ಹೊನ್ನಾಳಿ : ಇತಿಹಾಸದಲ್ಲೆ ಪ್ರಪ್ರಥಮ ಬಾರೀಗೆ ಮಲ್ಲದೇವರಕಟ್ಟೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ದೃಷ್ಟಿಯಿಂದ 29 ಎಕರೆ ಮೀಸಲಿಟ್ಟಿದ್ದು, 20*30 ಅಳತೆಯ 1200 ಅರ್ಹ ಫಲಾನುಭವಿಗಳಿಗೆ ಸೂರು ನೀಡಲಾಗುವುದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಲ್ಲದೇವರಕಟ್ಟೆಯ ಸರ್ವೆ ಸಂಖ್ಯೆ 4 ರಲ್ಲಿ 29 ಎಕರೆ ಜಾಗ ಗುರುತಿಸಿದ್ದು ಪ್ರಾಮಾಣಿಕವಾಗಿ ಅರ್ಹರಿಗೆ ನಿವೇಶನ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸ್ಲಂ ಬೋರ್ಡನಿಂದ 351 ಮನೆಗಳು ಹಾಗೂ ರಾಜೀವ್‍ಗಾಂಧಿ ವಸತಿ ನಿಗಮದಿಂದ 650 ಮನೆಗಳು ಮಂಜೂರಾಗಿದ್ದು ಅರ್ಹ ಫನುಭವಿಗಳಿಗೆ ಅವುಗಳನ್ನು ವಿತರಿಸಲಾಗುವುದು ಎಂದರು.
ಹೊನ್ನಾಳಿ ಪುರಸಭೆಗೆ ನಗರೋತ್ಥನದಡಿಯಲ್ಲಿ ರು.10ಕೋಟಿ ಅನುದಾನ ಬಿಡುಗಡೆಯಾಗಿದ್ದು, ದುರ್ಗಿಗುಡಿ ದಕ್ಷಿಣ ಭಾಗದ 5,6,7 ನೇ ಅಡ್ಡ ರಸ್ತೆಯಲ್ಲಿ ಹಾಗೂ ದುರ್ಗಿಗುಡಿ ಉತ್ತರ ಭಾಗದಲ್ಲಿ ವಿವಿಧ ರಸ್ತೆಗಳಲ್ಲಿ ಡಾಂಬರ್ ರಸ್ತೆ ನಿರ್ಮಾಣದ ಜೊತೆಗೆ ಪಟ್ಟಣದ ವಿವಿಧ ವಾರ್ಡಗಳನ್ನು ಅಭಿವೃದ್ದಿ ಮಾಡಲಾಗುವುದು ಎಂದರು.
ರೂ.7.5ಕೋಟಿ ವೆಚ್ಚದಲ್ಲಿ ಪಟ್ಟಣದ ಟಿಬಿ ವೃತ್ತದಿಂದ ದಿಡಗೂರು ಕೃಷ್ಣಪ್ಪ ನಗರದ ವರೆಗೆ ರಸ್ತೆ ರಸ್ತೆ ಅಗಲೀಕರಣ ಕಾಮಗಾರಿಯ ಜೊತೆಗೆ ಡಿವೈಡರ್ ನಿರ್ಮಾಣದೊಂದಿಗೆ ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಪಟ್ಟಣದಲ್ಲಿ ರೂ.37 ಕೋಟಿ ವೆಚ್ಚದಲ್ಲಿ ಯುಜಿಡಿ ನಿರ್ಮಾಣ ಕಾಮಗಾರಿ ಹಾಗೂ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ದೃಷ್ಟಿಯಿಂದ ರೂ.21 ಕೋಟಿ ಮಂಜುರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಪಟ್ಟಣದ ಗೊಲ್ಲರಹಳ್ಳಿಯಿಂದ ಎಚ್.ಕಡದಕಟ್ಟೆವರೆಗೆ ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯಪ್ರಗತಿಯಲ್ಲಿದ್ದು, ಡಿವೈಡರ್ ಮದ್ಯಭಾಗದಲ್ಲಿದ್ದ ಸಸಿಗಳನ್ನು ತೆರವುಗೊಳಿಸಿದ್ದು ಅದರ ಬದಲಾಗಿ ಅಲಂಕಾರಿಕ ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ ಎಂದರು.
ಮರಳೋಣಿ ಹಿರೇಕಲ್ಮಠ ರಸ್ತೆಗಳನ್ನು ಕಾಂಕ್ರಿಟ್ ರಸ್ತೆ ಹಾಗೂ ಚರಂಡಿಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಸರ್ಕಾರದಿಂದ ಮಂಜೂರಾತಿ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ವಾಸವಿ ಮೆಡಿಕಲ್ ಶಾಪ್ ನ ಮಾಲೀಕರ ಮನೆಯ ಹಿಂಭಾಗದಿಂದ ವಡ್ಡಿನಕೆರೆ ಹಳ್ಳದವರೆಗೆ ಬರುವ ಮುಖ್ಯ ಕಾಲುವೆ ನಿರ್ಮಾಣಕ್ಕೆ ರೂ 2.50 ಕೋಟಿ ಮಂಜೂರಾತಿ ಹಂತದಲ್ಲಿದೆ ಎಂದ ಅವರು, ನಗರದ ಕೆನರಾ ಬ್ಯಾಂಕ್ ನಿಂದ ತುಂಗಭದ್ರಾ ಬಡಾವಣೆಯವರೆಗೂ ಮತ್ತು ದುರ್ಗಾಂಭಿಕ ಸರ್ಕಲ್ ನಿಂದ ಎ.ಕೆ. ಕಾಲೋನಿಯವರೆಗೂ ಅಲಂಕಾರಿಕ ಬೀದಿ ದೀಪಗಳ ಅಳವಡಿಕೆಗೆ ರೂ 1 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಹನುಮಸಾಗರ ಗ್ರಾಮದಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಚುತುಷ್ಪಥ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿದ್ದು, ಈ ಭಾಗದಲ್ಲಿ ಬರುವ ವರ್ತಕರು, ಸಾರ್ವಜನಿಕರು ಸ್ವಇಚ್ಛೆಯಿಂದ ಜಾಗವನ್ನು ಬಿಟ್ಟು ಕೊಡಬೇಕೆಂದು ಮನವಿ ಮಾಡಿದ ಶಾಸಕರು ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಬಾಬು ಹೋಬಳದಾರ್ ಉಪಾಧ್ಯಕ್ಷರಾದ ರಂಜಿತಾ ವಡ್ಡಿಚೆನ್ನಪ್ಪ, ಸದಸ್ಯರಾದ ರಂಗನಾಥ್,ಧರ್ಮಪ್ಪ,ಮೈಲಪ್ಪ ಮುಖಂಡರಾದ ಕೋಳಿ ಸತೀಶ್, ಇಂಚರ ಮಂಜುನಾಥ್, ಮಹೇಶ್ ಹುಡೇದ್, ಚನ್ನಪ್ಪ ವಡ್ಡಿ, ಪೇಟೆ ಪ್ರಶಾಂತ್, ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಸೇರಿದಂತೆ ಮತ್ತಿತತರಿದ್ದರು.

Leave a Reply

Your email address will not be published. Required fields are marked *