ಹೊನ್ನಾಳಿಃ- ಇಡೀ ದೇಶದಲ್ಲಿ ಧರ್ಮ-ಜಾತಿಗಳನ್ನು ಒಡೆದು ಛಿದ್ರ ಛಿದ್ರ ಮಾಡಿದ ಪಕ್ಷಗಳು ಇಂದು ದೇಶದಲ್ಲಿ ನಿರ್ನಾಮವಾಗಿವೆ ಇಂದು ಇಡೀ ವಿಶ್ವವೇ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ನಾಯಕ ಎಂದು ಗುರುತಿಸುವಂತಾಗಿದೆ ಎಂದು ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ್ ಹೇಳಿದರು.
ಅವರು ಹೊನ್ನಾಳಿಯ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಹುಟ್ಟುಹಬ್ಬದ ನಿಮಿತ್ತ ಅಗಳ ಮೈದಾನದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಜಾತಿ ರಾಜಕಾರಣ ಮಾಡುತ್ತಿರುವ ಕಾಂಗ್ರೇಸ್ ದೇಶದಲ್ಲಿ ಎಲ್ಲಿದೆ ಎಂದು ಹುಡುಕಬೇಕಾಗಿದೆ ಬಿಜೆಪಿ ಕೋಮುಪಕ್ಷ ಎಂದು ಸುಳ್ಳು ಆರೋಪ ಮಾಡುವವರಿಗೆ ಈ ಹಿಂದೆ ಅಟಿಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಒಬ್ಬ ಕ್ರಿಶ್ಚಿಯನ್ ಜಾರ್ಚ ಫರ್ನಾಂಡಿಸ್ ರಕ್ಷಣಾ ಸಚಿವರಾಗಿದ್ದರು, ಮುಸ್ಲಿಂ ಆದ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದರು ಒಬ್ಬ ಹಿಂದು ಎ.ಬಿ.ವಾಜಪೇಯಿ ಪ್ರಧಾನಿಯಾಗಿದ್ದು ಇದು ಭಾರತದ ಸಂಸ್ಕøತಿ ಮತ್ತು ಶಕ್ತಿಯಾಗಿದೆ ಎನ್ನುವುದನ್ನು ಮರೆಯವಂತಿಲ್ಲ ಎಂದರು.
ಕೇಸರಿ ಪೇಟಕ್ಕೆ ತಲೆ ಬಾಗುವ ದಿನ ಮುಂದೆ ಬರುತ್ತದೆ ಎಂದ ಈಶ್ವರ ಅವರು ಪ್ರದಾನಿ ನರೇಂದ್ರ ಮೋದಿಯವರು ಈ ದೇಶದ ಸಂಸ್ಕøತಿಯ ಅಧಾರದ ಮೇಲೆ ಅಡಳಿತ ನಡೆಸುತ್ತಿರುವ ಕಾರಣ ಇಡೀ ವಿಶ್ವದಲ್ಲೇ ದೇಶ ಗುರುತಿಸುವಂತಾಗಿದೆ ಎಂದು ಹೇಳಿದರು.
ತಾಯಿಯ ಕನಸು ನನಸಾಗಿರುವುದು ನನ್ನ ಪುಣ್ಯಃ- ಹುಟ್ಟುಹಬ್ಬದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯಅವರು ತಾನು ಚಿಕ್ಕವನಿದ್ದಾಗ ತನ್ನ ತಾಯಿ ನನ್ನ ಮಗ ಶಾಸಕನಾಗಿ ವಿಮಾನದಲ್ಲಿ ಓಡಾಡುತ್ತಾನೆ ಎಂದು ಎಲ್ಲರ ಮುಂದೆ ಹೇಳುತ್ತಿದ್ದರು. ಅವರ ಕನಸು ಕ್ಷೇತ್ರದ ಜನತೆಯ ಆಶೀರ್ವಾದÀ ನನಸಾಗಿರುವುದು ನನ್ನ ಪುಣ್ಯ ಎಂದು ಬಾವುಕರಾಗಿ ನುಡಿದರು.
ಗೋಮಾತೆಯ ಉಡುಗೊರೆಃ-ನ್ಯಾಮತಿ ಮತ್ತು ಹೊನ್ನಾಳಿ ಅವಳಿ ತಾಲೂಕುಗಳ ಬಿಜೆಪಿ ಕಾರ್ಯಕರ್ತರು ರೇಣುಕಾಚಾರ್ಯ ಅವರಿಗೆ ಹುಟ್ಟುಹಬ್ಬ ಕಾಣಿಕೆಯಾಗಿ ಗೋಮಾತೆಯನ್ನು ನೀಡಿದರು ಇದನ್ನು ಸ್ವೀಕರಿಸಿದ ಶಾಸಕ ರೇಣುಕಾಚಾರ್ಯ ಅವರು ಗೋಮಾತೆಯನ್ನು ದೇವರೆಂದು ಪೂಜಿಸುವ ಪಕ್ಷ ಬಿಜೆಪಿಯಾಗಿದ್ದು ಕೇಳಿದ್ದನ್ನು ನೀಡುವ ಕಲ್ಪವೃಕ್ಷವಾಗಿರುವ ಗೋಮಾತೆಯನ್ನು ನನಗೆ ಉಡುಗೊರೆಯಾಗಿ ನೀಡಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಅವರು ಆಹೋರಾತ್ರಿ ತನ್ನ ಕ್ಷೇತ್ರದ ಅಭಿವೃದ್ದಿ ಮಂತ್ರವನ್ನು ಜಪಿಸುವ ಜೊತೆಗೆ ಅಂದುಕೊಂಡಿದ್ದನ್ನು ಸಾಧಿಸುವ ಶಾಸಕ ಎಂದರೆ ಆದು ರೇಣುಕಾಚಾರ್ಯ ಮಾತ್ರ ಎಂದು ಹಾಡಿ ಹೊಗಳಿದರು.
ತಾಲೂಕು ಜಿಲ್ಲಾ ಮುಖಂಡರುಗಳು, ಕಾರ್ಯಕರ್ತರು ರೇಣುಕಾಚಾರ್ಯ ದಂಪತಿಗಳನ್ನು ಅದ್ದೋರಿಯಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಹರಿಹರದ ಮಾಜಿ ಶಾಸಕ ಬಿ.ಪಿ. ಹರೀಶ್, ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪ, ದೊಡ ಅಧ್ಯಕ್ಷ ದೇವರಮನೆ ಶಿವಕುಮಾರ್, ಮಾಜಿ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್,ಎಂ.ಆರ್.ಮಹೇಶ್, ಪುರಸಭೆ ಅಧ್ಯಕ್ಷ ಬಾಬೂ ಹೊಬಳದಾರ್, ಮುಖಂಡರಾದ ಶಾಂತರಾಜ್ ಪಾಟೀಲ್, ಎ.ಬಿ.ಹನುಮಂತಪ್ಪ, ಅರಕೆರೆ ನಾಗರಾಜ್,ಕುಬೇಂದ್ರಪ್ಪ, ಸಿ.ಆರ್.ಶಿವಾನಂದ್, ಹೊನ್ನಾಳಿ-ನ್ಯಾಮತಿ ಬಿಜೆಪಿ ಮುಖಂಡರು. ಇದ್ದರು.
ನಂತರ ಬೆಂಗಳೂರು ಕಲಾವಿದರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

Leave a Reply

Your email address will not be published. Required fields are marked *