ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಡಾ.ಮಹೇಶಿ ಜೋಶಿ
ಅವರು ಜ. 02 ರಂದು ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ
ಕೈಗೊಳ್ಳಲಿದ್ದಾರೆ.
ಜ.02 ರಂದು ಮಧ್ಯಾಹ್ನ ಚಿಕ್ಕಮಗಳೂರುನಿಂದ ಹೊರಟು ಸಂಜೆ
5.30ಕ್ಕೆ ದಾವಣಗೆರೆ ಆಗಮಿಸುವರು. ನಂತರ ಸಂಜೆ 6 ಗಂಟೆಗೆ
ಇಲ್ಲಿನ ಸಿದ್ದಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಜಿಲ್ಲೆ ಸಮಾಚಾರ
ದಿನಪತ್ರಿಕೆ ಬಳಗ ವತಿಯಿಂದ ಹಮ್ಮಿಕೊಂಡಿರುವ 2021ರ ವರ್ಷದ
ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವರು.
ರಾತ್ರಿ 8 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಆಪ್ತ
ಕಾರ್ಯದರ್ಶಿ ತಿಳಿಸಿದ್ದಾರೆ.
