ಸುರಹೊನ್ನೆ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ಮುಂಭಾಗ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಮ್ಮಿಕೊಂಡಿದ್ದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹೊನ್ನಾಳಿ ತಾಲೂಕಿನ ಕುಂದೂರು ಹಾಗೂ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಸುರಹೊನ್ನೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಅಕ್ಟೋಬರ್ 16 ರಂದು ಸುರಹೊನ್ನೆ ಗ್ರಾಮವನ್ನು ಸುಂದರವಾಗಿ ಸಜ್ಜುಗೊಳಿಸುವ ಮೂಲಕ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡ ಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದ ರೇಣುಕಾಚಾರ್ಯ ಅಂದು ಕಂದಾಯ ಸಚಿವರನ್ನು ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಿದ್ದು, ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಹಕಾರ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈಗಾಗಲೇ ಗ್ರಾಮದ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ಮಾಡಲಾಗಿದ್ದು, ಸರಹೊನ್ನೆ ಗ್ರಾಮವನ್ನು ಅಮೃತ ಯೋಜನೆಗೆ ಸೇರಿಸಲಾಗಿದೆ ಎಂದ ಶಾಸಕರು, ಸುರಹೊನ್ನೆಯಲ್ಲಿ ಕಂದಾಯ ಸಚಿವ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗ ಬೇಕು ಎಂದರು.
ಈಗಾಗಲೇ ಅಧಿಕಾರಿಗಳು ಗ್ರಾಮದ ಎಲ್ಲಾ ಮನೆಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಹಾಲಿಸುವ ಕೆಲಸ ಮಾಡುತ್ತಿದ್ದಾರೆ ಎಂದ ಶಾಸಕರು ನಾಳೆಯಿಂದ ಗ್ರಾಮ ಪಂಚಾಯಿತಿ ಎದುರುಗಡೆ ಇರುವ ಶಾಲೆಯಲ್ಲಿ ಅಧಿಕಾರಿಗಳು ಸ್ಟಾಲ್‍ಗಳನ್ನು ಓಪನ್ ಮಾಡುತ್ತಿದ್ದು ಜನರು ಕುಂದು ಕೊರತೆಗಳನ್ನು ಅಲ್ಲಿ ನೀಡುವಂತೆ ಸೂಚಿಸಿದರು.
ನ್ಯಾಮತಿ ತಾಲೂಕಾಗಿ ಘೋಷಣೆಯಾಗಿದ್ದರೂ ಕಚೇರಿಗಳಿಗೆ ಸೂಕ್ತ ಕಟ್ಟಡಗಳಿಲ್ಲದೇ ಇರುವುದರಿಂದ ಕಂದಾಯ ಸಚಿವರಿಗೆ ಒಂದೇ ಸೂರಿನಡಿ ಎಲ್ಲಾ ಕಚೇರಿಗಳು ಬರುವಂತೆ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಅಕ್ಟೋಬರ್ 16 ರಂದು ಕಂದಾಯ ಸಚಿವರಿಂದ ಘೋಷಣೆ ಮಾಡಿಸಲಾಗುವುದು ಎಂದರು.
ಅಕ್ಟೋಬರ್ 16 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕುಂದೂರು ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದುದ್ದು ನಾಳೆ ಹೊನ್ನಾಳಿಯ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಕುಂದೂರು ಗ್ರಾಮಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.
ಇನ್ನು ಅಕ್ಟೋಬರ್ 19 ರಂದು ನ್ಯಾಮತಿ ಪಟ್ಟಣದಲ್ಲಿ ಸುಮಾರು ವಿವಿಧ ಇಲಾಖೆಗಳ ಸುಮಾರು ನಾಲ್ಕು ಸಾವಿರ ಜನ ಕೊರೊನಾ ವಾರಿಯರ್ಸಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಸುಧಾಕರ್,ಜಿಲ್ಲಾಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂದಸ ಜಿ.ಎಂ.ಸಿದ್ದೇಶ್ವರ್ ಅವರ ಸಮುಖದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ರೇಣುಕಾಚಾರ್ಯ ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಅಂದು ಸಂಜೆ ಅದೇ ವೇದಿಯಲ್ಲಿ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ತಹಶೀಲ್ದಾರ್ ತನುಜಾ ಟಿ ಸವದತ್ತಿ, ಉಪತಹಶೀಲ್ದಾರ್ ನಾಗರಾಜ್, ಗ್ರಾ.ಪಂ.ಅಧ್ಯಕ್ಷ ಹಾಲೇಶಪ್ಪ, ಉಪಾದ್ಯಕ್ಷೆ ರುಕ್ಷ್ಮೀಣಮ್ಮ ಸೇರಿದಂತೆ ಗ್ರಾ.ಪಂ.ಸದಸ್ಯರುಗಳು ಗ್ರಾಮದ ಮುಖಂಡರಾದ ಎಚ್.ಸಿದ್ದಲಿಂಗಪ್ಪ, ಈಶ್ವರಪ್ಪ,ಗಣೇಶಪ್ಪ, ಸದಾಶಿವಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.