ಹೊನ್ನಾಳಿ:ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಎಲ್ಲಾ ಇಲಾಖೆಗಳ ಅಧಿಕಾರಗಳು ತಮ್ಮ ಇಲಾಖೆಗೆ ಸಂಬಧಿಸಿದ ಕಾಮಗಾರಿಗಳನ್ನು ಕಳಪೆ ಇಲ್ಲದಂತೆ ಪರಿಶೀಲಿಸಿಕೊಂಡು ನಿರ್ವಹಿಸಿದರೆ ಮಾತ್ರ ಸರ್ಕಾರದಿಂದ ಬಂದಂತಹ ಸಾವಿರಾರು ಕೋಟಿ ಅನುದಾನ ಸಾರ್ಥಕತೆ ಪಡೆಯುತ್ತದೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಪಂ ಸಾಮಾಥ್ರ್ಯ ಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಹಾಗೂ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ಸಾಧನೆ ಮತ್ತು ಅನುಷ್ಠಾನದ ಬಗ್ಗೆ ಸಮಗ್ರ ಮಾಹಿತಿಯನ್ನು ಸಭೆಗೆ ವಿವರಿಸಬೇಕು. ವಿವರಣೆ ಸಂಪೂರ್ಣ ದಾಖಲೆಯೊಂದಿಗೆ ಇರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರು ತಮ್ಮ ಇಲಾಖೆಗೆ ಸಂಬಂಧಪಟ್ಟ ಅನುದಾನ ಹಾಗೂ ಕ್ರಿಯಾ ಯೋಜನೆಯನ್ನು ವಿವರಿಸಿ ಎಂದಾಗ ಅಧಿಕಾರಿಗಳು ಸಮಪರ್ಕ ವಿವರಣೆ ಕೊಡಲು ತಡಪಡಿಸಿದಾಗ ಶಾಸಕರೇ ವಿವಿಧ ಇಲಾಖೆಗಳಿಗೆ ಹಾಗೂ ಗ್ರಾಮಗಳಿಗೆ ಬಂದಂತಹ ಅನುದಾನವನ್ನು ವಿವರಿಸಿದರು.
ನ್ಯಾಮತಿ ತಾಲೂಕಿನ ಜೀನಹಳ್ಳಿ ಗ್ರಾಮ ಸೇರಿದಂತೆ ಇತರ ಗ್ರಾಮಗಳಲ್ಲಿ ಹಾದು ಹೋಗಿರುವ ರಸ್ತೆಗಳಲ್ಲಿ ನೀರಾವರಿ ಇಲಾಖೆಯವರು ಕುಡಿಯುವ ನೀರು ಸರಬರಾಜು ಮಾಡುವ ಪ್ರಕ್ರಿಯೆಯಲ್ಲಿ ರಸ್ತೆಗಳನ್ನು ದುರಸ್ತಿ ಮಾಡದೆ ಹಾಗೇ ಬಿಟ್ಟಿದ್ದೀರಿ ಇದರಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗುತ್ತವೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಗೋವಿನಕೋವಿ, ಹನುಮಸಾಗರ ವ್ಯಾಪ್ತಿಯ 94 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಹಾಗೂ ಬೆನಕನಹಳ್ಳಿ ಏತ ನೀರಾವರಿ ಯೋಜನೆಯಿಂದ 24 ಕೆರೆಗಳ ತುಂಬಿಸುವ ಯೋಜನೆಯ ಮೊತ್ತದ ಅನುದಾನ ಒಟ್ಟು ರೂ.519 ಕೋಟಿ ವೆಚ್ಚದ ಕಾಮಗಾರಿ ಭರದಿಂದ ಸಾಗಿದೆ ಎಂದು ಹೇಳಿದರು.
ಕುಂದೂರು ಕೆರೆ ಏರಿ ಅಗಲೀಕರಣಕ್ಕೆ ರೂ.6 ಕೋಟಿ, ಅರಕೆರೆ, ನರಸಗೊಂಡನಹಳ್ಳಿ ಬಳಿಯ ಚತುಷ್ಪತ ರಸ್ತಗೆ ರೂ.4.5 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿ 2 ಮತ್ತು ಸಿಂಗಟಗೆರೆ ಗ್ರಾಮದ ಬಳಿ 1 ವಸತಿ ಶಾಲೆ ಸೇರಿದಂತೆ ಒಟ್ಟು 3 ವಸತಿ ಶಾಲೆಗಳ ಕಟ್ಟಡಗಳು ಪೂರ್ಣಗೊಂಡಿದ್ದು ಹಾಗೂ ಬೇಲಿಮಲ್ಲೂರು ಗ್ರಾಮದ ಬಳಿ ಹಾಗೂ ಎಚ್.ಕಡದಕಡ್ಡೆ ಬಳಿಯ ಹೆಲಿಪ್ಯಡ್ ಬಳಿ ಇರುವ ವಿದ್ಯಾರ್ಥಿನಿಲಯಗಳ ಕಟ್ಟಡಗಳು ಶೀಘ್ರದಲ್ಲಿ ಉದ್ಘಾಟನೆಯಾಗಲಿವೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯಲ್ಲಿ ರೂ.30.40ಕೋಟಿ ಅನುದಾಣದಲ್ಲಿ ಒಟ್ಟು 132 ಕೊಠಡಿಗಳನ್ನು ಈಗಾಗಲೆ ನಿರ್ಮಿಸಲಾಗಿದೆ. ನ್ಯಾಮತಿ ಪಟ್ಟಣದ ಕೆಪಿಎಸ್‍ಗೆ ಅವಶ್ಯವಾಗಿರುವ ರೂ.2ಕೋಟಿ ಅನುದಾನದಲ್ಲಿ ಕಟ್ಟಡದ ಕಾಮಗಾರಿ ಪ್ರಾರಂಭವಾಗಿದೆ ಎಂದು ಹೇಳಿದರು.
ಹೊನ್ನಾಳಿ ಮತ್ತು ನ್ಯಾಮತಿ ಪದವಿ ಕಾಲೇಜುಗಳಿಗೆ ಅವಶ್ಯವಿರುವ ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು ಹೊನ್ನಾಳಿ ಪಟ್ಟಣದ ಪದವಿ ಕಾಲೇಜಿಗೆ ರೂ.5.95ಕೋಟಿ ಹಾಗೂ ನ್ಯಾಮತಿ ಪಟ್ಟಣದ ಪದವಿ ಕಾಲೇಜಿಗೆ ರೂ.4.25 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಾರಂಭವಾಗಿದೆ. ನ್ಯಾಮತಿ ತಾಲೂಕಿನ ಪದವಿ ಕಾಲೇಜಿಗೆ ರೂ.3ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ಎಂದು ಹೆಳಿದರು.
ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ, ಚಿಕ್ಕಗೋಣಿಗೆರೆ ಹಾಗೂ ನ್ಯಾಮತಿ ತಾಲೂಕಿನ ಗಂಗನಕೋಟೆ ಗ್ರಾಮದ ಬಳಿ 66ಕೆವಿ ಪವರ್ ಸ್ಟೇಷನ್ ಸ್ಥಾಪನೆ ಮಾಡಲಾಗಿದೆ. ಬೆಸ್ಕಾಂ ಇಲಾಖೆಯಲ್ಲಿ ಬೆಳಕು ಯೋಜನೆಯಡಿ 270 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ 1500 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಸಿ ಬೆಳಕು ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ನೇರಲಗುಂಡಿ, ಗಡ್ಡೇಹಳ್ಳಿ ಸೇರಿದಂತೆ 8 ಹಳ್ಳಿಗಳ ಕೆರೆ ಹೂಳೆತ್ತುವ ಕಾಮಗಾರಿಗೆ ರೂ.4 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೆಲ ಹಳ್ಳಿಗಳ ಕೆರೆ ಹೂಳೆತ್ತುವ ಕೆಲಸ ಮುಗಿದಿದ್ದು ಇನ್ನು ಕೆಲ ಹಳ್ಳಿಗಳ ಕೆರೆ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ಹೊನ್ನಾಳಿ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಚಿಕ್ಕದಿದ್ದು ಅದೇ ಸ್ಥಳದಲ್ಲಿ ರೂ.10 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್‍ನಿಲ್ದಾನ ನಿಮಾಣ ಮಾಡಲಾಗುವುದು ಎಂದು ಹೇಳಿದರು.
ಅವಳಿ ತಾಲೂಕಿನಲ್ಲಿ ರೂ.1000 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿ ಮಾಡಲಾಗಿದೆ. ಮುಂದಿನ ತಿಂಗಳು ಮೆ.30ರಂದು ಸಿಎಂ ಬಸವರಾಜ್‍ಬೊಮ್ಮಾಯಿ, ನಕಟಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರು ರಾಜ್ಯ 10 ಸಚಿವರುಗಳನ್ನು ತಾಲೂಕಿಗೆ ಆಹ್ವಾನಿಸಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯ ಹಮ್ಮಿಕೊಂಡಿದ್ದು ಇದಕ್ಕೆ ತಾಲೂಕಿನ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕೈ ಜೋಡಿಸಿ ತಮ್ಮ ಮನೆ ಕಾರ್ಯಕ್ರಮವೆಂದು ತಿಳಿದು ಕಾರ್ಯಕ್ರಮ ಯಶಸ್ವಿಗೆ ಕಾರಣೀಭೂತರಾಗಬೇಕು ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ತಿಮ್ಮಣ್ಣಹುಲ್ಲುಮನಿ, ಹೊನ್ನಾಳಿ ತಹಶೀಲ್ದಾರ್ ರಶ್ಮಿ, ನ್ಯಾಮತಿ ತಹಶೀಲ್ದಾರ್ ರೇಣುಕಾ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಳ್, ನ್ಯಾಮತಿ ತಾ.ಪಂ ಆಡಳಿತಾಧಿಕಾರಿ ಅನ್ನಪೂರ್ಣಮ್ಮ, ತಾ.ಪಂ ಇಒ ರಾಮಭೋವಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಚಿತ್ರ:26-ಎಚ್‍ಎನ್‍ಎಲ್-1:ಹೊನ್ನಾಳಿ:ಪಟ್ಟಣದ ತಾಪಂ ಸಾಮಾಥ್ರ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.