ದಾವಣಗೆರೆ ಸೆ.09
ಗೌರಿ ಗಣೇಶ ಹಬ್ಬ ಆಚರಣೆ ಅಂಗವಾಗಿ ನಗರಾಭಿವೃದ್ಧಿ ಹಾಗೂ
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ಅವರು ನಾಡಿನ ಜನತೆಗೆ
ಶುಭಾಶಯ ಕೋರಿದ್ದಾರೆ.
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಚತುರ್ಥಿ ಹಬ್ಬದ ಶುಭ
ಕಾಮನೆಗಳು. ತಮ್ಮೆಲ್ಲಾ ವಿಘ್ನಗಳನ್ನು ವಿಘ್ನೇಶ್ವರ ದೂರ
ಮಾಡಲಿ, ತಾಯಿ ಶ್ರೀಗೌರಿ ತಮ್ಮೆಲ್ಲ ಇಷ್ಟಾರ್ಥಗಳನ್ನು ಸಿದ್ಧಿಗೊಳಿಸಿ
ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸುವಂತೆ ಆಶೀರ್ವದಿಸಲಿ ಎಂದು
ಪ್ರಾರ್ಥಿಸುತ್ತೇನೆ. ಕೊರೊನಾ ಸೋಂಕು ನಿಯಂತ್ರಣ ಮಾಡಲು
ಎಲ್ಲರೂ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿ, ಆಗಾಗ ಸಾಬೂನಿಂದ ಕೈ
ತೊಳೆದುಕೊಳ್ಳಿ, ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ
ಹಬ್ಬವನ್ನು ಸುರಕ್ಷತೆಯಿಂದ ಆಚರಿಸಿ ಎಂದು ನಗರಾಭಿವೃದ್ಧಿ ಹಾಗೂ
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಅವರು ಶುಭ ಸಂದೇಶದಲ್ಲಿ
ತಿಳಿಸಿದ್ದಾರೆ.
