ಜಿಲ್ಲಾ ಪಂಚಾಯತ್, ಪಶು ಪಾಲನಾ ಮತ್ತು ಪಶು ವೈದ್ಯಕೀಯ
ಸೇವಾ ಇಲಾಖೆ ದಾವಣಗೆರೆ ಹಾಗೂ ಕರ್ನಾಟಕ ಪಶು ವೈದ್ಯಕೀಯ
ಸಂಘ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಪಶು
ಆಸ್ಪತ್ರೆ ಆವರಣದ ಉಪನಿರ್ದೇಶಕರ ಕಚೇರಿಯ ಸಭಾಭವನದಲ್ಲಿ
‘ವಿಶ್ವ ಪಶು ವೈದ್ಯಕೀಯ ದಿನಾಚರಣೆಯ ಅಂಗವಾಗಿ 2022-23ನೇ
ಸಾಲಿನ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಪಶು
ವೈದ್ಯರಿಗೆ ತಾಂತ್ರಿಕ ವಿಚಾರ ಸಂಕಿರಣ’ ಕಾರ್ಯಕ್ರಮವನ್ನು
ಆಯೋಜಿಸಲಾಗಿತ್ತು.
ಇದೇ ವೇಳೆ ಪಶು ವೈದ್ಯಕೀಯ ಸಂಘದ ಜಿಲ್ಲಾ ಶಾಖೆ
ವತಿಯಿಂದ ಪಶು ವೈದ್ಯರಿಗೆ ಆಯೋಜಿಸಲಾಗಿದ್ದ ವಾರ್ಷಿಕ
ಕ್ರೀಡಾಕೂಟದಲ್ಲಿ ವಿಜೇತರಾದ ಪಶು ವೈದ್ಯರಿಗೆ ಪ್ರಶಸ್ತಿ ವಿತರಣೆ
ಮಾಡಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ
ಆನಂದ್.ಬಿ ಹಾಗೂ ರೇಬೀಸ್ ಲಸಿಕಾ ಸಪ್ತಾಹವನ್ನು ಮಹಾನಗರ ಪಾಲಿಕೆ
ಆಯುಕ್ತ ವಿಶ್ವನಾಥ್ ಪಿ.ಮುದ್ದಜ್ಜಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಲ್ ನಾಗರಾಜ್, ಪಾಲಿ ಕ್ಲಿನಿಕ್
ಉಪನಿರ್ದೇಶಕರಾದ ಡಾ.ವೀರೇಶ್ ಟಿ.ಆರ್, ಪ್ರಾಣಿ ಕಲ್ಯಾಣ ಅಧಿಕಾರಿ
ಡಾ.ರಾಮಪ್ರಸಾದ್ ಕುಲಕರ್ಣಿ, ಸೂಕ್ಷ್ಮ ಜೀವಿ ವಿಭಾಗದ ಸಹಾಯಕ
ಪ್ರಾಧ್ಯಾಪಕ ಡಾ.ಅರುಣ್, ಕರ್ನಾಟಕ ಪಶು ವೈದ್ಯಕೀಯ ಸಂಘದ
ಕಾರ್ಯದರ್ಶಿ ಡಾ.ಎಸ್.ಬಿ.ರವಿಕುಮಾರ್, ನಿರ್ಮಿತಿ ಕೇಂದ್ರದ ಯೋಜನಾ
ನಿರ್ದೇಶಕರಾದ ರವಿ, ಪಶು ವೈದ್ಯಾಧಿಕಾರಿಗಳು ಸೇರಿದಂತೆ
ಇತರರು ಹಾಜರಿದ್ದರು.