ಹೊನ್ನಾಳಿ,19: ಉದ್ಯೋಗ ಬಯಸುವ ಆಸಕ್ತ ನಿರುದ್ಯೋಗ ಯವಕ-ಯುವತಿಯರು ಹರಿಹರ ಪಂಚಮಸಾಲಿ ಪೀಠದಲ್ಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳ ಸಾನಿದ್ಯದ ಮತ್ತು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆಯುವ ಏ.23 ಮತ್ತು 24 ರ ಬೃಹತ್ ಉದ್ಯೋಗ ಮೇಳದಲ್ಲಿ ವಿದ್ಯಾರ್ಹತೆಯ ದಾಖಲಾತಿಗಳೊಂದಿಗೆ ಪಾಲ್ಗೊಂಡು ಮೇಳದ ಸದುಪಯೋಪಡೆಯುವಂತೆ ಹೊನ್ನಾಳಿ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಪ್ಪ ಹೇಳಿದರು.
ಅವರು ತಾಲೂಕು ಪಂಚಮ ಸಾಲಿ ಸಮಾಜವು ದೊಡ್ಡಪೇಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಪಾಲ್ಗೋಳ್ಳುವ ಪೂರ್ವ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಹಾಗೂ ಉದ್ಯೋಗ ನೀಡು ಎಂಬ ಆಶಾಯದಂತೆ ಐದು ಸಾವಿರ ನಿರುದ್ಯೋಗಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತಿದ್ದು.ಬೆಂಗಳೂರಿನ ಎಂಎಲ್‍ಸಿ ಕಂಪನಿ ಸೇರಿದಂತೆ ನೂರು ಕ್ಕೂ ಹೆಚ್ಚು ವಿವಿಧ ಕಂಪನಿಗಳು ಉದ್ಯೋಗ ಬಯಸುವ ಆಕಾಂಕ್ಷೀಗಳ ಆಯ್ಕೆಯ ಪ್ರಕ್ರೀಯೇ ನಡೆಸಲಿವೆ ಎಂದ ಅವರು ಈ ವಿಷಯವನ್ನು ತಾಲೂಕಿನಾದ್ಯಾಂತ ಪರಿಚಯಸಬೇಕಿದೆ ಎಂದರು.
ತಾಲೂಕು ಪಂಚಸಾಲಿ ಸಮಾಜದ ಗೌರವಧ್ಯಕ್ಷ ಡಾ.ರಾಜಕುಮಾರ ಮಾತನಾಡಿ ಈ ವರ್ಷ ತಾಲೂಕು ಘಕದಿಂದ ಕನಿಷ್ಟ 10 ಜೋಡಿ ಬಡ ಕುಟಂಬಗಳ ಪಂಚಮಸಾಲಿ ಸಮಾಜದ ಮೇ ತಿಂಗಳಲ್ಲಿ ಸಮಾಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ತಿಳಿಸಿ ಇದಕ್ಕೆ ಸಮಾಜವು ಸಹಕರಿಸುವಂತೆ ಮನವಿ ಮಾಡಿದರು.
ಪಂಚಮಸಾಲಿ ತಾಲೂಕು ಯುವ ಘಟಕದ ಅಧ್ಯಕ್ಷ ಸಾಯಿಹಾಲೇಶ್ ಮಾತನಾಡಿ ಉದ್ಯೋಗ ಮೇಳದಲ್ಲಿ ಮುಖ್ಯಮಂತ್ರಿ ಬಸವರಾಜಬೋಮ್ಮಾಯಿ ಸೇರಿದಂತೆ ಸಚಿವ ಮುರುಗೇಶ್ ನಿರಾಣಿ ಭಾಗವಹಿಸುತ್ತಿದ್ದು ಉದ್ಯೋಗ ಮೇಳದ ಜೊತೆ ಯುವಕರಿಗೆ ಕೌಶ್ಯಲ್ಯ ಅಭಿವೃದ್ದಿ ತರಬೇತಿ ಶಿಬಿರವು ನಡೆಯುತ್ತಿದ್ದು ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಹೊನ್ನಾಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಸಿ.ಮೃತ್ಯುಂಜಯ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.ಪಂಚಮಸಾಲಿ ನಗರ ಘಟಕದ ಅಧ್ಯಕ್ಷ ಹೋಟೆಲ್ ಗಿರೀಶ್,ಮುಖಂಡರಾದ ಸೋಮಶೇಖರ,ಕುಂಕುವದ ಹಾಲೇಶ್,ಪಟ್ಟಣಶೇಟ್ಟಿ ವಿಜಯಕುಮಾರ ಇದ್ದರು.

Leave a Reply

Your email address will not be published. Required fields are marked *