ಬೇಸಿಗೆ ಶಿಬಿರದಲ್ಲಿ ಮಕ್ಕಳ ವ್ಯಕ್ತಿತ್ವ ಮಾತ್ರ ಅಲ್ಲದೆ ಮನೋವಿಕಸನ ಕೂಡ ಆಗುತ್ತದೆ,ವಿವಿಧ ಶಾಲೆಗಳಿಂದ ಆಗಮಿಸುವ ಮಕ್ಕಳು ವಿಭಿನ್ನ ಶೈಲಿಯನ್ನು ಹೊಂದಿರುವ ಮಕ್ಕಳ ಜೊತೆ ಬೆರತು ಕಲಿಯುವುದರಿಂದ ಮಕ್ಕಳಲ್ಲಿ ಸಾಂ<ಘಿಕ ಜೀವನದ ಅರಿವು ಆಗುತ್ತದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ಪಟ್ಟಣದ ಪಟ್ಟಣದ ಚನ್ನಮಲ್ಲಿಕಾರ್ಜುನ ಹಿರಿಯ ಪ್ರಾಶಾಲೆಯಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಸೇವಾ ಫೌಂಡೇಶನ್ ಹಾಗು ಮಾಸ್ಟರ್ ಕ್ರಿಯೇಟಿವ್ ಲರ್ನಿಂಗ್ ಸಿಸ್ಟಮ್ ವತಿಯಿಂದ ಆಯೋಜಿಸಿದ್ದ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲಿ ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಾರೆ,ಅಲ್ಲಿಯೂ ಸಹ ಪುಸ್ತಕಗಳಿಗೆ ಸಂಬಂಧಪಟ್ಟ ವಿಚಾರಗಳಿಗೇ ಹೆಚ್ಚು ಒತ್ತು ನೀಡುತ್ತಾರೆ,ನನ್ನ ಅಭಿಪ್ರಾಯ ಏನೆಂದರೆ ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ಸಂಸ್ಕಾರ,ಸಮಸ್ಕøತಿ ಹಾಗೂ ಸನ್ಮಾರ್ಗಗಳನ್ನು ಕಲಿಸುವುದಕ್ಕೆ ಹೆಚ್ಚು ಒತ್ತು ನೀಡಬೇಕು,ಸಂಬಂಧಗಳ ಬಗ್ಗೆ,ಜಾನಪದ,ಗ್ರಾಮೀಣ ಕ್ರೀಡೆ,ದೇಶಭಕ್ತಿ ಸೇರಿದಂತೆ ಎಲ್ಲವನ್ನೂ ಮಕ್ಕಳಿಗೆ ಕಲಿಸಿದರೆ ಮಕ್ಕಳು ಸಂಸ್ಕಾರವಂತರಾಗುತ್ತಾರೆ, ಆ ನಿಟ್ಟಿನಲ್ಲಿ ಇಲ್ಲಿಯೂ ಸಹ ಇಂತಹ ವಿಚಾರಗಳಿಗೆ ಹೆಚ್ಚು ಮಹತ್ವ ನೀಡಲಿ ಎಂದರು.
ಇತ್ತೀಚಿಗೆ ಪೋಷಕರು ತಮ್ಮ ಮಕ್ಕಳು ಅತೀ ಹೆಚ್ಚು ಅಂಕ ಗಳಿಸಬೇಕೆಂಬ ಉದ್ದೇಶದಿಂದ ಮಕ್ಕಳಿಗೆ ಒತ್ತಡ ಹಾಕಿ ಓದಿಸುತ್ತಾರೆ,ಇದು ಸಲ್ಲದು ಕೇವಲ ಅಂಕಗಳಿಕೆಯಿಂದ ಏನನ್ನಾ ಸಾಧಿಸಲಾಗುವುದ ಜೊತೆಗೆ ತಮ್ಮ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವೂ ಬೇಕಾಗಿದೆ,ಇದಕ್ಕಾದರೂ ರಜಾ ದಿನಗಳಲ್ಲಿ ಮಕ್ಕಳನ್ನು ಬೇಸಿಗೆ ಶಿಭಿರಕ್ಕೆ ಕಳುಹಿಸಿಕೊಡಿ ಎಂದರು.
ಬಿಆರ್‍ಸಿ ಉಮಾಶಂಕರ್ ಮಾತನಾಡಿ,ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಬುದ್ದಿಯನ್ನು ವೃದ್ಧಿಸುವ ಮೈಂಡ್ ಗೇಮ್ ಎಂದರೆ ತಪ್ಪಾಗಲಾರದು,ಕಲೆ,ಸಂಸ್ಕøತಿಯ ಪರಿಷಯದ ಜೊತೆಗೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಅತೀ ಹೆಚ್ಚು ವಿಚಾರಗಳನ್ನು ತಿಳಿಸುವ ಬೇಸಿಗೆ ಶಿಬಿರಗಳು ಮಕ್ಕಳಿಗೆ ಅತ್ಯವಶ್ಯಕ ಎಂದರು.
ಕೇವಲ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ತಿಳಿಸಿಕೊಡುವ ಜೊತೆಗೆ ದೇಶಭಕ್ತರ ಜೀವನಧಾರೆ,ನಮ್ಮ ದೇಶದ ಇತಿಹಾಸ ಹಾಗೂ ಪರಂಪರೆ,ಆದರ್ಶ ವ್ಯಕ್ತಿಗಳ ಜೀವನ ಪರಿಚಯ,ಗ್ರಾಮೀಣ ಸೊಗಡಿನ ಬದುಕು ಸೇರಿದಂತೆ ವಿವಿಧ ವಿಷಯಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಟ್ಟರೆ ನಮ್ಮ ಹಲವು ಸಂಸ್ಕøತಿ ಹಾಗೂ ಸಂಪ್ರಾದಾಯಗಳ ಪರಿಚಯ ಮಕ್ಕಳಿಗೆ ಆಗುತ್ತದೆ ಎಂದು ಅವರು ತಮ್ಮ ಅನಿಸಕೆಯನ್ನು ವ್ಯಕ್ತಪಡಿಸಿದರು.
ಪುರಸಭಾ ಸದಸ್ಯೆ ಸುಮಾ ಮಂಜುನಾಥ್ ಇಂಚರ ಮಾತನಾಡಿ,ಬೇಸಿಗೆ ಶಿಬಿರಗಳಲ್ಲಿ ಒಬ್ಬ ವಿದ್ಯಾರ್ಥಿ ಪಾಲ್ಗೊಂಡರೆ ಆತನಿಗೆ ಹೊಸ ಸಂಗತಿಗಳ ಅದ್ಯಯನ ಹಾಗೂ ಹೊಸ ಹೊಸ ವಿಚಾರಗಳಿಂದ ವಿದ್ಯಾರ್ಥಿಗಳು ಫ್ರಭಾವಿತರಾಗಿ ಆತನ ವೆಕ್ತಿತ್ವ ವಿಕಸನಕ್ಕೆ ಹೊಸ ವೇದಿಕೆಯಾಗಲಿದೆ, ಆದ್ದರಿಮದ ಪೋಷಕರು ಇಂಥ ಅವಕಾಶಗಳನ್ನು ಬಳಸಿಕೊಂಡು ಶಿಬಿರಗಳಿಗೆ ಕಳುಹಿಸಕೊಡಿ ಎಂದು ಪೋಷಕರಿಗೆ ಕರೆ ನೀಡಿದರು.
ಶಿಕ್ಷಕರಾದ ಹರೀಶ್‍ರಾಜ್,ಪ್ರಶಾಂತ್ ದಿಡಗುರು,ಚಂದ್ರಶೇಕರ್,ಅಶೋಕ್ ಕ್ಯಾತಣ್ಣನವರ್,ಶಂಕರ್,ಮಾಸ್ಟರ್ ಕ್ರಿಯೇಟಿವ್ ಲರ್ನಿಂಗ್ ಸಿಸ್ಟಮ್ ಅಧ್ಯಕ್ಷೆ ಅನಿತಾ ಯೋಗೇಶ್ ಕೋರಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೃತ್ಯುಂಜೆಯ ಪಾಟೀಲ್,ಹೆಲ್ಪಿಂಗ್ ಹ್ಯಾಂಡ್ಸ್ ಸೇವಾ ಫೌಂಡೇಶನ್ ನ ಅಧ್ಯಕ್ಷ ಯೋಗೇಶ್ ಕೋರಿ ಹಾಗೂ ಇತರರು ಉಪಸ್ಥಿತರಿದ್ದರು.