ನ್ಯಾಮತಿ.ಪ್ರಸ್ತುತ ಸಮಾಜದಲ್ಲಿ ವಚನಗಳ ಅರಿವು ಬಹು ಮುಖ್ಯ ವಚನ ಎಂದರೆ ಮಾತು ನಾವು ಆಡುವ ಮಾತುಗಳು ಮತ್ತೊಬ್ಬರಿಗೆ ದಾರಿದೀಪ ಅಗಬೇಕೆ ವಿನಃ ದಾರಿ ತಪ್ಪುವ ಮಾತಾಗಿರಬಾರದು ಎಂದು ಬಸವ ತತ್ವ ಪ್ರಚಾರಕ ಸಾಬೀರ್ ಜಯಸಿಂಹ ಅಭಿಪ್ರಾಯ ಪಟ್ಟರು.
ತಾಲೂಕಿನ ಯರಗನಾಳು ಗ್ರಾಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ, ಶ್ರೀ ವೀರಭದ್ರಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಮಹಾ ಶಿವರಾತ್ರಿ ಪ್ರಯುಕ್ತ ‘ಏನಿದು ವಚನ ಸಾಹಿತ್ಯ’ ಎಂಬ ವಿಷಯದ ಕುರಿತು ಬಸವ ತತ್ವ ಪ್ರಚಾರಕ ಆಧುನಿಕ ವಚನಾಕಾರರೂ ಆದ ಸಾಬೀರ್ ಜಯಸಿಂಹರವರು ಕಾರ್ಯಕ್ರಮ ಉದ್ಘಾಟಿಸಿ, ಉಪನ್ಯಾಸ ನೀಡಿದರು.
ಶರಣರನ್ನು ಅರಿಯದವರು ನಿಜ ಶರಣರು ಆಗಲಾರರು ನೋಡಾ ಬಸವ ಪ್ರಿಯ ಜಯ ಸಿಂಹ ಎಂಬ ವಚನದ ಮೂಲಕ ವಚನಗಳ ಬಗ್ಗೆ ವಿವರಿಸಿದರು.
ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ, ಆದಿಯಿಂದಲೂ ಬಸವಣ್ಣನವರ ಅನುಭವ ಮಂಟಪದಲ್ಲೂ ಕೂಡ ವಚನ ಸಾಹಿತ್ಯದ ಅಧ್ಯಯನ ನಾವು ಮಾಡಬಹುದಾಗಿದೆ, ವಚನ ಸಾಹಿತ್ಯ ಎಂಬುವುದು ಜಗತ್ತಿನ ವಿಶಿಷ್ಟವಾದ ಏಕೈಕ ಸಾಹಿತ್ಯವಾಗಿದೆ. ವಚನ ಸಾಹಿತ್ಯ ಹೊಂದಿದಂತಹ ಏಕೈಕ ಭಾಷೆ ನಮ್ಮ ಕನ್ನಡ ಭಾಷೆ ನಮ್ಮ ಕನ್ನಡ ಭಾಷೆಯನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆಯುತ್ತಾರೆ ಎಂದರು.
ಜಗತ್ತಿಗೆ ಮೊದಲು ಸಂಸತ್ತು ನೀಡಿದ್ದು ಬಸವಣ್ಣ ಅದರ ಮೊದಲ ಶೂನ್ಯ ಪೀಠಾಧಿಪತಿ ಅಲ್ಲಮಪ್ರಭು ಶರಣರು ಅಂದಿನ ಅನುಭವ ಮಂಟಪದ ಮಾದರಿಯೇ ಇಂದಿನ ಸಂಸತ್ತು ನಾವೆಲ್ಲರೂ ಇಲ್ಲಿ ಸಮಾನರು, ಬಸವಣ್ಣನವರ ದೃಷ್ಟಿಯಲ್ಲಿ ನಮ್ಮ ದೇಹವೇ ನಮಗೆ ದೇವಾಲಯ ಎಂಬುದು ಆದರೆ ಇವತ್ತು ನಾವು ಮೂಢ ನಂಬಿಕೆಯನ್ನು ಹೆಚ್ಚಾಗಿ ನಾವೇ ಪ್ರಚಾರ ಮಾಡುತ್ತಾ ಬಸವಣ್ಣನವರ ಆಶಯಗಳಿಗೆ ಕೊಡಲಿ ಪೆಟ್ಟು ಕೊಡುತ್ತಿದ್ದೇವೆ, “ಲಿಂಗಾಯತ ಧರ್ಮದಲ್ಲಿ ಬರುವ ಅಷ್ಟಾವರಣಗಳು, ಪಂಚಾಚಾರಗಳು, ಷಟ್ಸ್ಥಲ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು, ಲಿಂಗಾಯತ ಧರ್ಮದಲ್ಲಿ ಏನೇನುಂಟು ಏನೇನಿಲ್ಲ ಎಂಬುದು ನಾವು ವಚನಗಳ ಮೂಲಕ ಅಧ್ಯಯನ ಮಾಡಬಹುದಾಗಿದೆ ಎಂದರು.
ಭಾರತವು ದೇಶ ವಿಶ್ವ ಗುರು ಅಗಬೇಕೆಂದರೆ ಬುದ್ಧ ಬಸವಣ್ಣ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ನಾವು ಮೈಗೂಡಿಸಿಕೊಂಡು ಸಾಗಬೇಕಾಗಿದೆ ಆಗ ಮಾತ್ರ ಭಾರತ ವಿಶ್ವ ಗುರು ಅಗಲಿಕ್ಕೆ ಸಾಧ್ಯ ಎಂದು ಹೇಳಿದರು.
ಇತಿಹಾಸವನ್ನು ಅರಿಯದವರು ಇತಿಹಾಸ ಸೃಷ್ಟಿ ಮಾಡಲಾರರು ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತಿನಂತೆ ನಾವೆಲ್ಲರೂ ನಮ್ಮ ಮೂಲ ಇತಿಹಾಸ ಅರಿತು ನಡೆಯಬೇಕಾಗಿದೆ ಎಂದು ಹೇಳಿದರು ವಚನ ಸಾಹಿತವನ್ನು ಇಂದಿನ ಯುವ ಪೀಳಿಗೆ ಅಧ್ಯಯನ ಮಾಡಬೇಕು ಅದನ್ನು ಸಂಪೂರ್ಣವಾಗಿ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಆಗ ಮಾತ್ರ ಬಸವಣ್ಣನವರ ಆಶಯಗಳನ್ನು ಶರಣರ ಆಶಯಗಳನ್ನು ಪರಿಪೂರ್ಣಗೊಳಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಷಣ್ಮುಖಪ್ಪ ಸಾಲಿ, ಶಿವಯೋಗಿ ಎಂ.ಬಿ, ಶಾಂತವೀರಪ್ಪ, ಭೋಜರಾಜ್, ಮಹೇಶ್ವರಪ್ಪ ಹೆಚ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಶರಣ ಶರಣೆಯರು ಸೇರಿದಂತೆ ಉಪಸ್ಥಿತರಿದ್ದರು.