ಹೊನ್ನಾಳಿ;-ಮೇ-5-ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹೊನ್ನಾಳಿ ಇವರ ವತಿಯಿಂದ ಕಿತ್ತೂರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ 108ನೇ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಉದ್ಘಾಟನೆಯನ್ನು ಯಕ್ಕನಹಳ್ಳಿ ಅಕ್ಕಿಗಿರಣಿ ಮಾಲೀಕರಾದ ಸಿ ಬಿ ಬಸವರಾಜಪ್ಪ ನವರು ತುಳಸಿಯ ಸಸಿಗೆ ನೀರುಣಿಸುವುದರ ಮೂಲಕ ಚಾಲನೆಯನ್ನು ಕೊಡಲಾಯಿತು.
ಕನ್ನಡ ನಾಡು ನುಡಿ ಬಿಂಬಿಸುವ ಸಾಂಸ್ಕೃತಿಕ ವೈಭವ ಬಗ್ಗೆ ಉಪನ್ಯಾಸವನ್ನು ಮಂಜುನಾಥ ಗೊಲ್ಲರಹಳ್ಳಿ ಅವರು ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡ ಆಲದ ಮರವಾಗಿ 108 ನೆಯ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವುದರಿಂದ ಬಹಳ ಸಂತೋಷದ ವಿಷಯವಾಗಿದೆ ಎಂದು ಹೇಳುತ್ತಾ ಕರ್ನಾಟಕ ಸಾಹಿತ್ಯ ಪರಿಷತ್ 30 ಜನಗಳ ಸದಸ್ಯರಿಂದ ಪ್ರಾರಂಭಗೊಂಡು ಇಂದು ಮೂರು ಲಕ್ಷ ಸದಸ್ಯರನ್ನು ಹೊಂದಿದೆ ಎಂದು ಮಂಜುನಾಥ್ ತಿಳಿಸಿದರು.
ತಿಮ್ಮಪ್ಪ ಕಡದಕಟ್ಟೆ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು.
ಈ ಕಾರ್ಯಕ್ರಮ ಆರಂಭಗೊಂಡಾಗಿನಿಂದ ಕೊನೆಯ ಘಟ್ಟದವರೆಗೆ ಶ್ರೀಮತಿ ಶಾರದಾ ಕಣಗೂಟಗಿ ಯವರು ನಿರೂಪಣೆಯನ್ನು ನಡೆಸಿಕೊಟ್ಟರು.
ವಂದನಾರ್ಪಣೆಯನ್ನು ಬಸವರಾಜಪ್ಪ ಗೌರವ ಕಾರ್ಯದರ್ಶಿಗಳು ನಡೆಸಿಕೊಟ್ಟರು.
ಉಪಸ್ಥಿತಿಯಲ್ಲಿ;- ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ಜಿ ಮುರಿಗೆಪ್ಪ ಗೌಡ. ಟಿ ಬಸವರಾಜಪ್ಪ ಮಾಲೀಕರು ಅಕ್ಕಿಗಿರಣಿ ಮಲೆಬೆನ್ನೂರು. ಉಪನ್ಯಾಸ ಮಂಜುನಾಥ ಗೊಲ್ಲರಹಳ್ಳಿ. ಕೆ ಶೇಖರಪ್ಪ .ಶ್ರೀಮತಿ ಶಾರದಾ ಕಣ ಗೋಟಗಿ. ಶ್ರೀಮತಿ ಹೇಮಲತಾ ಸಹೋದರಿಯರು. ರೇವಣಪ್ಪ. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆಪಿ ದೇವೇಂದ್ರಯ್ಯ ಇನ್ನು ಮುಂತಾದ ಸಾಹಿತ್ಯ ಪರಿಷತ್ತಿನ ಸದಸ್ಯರುಗಳು ಹಿರಿಯ ನಾಗರಿಕರು ಸಹ ಭಾಗಿಯಾಗಿದ್ದರು
