ಗೌರಿ ಗಣೇಶ ಹಬ್ಬದ ಪ್ರಯುಕ್ತ ಜಿಲ್ಲೆಯಲ್ಲಿ ಶಾಂತಿ
ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೆ.10, 12, 14 ರ
ಬೆಳಿಗ್ಗೆ 6 ರಿಂದ ಮರುದಿನ ಬೆಳಿಗ್ಗೆ 6 ರವರೆಗೆ ಮುಂಜಾಗೃತಾ
ಕ್ರಮವಾಗಿ ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧಿಸಿ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.
ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅಬಕಾರಿ
ಕಾಯ್ದೆ 1965ರ ಕಲಂ 2(1) ಕಾಯ್ದೆಯಡಿ ಕಾನೂನು ಮತ್ತು
ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಮುಂಜಾಗ್ರತಾ
ಕ್ರಮವಾಗಿ ಸೆ.10 ರ ಬೆಳಿಗ್ಗೆ 6 ರಿಂದ ಸೆ.11 ರ ಬೆಳಿಗ್ಗೆ 6 ರವರೆಗೆ,
ಸೆ.12 ರ ಬೆಳಿಗ್ಗೆ 6 ರಿಂದ ಸೆ.13 ರ ಬೆಳಿಗ್ಗೆ 6 ರವರೆಗೆ, ಸೆ.14 ರ
ಬೆಳಿಗ್ಗೆ 6 ರಿಂದ ಸೆ.15 ರ ಬೆಳಿಗ್ಗೆ 6 ರವರೆಗೆ ಮದ್ಯ ಮಾರಾಟ
ಮತ್ತು ಸರಬರಾಜು ನಿಷೇಧಗೊಳಿಸಲು ಆದೇಶ
ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *