ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ
ದಾವಣಗೆರೆ ವತಿಯಿಂದ 2022-23ನೇ ಸಾಲಿಗೆ ಅಲ್ಪಸಂಖ್ಯಾತರ
ಸಮುದಾಯದ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ
ಸಾಲ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಪ್ರಸಕ್ತ
ಸಾಲಿಗೆ ರಾಜ್ಯದ ಮತಿಯ ಅಲ್ಪಸಂಖ್ಯಾತರಾದ ಮುಸಲ್ಮಾನರು,
ಕ್ರೈಸ್ತರು, ಜೈನರು, ಭೌದ್ಧರು, ಸಿಖ್ಖರು ಮತ್ತು ಫಾರ್ಸಿ
ಜನಾಂಗದವರಿಗೆ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು,
ಆಸಕ್ತರು ಈ ಯೋಜನೆಗಳಿಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ
ಸಲ್ಲಿಸಬಹುದಾಗಿದೆ.
ಶ್ರಮಶಕ್ತಿ ಸಾಲ ಯೋಜನೆಯಡಿ ಅಲ್ಪಸಂಖ್ಯಾತ
ಸಮುದಾಯದ ಸಾಂಪ್ರದಾಯಿಕ ಕುಶಲ ಕರ್ಮಿಗಳು ಹಾಗೂ
ವೃತ್ತಿ ಕುಲಕಸಬುದಾರರಿಗೆ, ಅವರ ವೃತ್ತಿ ಕೌಶಲ್ಯವನ್ನು ಅಭಿವೃದ್ಧಿ
ಪಡಿಸಿಕೊಳ್ಳಲು ಗರಿಷ್ಠ ರೂ.50,000 ವರೆಗೆ ಶೇ.4ರ ಬಡ್ಡಿ ದರದಲ್ಲಿ
ಸಾಲಸೌಲಭ್ಯ, ಇದರಲ್ಲಿ ನಿಗಧಿತ ಅವಧಿಯೊಳಗೆ ಸಾಲ ಮರುಪಾವತಿ
ಮಾಡುವ ಅರ್ಜಿದಾರರಿಗೆ ಶೇ.50 ರ ಬ್ಯಾಂಕ್ ಎಂಡ್ ಸಹಾಯಧನವನ್ನು
ದೊರಕಿಸಲಾಗುವುದು.
ಪ್ಯಾಸೆಂಜರ್ ಆಟೋರಿಕ್ಷ ಅಥವಾ ಟ್ಯಾಕ್ಸಿ ಗೂಡ್ಸ್ ವಾಹನ ಖರೀದಿಸಲು
ನಿಗಮದ ವತಿಯಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳ
ಸಹಾಯಧನದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.
ಬ್ಯಾಂಕ್‍ಗಳಿಂದ ಮಂಜೂರಾತಿ ನೀಡಿದ ಫಲಾನುಭವಿಗಳಿಗೆ ಆಟೋ
ರಿಕ್ಷ, ಗೂಡ್ಸ್ ಅಥವಾ ಟ್ಯಾಕ್ಸಿ ವಾಹನ ಖರೀದಿಸಲು ವಾಹನದ ಮೌಲ್ಯದ
ಶೇ.33 ರಷ್ಟು ಸಹಾಯಧನ ಗರಿಷ್ಠ ರೂ.2.50 ಲಕ್ಷ ಸಹಾಯಧನ
ನೀಡಲಾಗುತ್ತದೆ.
ಸ್ವಯಂ ಉದ್ಯೋಗ ಯೋಜನೆಯಲ್ಲಿ ವ್ಯಾಪಾರ, ಸಣ್ಣ ಪ್ರಮಾಣದ
ಗುಡಿ ಕೈಗಾರಿಕೆ, ಸೇವಾ ಕ್ಷೇತ್ರ, ಮುಂತಾದವುಗಳನ್ನು
ಪ್ರಾರಂಭಿಸಲು ಅಥವಾ ಅಭಿವೃದ್ಧಿ ಪಡಿಸಿಕೊಳ್ಳವ ಸಲುವಾಗಿ
ರಾಷ್ಟ್ರೀಕೃತ ಅಥವಾ ಷೆಡ್ಯೂಲ್ ಬ್ಯಾಂಕ್‍ಗಳ ಸಹಯೋಗದೊಂದಿಗೆ
ಸಾಲ ಮತ್ತು ಸಹಾಯಧನ ಒದಗಿಸಲಾವುದು. ಘಟಕ ವೆಚ್ಚದ
ಶೇ.33 ರಷ್ಟು ಅಥವಾ ಗರಿಷ್ಠ ಮಿತಿ ರೂ. 1 ಲಕ್ಷ ಸಹಾಯಧನ
ಸೌಲಭ್ಯ ನೀಡಲಾಗುವುದು.
ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆಯಡಿಯಲ್ಲಿ ವೃತ್ತಿಪರ ಶಿಕ್ಷಣ
ಅಂದರೆ ಎಂ.ಬಿ.ಬಿ.ಎಸ್, ಎಂ.ಡಿ, ಬಿ.ಇ, ಬಿ.ಟೆಕ್, ಎಂ.ಇ, ಎಂ.ಟೆಕ್, ಬಿಡಿಎಸ್, ಎಂಡಿಎಸ್,
ಬಿ.ಆಯುಷ್, ಎಂಬಿಎ. ಎಂಸಿಎ, ಎಲ್‍ಎಲ್‍ಬಿ, ಃ.ಂಡಿಛಿh, ಒ.ಂಡಿಛಿh ಕೋರ್ಸ್
ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅವರ ವ್ಯಾಸಂಗ
ಪೂರ್ಣಗೊಳಿಸುವವರಿಗೆ, ಪ್ರತಿ ವರ್ಷಕ್ಕೆ ರೂ.50,000 ದಿಂದ 3 ಲಕ್ಷದ
ವರೆಗೆ ಸಾಲ ನೀಡಲಾಗುವುದು, ಹಾಗೂ ಮೊತ್ತವನ್ನು ವ್ಯಾಸಂಗ
ಪೂರ್ಣಗೊಳಿಸಿದ 06 ತಿಂಗಳ ನಂತರ ಶೇ.02 ರ ಸೇವಾಶುಲ್ಕದೊಂದಿಗೆ
ಸಾಲ ಮರುಪಾವತಿ ಮಾಡಬೇಕಾಗಿರುತ್ತದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಈ ಎಲ್ಲಾ
ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನವಾಗಿದ್ದು,
ಜಿಲ್ಲೆಯ ಅರ್ಹ ಅಲ್ಪಸಂಖ್ಯಾತರು ನಿಗಮದ
ವೆಬ್‍ಸೈಟ್ hಣಣಠಿs://ಞmಜಛಿoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಆನ್‍ಲೈನ್ ಮೂಲಕ ಅರ್ಜಿ
ಸಲ್ಲಿಸಿ, ಅರ್ಜಿಯ ಹಾರ್ಡ್ ಕಾಫಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ
ಕಛೇರಿಗೆ ಸಲ್ಲಿಸಬೇಕಾಗಿರುತ್ತದೆ. ಹಾರ್ಡ್ ಕಾಫಿ ಸಲ್ಲಿಸದೇ ಇದ್ದಲ್ಲಿ
ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ 08192-232349 ಅಥವಾ ಜಿಲ್ಲಾ
ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ
ನಿಗಮ,(ನಿ) ಕುರುಬರ ಹಾಸ್ಟೆಲ್, ಜಯದೇವ ವೃತ್ತದ ಹತ್ತಿರ ಇಲ್ಲಿಗೆ
ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.