ ಮೇಲೆ ಆರೋಪಗಳ ಸುರಿಮಳೆಗೈದು ಪತ್ರಿಕಾ ಬದುಕಿನ ಕೊಂಡಿಗಳಿಗೆ ಕಡಿವಾಣ ಹಾಕುವ ವಿಫಲ ಯತ್ನದಿ ಮಿಂದೇಳುತ್ತಾರೆ, ಇಂತಿವುಗಳನ್ನು ಹೇಳುವ ಹೊತ್ತಲ್ಲವಾದರೂ ಇಲ್ಲಿ ಉಲ್ಲೇಖಿಸುವ ಅಗತ್ಯತೆ ಇದೆ ಎನ್ನುವ ಕಾರಣಕ್ಕೆ ಇಲ್ಲಿ ಲಗತ್ತಿಸಿದ್ದೇನೆ.
ಅರವಿಂದ್.ಡಿಪಿಯವರು ತಮ್ಮ ಮೇಲಿನ ಎಲ್ಲಾ ತುಳಿತಗಳು ತಮ್ಮ ಕೆಲ ಸಹುದ್ಯೋಗಿಗಳಿಂದಲೇ ನಡೆಯುತ್ತಿದೆ ಎನ್ನುವುದು ಗೊತ್ತಿದ್ದರೂ ಇದನ್ನು ಸಹಿಸಿಕೊಂಡರಾದರೂ ಎಂದಿಗೂ ಅಂತಹವರ ವಿರುದ್ದ ಸಿಡಿದೇಳಲಿಲ್ಲ ಬದಲಿಗೆ ಮೌನವಹಿಸಿ ತಮ್ಮ ಮಾಧ್ಯಮದ ಕೈಂಕರ್ಯದಡಿ ಮತ್ತಷ್ಟು ಸಮಯವನ್ನು ಮೀಸಲಿಡುತ್ತಾರೆ, ಇದನ್ನು ಪರಾಂಭರಿಸಿದಾಗ ಸಹಿಸಿಕೊಳ್ಳುತ್ತಾರೆ ಎಂದು ಮತ್ತೆ-ಮತ್ತೆ ತುಳಿಯುವಿಕೆಯ ಕುತಂತ್ರವೆಸಗುವುದು ಸಮಂಜಸವಾದುದ್ದಲ್ಲ, ಸಹಿಸುವಿಕೆ ಎಂದಿಗೂ ದೌರ್ಬಲ್ಯವೆಂದು ತಿಳಿಯಗೂಡದು, ಸಿಡಿದೆದ್ದು ಸೆಡ್ಡು ಹೊಡೆಯುವುದಕ್ಕೆ ಒಂದೆ ಹೆಜ್ಜೆ, ಎನ್ನುವುದನ್ನೂ ಕೂಡ ಮರೆಯಕೂಡದು.
ಇರಲಿ ಇಂತಹ ಅನೇಕತೆಗಳ ನಡುವೆ ಬಿಸಿಗಂಬನಿಗಳನ್ನು ತುಂಬಿಕೊಂಡೇ ದೃಶ್ಯ ಮಾಧ್ಯಮದಲ್ಲಿ ಮುಂದುವರೆದಿರುವ ಅರವಿಂದ್.ಡಿಪಿ ಜ್ವಾಲಾಮುಖಿಯನ್ನೇ ಎದೆಮಾನಸದಲ್ಲಿಟ್ಟು ಮಸ್ತಿಷ್ಕದ ಶಾಂತಿಯಿಂದ ತಣಿಸಲೊರಟ ಯುವ ಪತ್ರಿಕಾ ಕಿಡಿ, ಪ್ರತಿ ಕ್ಷಣಗಳಲ್ಲೂ ಯಾವ ಬೇದಗಳಿಲ್ಲದೆ ಸಾಮಾಜಿಕ ನ್ಯಾಯ ಬಯಸುವವರ ಮೇಲೆ ಸಲ್ಲದ ವಿಕೃತದಾಳಿಗಳು ಎಂದಿಗೂ ಆಗಬಾರದು ಎನ್ನುವ ವಿವರಣೆಯನ್ನು ಅವರ ಪತ್ರಿಕಾ ಬದುಕಿನ ನಡುವಿನ ಬೆಳವಣಿಗೆಯನ್ನು ತಿಳಿಸಿ ಕೋವಿಡ್-19 ಭಾರತಕ್ಕೆ ಬಂದ 2020ರ ಮೊದಲ ವರುಷದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊಬೈಲ್ ನಂಬರ್ ಬಿತ್ತರಿಸಿ ಬಡ ಕುಟುಂಬಗಳಿಗೆ ಮೆಡಿಷನ್ ಒದಗಿಸಲು ಮುಂದಾದ “ಸೇವಾ ಏಕಾಂಗಿ”


2021ರ ಈ ಹೊಸ್ತಿಲಲ್ಲಿ ತಮ್ಮ ಪತ್ನಿ ರೂಪಾ.ಪಿ ಹಾಗೂ ಪುತ್ರ ಸುಜೀತ್ ಎ ಡೋಯಿಜಡೆ ಪರಿವಾರದೊಂದಿಗೆ ಸೇರಿ ಶಿವಮೊಗ್ಗದ ಮಂಗಳಮುಖಿಯರಿಗೆ “ಪುಡ್ ಕಿಟ್” ನೀಡಿ ಪತ್ರಿಕಾ ಹಾಗೂ ಸಾರ್ವಜನಿಕ ವಲಯದ ಚಿತ್ತ ಸೆಳೆದ ಅರವಿಂದ್.ಡಿಪಿ ನಿಜಕ್ಕೂ ಅಂತರ್ಮುಖಿಯಲ್ಲಿ ಧ್ಯಾನಸ್ತ ಭಾವನ್ಮುಖಿ, ಒಮ್ಮೊಮ್ಮೆ ಅವರೊಂದಿಗೆ ಮಾತಾಡುವ ಪ್ರತಿ ಅವಸರದಲ್ಲಿಯೂ ಬಿಸಿಗಂಬಿನಿಗಳು ನೆಲಕ್ಕೆ ತೊಟ್ಟಿಕ್ಕುವುದು ನೋಡಿ ಮನಸು ಭಾವನಾತ್ಮಕವಾಗಿ ಅವರನ್ನು ಸಾವಧಾನಿಸಿದೆ.
ಬಿದ್ದರೆ ಕಲ್ಲು ತೂರುವ ಅನೇಕ ಮಂದಿಗಳ ನಡುವೆ ತೂರಿ ಬಂದ ಕಲ್ಲುಗಳಲ್ಲಿ ಗೋರಿ ಕಟ್ಟಿಕೊಳ್ಳದೆ ಕೋಟೆ ಕಟ್ಟಿ ವಿರಾಜಿಸಬೇಕಾದ ಅನಿವಾರ್ಯತೆಗಳಿವೆ, ಅವಕಾಶವಾದಿಗಳ ಎಸೆವ ಪ್ರತಿ ಕಲ್ಲು ತಮ್ಮ ಬದುಕಿಗೆ ಮೆಟ್ಟಿಲಾಗಬೇಕು, ಹುಟ್ಟಿದ್ದೇವೆ ನಿಜ ಸಾವು ಖಂಡಿತ ಎಂತಹುದೇ ಕ್ಲಿಷ್ಟಕರ ಸಂದರ್ಭಗಳೇ ಎದುರಾಗಲಿ ಅದೆಂತಹ ರಕ್ಕಸ ಶಕ್ತಿಗಳೇ ಎದುರಾಗಲಿ ಅದರ ವಿರುದ್ದ ತಾಳ್ಮೆ-ಜಾಣ್ಮೆಯಿಂದ ಕಾನೂನಾತ್ಮಕವಾಗಿ ಮಣಿಸಿ ಬದುಕಿನಲ್ಲೊಂದು ಇತಿಹಾಸ ಬರೆಯಬೇಕು ಎಂದು ಆಗಾಗ್ಗೆ ಅವರಿಗೆ ತಿಳಿಸುತ್ತಲೇ ಇರುತ್ತೇನೆ,
ಏನೇ ಆಗಲಿ ಅರವಿಂದ್.ಡಿಪಿ ಅಂತಹ ತಾಯಿಹೃದಯಿಯ ತುಡಿತಗಳು ಬಹಳಷ್ಟಿದೆ, ಬಿಟ್ಟರೂ ಬಿಡಲೊಪ್ಪದ ಪತ್ರಿಕಾ ಜಗತ್ತಿನ ನಂಟಿನೊಂದಿಗೆ ಕ್ರಿಯಾಶೀಲತೆಯನ್ನು ಬೆಸೆಯುತ್ತಿರುವುದು ಮೆಚ್ಚುಗೆಯ ಸಂಗತಿಯೇ ಆಗಿದೆ,
ಇಂತಿಷ್ಟರ ಜೊತೆ ಅವರ ಪತ್ರಿಕಾ ಬದುಕು, ಕುಟುಂಬದೊಂದಿಗೆ ಸಾಮಾಜಿಕ ಸೇವೆ, ಕೋರೊನಾ ಈ ಕಾಲದ ಆತಂಕಗಳ ನಡುವೆ ಮತ್ತಷ್ಟು ಪತ್ರಿಕಾ ಅಭಿವ್ಯಕ್ತಿಯನ್ನು ಗಟ್ಟಿಗೊಳಿಸುತ್ತಿರುವ ಅರವಿಂದ್.ಡಿಪಿ ರವರು “ಯೂನೈಟೆಡ್ ನ್ಯೂಸ್” ಚಾನೆಲ್ ನ ವರದಿಗಾರಿಕೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.
ಇನ್ನೂ ಒಂದು ಸಂಗತಿಯಲ್ಲಿ ಅಚ್ಚರಿ ಹಾಗೂ ಇಡೀ ಮಲೆನಾಡು ಓರ್ವ ಪತ್ರಕರ್ತನ ಹೆಜ್ಜೆಯನ್ನು ಶ್ಲಾಘಿಸಲೇಬೇಹಾಗಿದೆ ಇಂದು ಮಂಗಳವಾರ ಜೂನ್-15 ಬೆಳಿಗ್ಗೆ ಅರವಿಂದ್.ಡಿಪಿ ಪೋನ್ ಮಾಡಿ ಎಲ್ಲಿದ್ದೀರಾ..? ಕೇಳಿದರು, ನಾನು ಬೆಳಿಗ್ಗೆಯೇ ಪತ್ರಿಕೆಗಳ ಹಂಚಿಕೆದಾರರ ಬಳಿ ಮಾತಾಡುತ್ತಿದ್ದೇ ಸರ್ ಈ ಕೂಡಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಬನ್ನಿ ಎಂದರು, ಅವರ ಅವಸರವಸರವಾದ ಕರೆಗೆ ಓಗೊಟ್ಟಿ ಹೋದೆ, ಅಲ್ಲೊಂದು ಮುಂಬೈ ಮೂಲದ ಲಾರಿ ಬಂದು ನಿಂತಿತ್ತು, ಅದರೊಳಗೆ 50 ಆಕ್ಸಿಜನ್ ಸಿಲಿಂಡರ್ ಗಳಿದ್ದವು, ಸರ್ ಇದನ್ನು ಜಿಲ್ಲಾಡಳಿತಕ್ಕೆ ನೀಡಬೇಕಿದೆ ಎಂದರು ನಂತರವೇ ಗೊತ್ತಾಗಿದ್ದು ಶಿವಮೊಗ್ಗಕ್ಕೆ “ಆಕ್ಸಿಜನ್’ ಕೊರತೆ ಇದೆ ಎಂದು ಇವರು ಮಾಡಿದ ಸುದ್ದಿ ಹಾಗೂ ಇವರೊಂದಿಗೆ ನಡೆಸಿದ ಒಂದಿಷ್ಟು ಮಾತುಕತೆಯ ಮುಖೇನ “ಯೂನೈಟೆಡ್ ವ್ಹೇ” ಸಂಸ್ಥೆಯವರು ರಾಜ್ಯಕ್ಕೆ ಮೂರು ಕಡೆ 150 ಮೆಡಿಕಲ್ ಆಕ್ಸಿಜನ್ ಸಿಲಿಂಡರ್ ಒದಗಿಸಿದ್ದು ಅದರಲ್ಲಿ 50 ಆಕ್ಷಿಜನ್ ಸಿಲಿಂಡರ್ ಗಳನ್ನು ಪತ್ರಕರ್ತರಾದ ಅರವಿಂದ್.ಡಿಪಿ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾಡಳಿತಕ್ಕೆ ನೀಡಿರುವುದು ನೋಡಿ ಅಚ್ಚರಿಯೂ ಆಯಿತು ಅಲ್ಲದೆ ಕುತೂಹಲವೂ ಮೂಡಿತ್ತು,
ಅದನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನೀಡುವ ಮಹತ್ತರವಾದ ಕೆಲಸದಲ್ಲಿ ನನ್ನ ಕರೆದು ಪಾಲ್ಗೊಳ್ಳುವಂತೆ ಅವಕಾಶ ಮಾಡಿದ್ದಕ್ಕೆ ಅರವಿಂದ್.ಡಿಪಿರವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಜೊತೆಯಲ್ಲಿ ಶಿವಕುಮಾರಯ್ಯ ಮಾರವಳ್ಳಿ ರಂಗಕರ್ಮಿಗಳು ಜತೆಯಾಗಿ ಅವರು ಕಣ್ಣು ತೇವಿಸಿಕೊಂಡಿದ್ದು ಎಂದಿಗೂ ಮರೆಯುವಂತಿಲ್ಲ, ಸೇವೆ ಎನ್ನುವುದು ಈ ಹೊತ್ತಿನ ಮಾನವೀಯ ನೆಲಗಟ್ಟಿನಲ್ಲಿ ಭದ್ರಗೊಳಿಸುತ್ತಲೇ ಇರಬೇಕಾದ ಈ ಕೋವಿಡ್ ಕಾಲಮಾನದಲ್ಲಿ ಪತ್ರಕರ್ತ ಅರವಿಂದ್.ಡಿಪಿ ಪ್ರಯತ್ನ ಫಲಿಸಿದೆ ಅಲ್ಲದೆ ಸಾಕಷ್ಟು ರಾಜಕಾರಣಿಗಳ ಎರಡು ಮೀಟರ್ ಬಿಳಿ ಖಾದಿಬಟ್ಟೆಗೆ ಕಲೆ ಬಿದ್ದಂತಾಗಿದೆ,
ಶಹಬ್ಬಾಸ್ ಅರವಿಂದ್ ನಿಮ್ಮ ಸೇವೆಗೆ ಸಾಮಾಜಿಕ ಸಲಾಂ ಇರುತ್ತದೆ, ಆಕ್ಸಿಜನ್ ಕೊರತೆ ನೀಗಿಸುವಿಕೆಯ ಬಲು ದೊಡ್ಡ ಜವಾಬ್ದಾರಿಯಲ್ಲಿ ಯಾವ ಪತ್ರಕರ್ತನು ಮಾಡಲಾರದ ಸಂಪರ್ಕ ಬಳಸಿ, ಶಿವಮೊಗ್ಗಕ್ಕೆ “ಯೂನೈಟೆಡ್ ವ್ಹೇ” ಸಂಸ್ಥೆಯ ಮೂಲಕ ಪೂರೈಸಲು ಮುಂದಾದ ನಿಮ್ಮ ಸಾಮಾಜಿಕ ಪ್ರೀತಿ-ಶ್ರದ್ದೆಗೆ ಶರಣು ಎನ್ನಬೇಕಿದೆ.
ಪತ್ರಕರ್ತರು ಸುದ್ದಿ ಮಾಡುವುದಷ್ಟೆ ಅಲ್ಲ ಅದ್ಯಾವ ಸಂಕಷ್ಟ ಎದುರಾದರೂ ಸರಿ ಸೇವೆಗೂ ಬದ್ದರಾಗಿರುತ್ತೇವೆ ಎಂದು ಇಂದು ಜಿಲ್ಲಾಡಳಿತಕ್ಕೆ 50 ಮೆಡಿಸನ್ ಆಕ್ಸಿಜನ್ ಸಿಲಿಂಡರ್ ನೀಡಲು ಜೀವಪರ ಸೇತುವೆಯಾದ ಇವರನ್ನು *ಶಿವಮೊಗ್ಗದ ಮಲೆನಾಡಿನಲ್ಲೋರ್ವ ಸೋನು ಸೂದ್ ಜರ್ನಲಿಸ್ಟ್ ಅರವಿಂದ್” ಎಂದು ಈ ಸಂದರ್ಭದಲ್ಲಿ ಹೇಳಬೇಕಾಗುತ್ತದೆ,
ದೇಶದಲ್ಲಿ ಬಹಳ ದೊಡ್ಡಮಟ್ಟದ ಸೇವೆ ಸಲ್ಲಿಸುತ್ತಿರುವ ನಟ ಸೋನು ಸೂದ್ ರವರ ಮಾನವೀಯ ಹೆಜ್ಜೆಗಳು ಶಾಸನವಾಗಿದ್ದು ಅದರಂತೆ ತನ್ನ ಬಳಿ ಆರ್ಥಿಕಬಲ ಇಲ್ಲದಿದ್ದರೂ ಮನೋಬಲದೊಂದಿಗೆ ಆಕ್ಸಿಜನ್ ಪೂರೈಕೆಗೆ ಸುದ್ದಿ ಬರೆದು ಸೇವೆಯ ಮುಖೇನ ಸಾಬೀತುಗೊಳಿಸಿದ ಇವರ ಕುರಿತಾಗಿ ಯಾವ ಉತ್ಪ್ರೇಕ್ಷೆ ಇಲ್ಲದೆ *ಶಿವಮೊಗ್ಗದ ಮಲೆನಾಡಿನಲ್ಲೋರ್ವ ಸೋನು ಸೂದ್ ಜರ್ನಲಿಸ್ಟ್ ಅರವಿಂದ್” ಎಂದೇ ಇಲ್ಲಿ ಉವಾಚಿಸಲು ಇಚ್ಚಿಸುತ್ತೇನೆ.
*ಒಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಆರೋಗ್ಯ ಇಲಾಖೆಯಲ್ಲಿ ದಾಸ್ತಾನುಗೊಳಿಸಿ ಆಕ್ಸಿಜನ್ ಬಡಜೀವಗಳ ಉಳಿಸಲು ಇಂದಿನಿಂದ ನೆರವಾಗಲಿದೆ, ಆಕ್ಸಿಜನ್ ಪೂರೈಕೆ ಸಾಧ್ಯತೆಗಳಿದ್ದರೂ ಸಿಲಿಂಡರ್ ಕೊರತೆಯನ್ನು ಕೂಡ ಒಂದು ಹಂತದಲ್ಲಿ ನಿವಾರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿ ಸಾಮಾಜಿಕ ಸೇವೆಗೆ ಸೇತುವೆಯಾದ ಮಾನವೀಯ ಮಿಡಿತದ *ಶಿವಮೊಗ್ಗದ ಮಲೆನಾಡಿನಲ್ಲೋರ್ವ ಸೋನು ಸೂದ್ ಜರ್ನಲಿಸ್ಟ್ ಅರವಿಂದ್* ರವರಿಗೆ ಎದೆನಮನಗಳನ್ನು ನಾಗರೀಕರು ತಿಳಿಸಲಿ ಎನ್ನುವುದು ಅಂಬೋಣವಾಗಿದೆ.*
-ಗಾರಾ.ಶ್ರೀನಿವಾಸ್

Leave a Reply

Your email address will not be published. Required fields are marked *