ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿಯ ಕರ್ನಾಟಕ ಪಬ್ಲಿಕ್
ಶಾಲೆ ಇಲ್ಲಿ 2022-23ನೇ ಸಾಲಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ಒಬ್ಬ
ಶಿಕ್ಷಕಿ ಹಾಗೂ ಒಬ್ಬ ಆಯಾರನ್ನು ನೇಮಕಾತಿ ಮಾಡಿಕೊಳ್ಳಲು
ಜೂ.13 ರಂದು ಬೆ.11 ಗಂಟೆಗೆ ಸಂದರ್ಶನ ಏರ್ಪಡಿಸಲಾಗಿದೆ.
ಪೂರ್ವ ಪ್ರಾಥಮಿಕ ಶಾಲೆ ಶಿಕ್ಷಕ ಹುದ್ದೆಯೂ
ಮಹಿಳೆಯರಿಗೆ ಮಾತ್ರ ಮೀಸಲಾಗಿದ್ದು, ಪದವಿ ಪೂರ್ವ
ಶಿಕ್ಷಣ(ಪಿಯುಸಿ)ದಲ್ಲಿ ಶೇ.50 ಅಂಕ ಪಡೆದಿರುವ ಹಾಗೂ ಡಿಪೆÇ್ಲೀಮಾ
ಇನ್ ನರ್ಸರಿ ಟೀಚರ್ ಎಜುಕೇಶನ್, ಡಿಪೆÇ್ಲೀಮಾ ಇನ್ ಅರ್ಲಿ ಚೈಲ್ಡ್ ಹುಡ್
ಎಜುಕೇಶನ್, ಪ್ರೀ ಸ್ಕೂಲ್ ಎಜುಕೇಶನ್, ಬಿ.ಇಡಿ-ನರ್ಸರಿ ಇವುಗಳಲ್ಲಿ
ಯಾವುದಾದರೂ ಒಂದು ಅರ್ಹತೆ ಹೊಂದಿರುವ 45 ವರ್ಷದ
ಒಳಗಿನ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.
ಪೂರ್ವ ಪ್ರಾಥಮಿಕ ಶಾಲೆ ಆಯಾ ಹುದ್ದೆ ಮಹಿಳೆಯರಿಗೆ ಮಾತ್ರ
ಮೀಸಲಾಗಿದ್ದು, ಎಸ್. ಎಸ್. ಎಲ್. ಸಿ ಉತ್ತೀರ್ಣರಾದ 45 ವರ್ಷದ ಒಳಗಿನ
ಆಸಕ್ತಿಯುಳ್ಳ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ
ಅರ್ಜಿಯನ್ನು ಜೂ.10 ರ ಒಳಗಾಗಿ ಪ್ರಾಂಶುಪಾಲರಿಗೆ
ಸಲ್ಲಿಸಬಹುದಾಗಿದೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು : ಎಸ್.ಎಸ್.ಎಲ್.ಸಿ
ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಡಿಪೆÇ್ಲೀಮಾ ಅಥವಾ ಡಿ.ಇಡಿ, ಅಥವಾ
ನರ್ಸರಿ ತರಬೇತಿ ಪ್ರಮಾಣಪತ್ರ, ವೃತ್ತಿ ಅನುಭವ ಹೊಂದಿರುವ
ಬಗ್ಗೆ ಪ್ರಮಾಣಪತ್ರ, ನಿವಾಸಿ ದೃಡೀಕರಣ ಪತ್ರ, ಆಧಾರ್ ಕಾರ್ಡ್
ಲಗತ್ತಿಸಿ ಅರ್ಜಿ ಸಲ್ಲಿಸಬೇಕು ಎಂದು ಮಂಜುಳಾ ಬಿ.ಆರ್
ಪ್ರಾಂಶುಪಾಲರು ಕರ್ನಾಟಕ ಪಬ್ಲಿಕ್ ಶಾಲೆ ಇವರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *