ಹೊನ್ನಾಳಿ ಪ್ರಬ್ರವರಿ 21 ಪಟ್ಟಣದಲ್ಲಿರುವ ಪುರಸಭೆ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯನ್ನು ಕರೆದ ಶಾಸಕರಾದ ಎಂಪಿ ರೇಣುಕಾಚಾರ್ಯ.
ಸಭೆಯನ್ನು ಉದ್ದೇಶಿಸಿ ಎಂಪಿ ರೇಣುಕಾಚಾರ್ಯರು ಅವರು ಮಾತನಾಡಿ ದಿಡೀರನೆ ಸಭೆಯನ್ನು ಕರೆದು ಉದ್ದೇಶ, ಪುರಸಭೆಯ ಮುಖ್ಯ ಅಧಿಕಾರಿ ಮತ್ತು ಪುರಸಭೆ ಅಧಿಕಾರಿ ಸಿಬ್ಬಂದಿ ವರ್ಗದವರು ಸರಿಯಾಗಿ ಕೆಲಸ ಮಾಡದೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸರಿಯಾದ ಸಮಯಕ್ಕೆ ಕೆಲಸವನ್ನು ಮಾಡಿ ಕೊಡುತ್ತಿಲ್ಲ ಎಂದು ದೂರು ಬಂದಿರುವ ಹಿನ್ನೆಲೆಯಲ್ಲಿ ಇಂದು ಪುರಸಭೆಯ ಎಲ್ಲ ಸರ್ವ ಸದಸ್ಯರ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಯಿತು ಎಂದರು.
ಸಾರ್ವಜನಿಕರು ಪುರಸಭೆಯ ಮುಖ್ಯಾಧಿಕಾರಿ ಇ ,ಸ್ವತ್ತು ,ಬೇಗನೆ ಕೊಡುತ್ತಿಲ್ಲ ಎಂದು ಹಲವಾರು ದೂರುಗಳು ಬಂದಿವೆ. ಅವರು ಇ, ಸ್ವತ್ತು ಕೊಡುವುದಾದರೆ ಯಾರು ಹೆಚ್ಚಿಗೆ ಹಣವನ್ನು ಕೊಡುತ್ತಾರೋ ಅವರಿಗೆ ಬೇಗನೆ ಇ ಸ್ವತ ಸಿಗುತ್ತದೆ.

ನಾವುಗಳು ಪುರಸಭೆ ಸದಸ್ಯರು ಆಗಿರುವುದು ಸಾರ್ವಜನಿಕರ ಕೆಲಸವನ್ನು ಮಾಡಲಿಕ್ಕೆ ನಮ್ಮನ್ನು ಆಯ್ಕೆ ಮಾಡಿದ್ದಾರೆ .ಆದರೆ ಪುರಸಭೆ ಅಧ್ಯಕ್ಷರು ಮಾತನ್ನೇ ಈ ಮುಖ್ಯಾಧಿಕಾರಿ ಕೇಳುತ್ತಿಲ್ಲ ಅನ್ನುವುದಾದರೆ ,ನಾವು ಸದಸ್ಯರಾಗಿ ಕೆಲಸ ಮಾಡಲಿಕ್ಕೆಸಾಧ್ಯವೇ ಇಂತಹ ಅಧಿಕಾರಿ ದುರ್ವರ್ತನೆ ಇಂದ ನಮಗೆ ಸಾರ್ವಜನಿಕರು ಶಾಪವನ್ನು ಹಾಕುತ್ತಿದ್ದಾರೆ ಎಂದು ಆಡಳಿತ ಪಕ್ಷದ ಬಿಜೆಪಿ ಸದಸ್ಯರುಗಳೆ ಶಾಸಕರಾದ ಎಂಪಿ ರೇಣುಕಾಚಾರ್ಯ ಅವರ ಎದುರುಗಡೆನೇ ಅಸಮಧಾನದಿಂದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಸರ್ವ ಸದಸ್ಯರುಗಳ ಪ್ರಶ್ನೆಗೆ ಶಾಸಕರಾದ ಎಂಪಿ ರೇಣುಕಾಚಾರ್ಯ ರವರು ಮುಖ್ಯಾಧಿಕಾರಿಯಾದ ಪಂಪಾಪತಿ ನಾಯಕ್ ರವರಿಗೆ ನೀನು ಸರಿಯಾಗಿ ಕೆಲಸ ಮಾಡಲಿಕ್ಕೆ ಇಷ್ಟ ಇಲ್ಲ ಅನ್ನುವುದಾದರೆ ವರ್ಗಾವಣೆಯನ್ನು ಮಾಡಿಸಿಕೊಂಡು ಹೋಗು ಎಂದು ತರಾಟೆ ತೆಗೆದುಕೊಂಡರು. ಆದರೂ ಮುಖ್ಯ ಅಧಿಕಾರಿ ತುಟಿ ಬಿಚ್ಚದೆ ಸುಮ್ಮನೆ ಇದ್ದಿದ್ದು ,ಜಾಣ ಕುರುಡುತನ ಪ್ರದರ್ಶಿಸಿದರು. ಪುನಹ ಮತ್ತೆ ಶಾಸಕರು ಮಾತನಾಡಿ ಇನ್ನು ಮುಂದೆ ಪುರಸಭೆಯ ಅಧ್ಯಕ್ಷರು ಎಲ್ಲಾ ಸರ್ವಸದಸ್ಯರ ಗಳ ಗಣನೆಗೆ ತೆಗೆದುಕೊಂಡು ಸಾರ್ವಜನಿಕ ರಿಗೆ ತೊಂದರೆಯಾಗದಂತೆ ಕೆಲಸಗಳನ್ನು ಮಾಡಿಕೊಂಡು ಹೋಗು ಎಂದು ಎಚ್ಚರಿಸಿದರು.
ಉಪಸ್ಥಿತಿಯಲ್ಲಿ ಎಂ ಪಿ ರೇಣುಕಾಚಾರ್ಯ ಶಾಸಕರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ,ಹಾಗೂ ಪುರಸಭೆಯ ಅಧ್ಯಕ್ಷರಾದ ಹೋಬಳಿದಾರ್ ಬಾಬು ,ಉಪಾಧ್ಯಕ್ಷರಾದ ರಂಜಿತ ಚೆನ್ನಪ್ಪ ,ಪುರಸಭೆಯ ಸದಸ್ಯರುಗಳಾದ ರಂಗಪ್ಪ ಕೆವಿ ಶ್ರೀಧರ, ಬಾವಿಮನಿ ರಾಜಪ್ಪ ಸತೀಶ್ ಕೋಳಿ, ಕಾಂಗ್ರೆಸ್ ಸದಸ್ಯರುಗಳಾದ ಸುರೇಶ ಎಂ. ರಾಜೇಂದ್ರ, ಧರ್ಮಪ್ಪ ಹಾಗೂ ಪುರಸಭೆಯ ಬಿಜೆಪಿ ಮತ್ತು ಕಾಂಗ್ರೆಸ್ ಸರ್ವ ಸದಸ್ಯರುಗಳು ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.
