ಹೊನ್ನಾಳಿ ಃ ಬಿ.ಡಿ. ಹಿರೇಮಠ ಅವರನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ಹೊನ್ನಾಳಿ ಮತ್ತು ನ್ಯಾಮತಿ ಮೌನ ಪ್ರತಿಭಟನೆಯನ್ನು ಬುಧವಾರ ನಡೆಸಿದರು.
ಮೌನ ಪ್ರತಿಭಟನೆಯ ಮೆರವಣಿಗೆ ಶ್ರೀ ಚನ್ನಪ್ಪಸ್ವಾಮೀಜಿ ಹಿರೇಕಲ್ಮಠದಿಂದ ಹೊರಟು ಸಂಗೋಳಿರಾಯಣ್ಣನ ಪ್ರತೀಮೆಗೆ ಮಾಲಾರ್ಪಣೆ ಮಾಡಿ ಉಪವಿಭಾಗಾಧಿಕಾರಿಗಳಿಗೆ ಮತ್ತು ತಹಶೀಲ್ದಾರ್ ಕಚೇರಿಯನ್ನು ತಲುಪಿ ರಾಜ್ಯ ಮುಖ್ಯಮಂತ್ರಿಗಳಿಗೆ , ಸಮಾಜ ಕಲಾಣ್ಯ ಸಚಿವರಿಗೆ , ಜಿಲ್ಲಾಧಿಕಾರಿಗಳಿಎ , ಉಪವಿಭಾಗಾಧಿಕಾರಿಗಳಿಗೆ ಮತ್ತು ತಹಶೀಲ್ದಾರ್ ಬರೆದ ಮನವಿಪತ್ರವನ್ನು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಆಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಪ್ಪ ಹಾಗೂ ಗ್ರೇಡ್‌ಡು ತಹಶೀಲ್ದಾರ್‌ಅವರಿಗೆ ನೀಡಿತು.
ಕುಳಗಟ್ಟೆ ಪರಮೇಶ್ವರಯ್ಯ ಮಾತನಾಡಿ ಸಂವಿಧಾನ ಬದ್ಧವಾದ ಬೇಡಜಂಗಮ ಜಾತಿಪ್ರಮಾಣ ಪತ್ರ ನೀಡುವಲ್ಲಿ ರಾಜ್ಯಸರಕಾರ ಮೀನಾಮೇಷ, ತಾರತಮ್ಯ ಹಾಗೂ ಅಧಿಕಾರಿಗಳ ವಿಳಂಬ ನೀತಿ ಖಂಡಿಸಿ ಬೆಂಗಳೂರಿನಲ್ಲಿ ಫೀಡಂಪಾರ್ಕ್‌ನಲ್ಲಿ ಅಖಿಲಕರ್ನಾಟಕ ಬೇಡಜಂಗಮ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿದ ಪ್ರತಿಭಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಸಚಿವರು ಆಗಮಿಸಿ ನಮ್ಮ ಸಮಾಜದ ಮನವಿ ಸ್ವೀಕರಿಸಿ ಒಂದು ದಿನದ ಒಳಗಾಗಿ ನ್ಯಾಯಲಯದ ಆದೇಶ ಹಾಗೂ ಸಂವಿಧಾನದ ಸದಾಶಯದಂತೆ ರಾಜ್ಯದ ಎಲ್ಲಾ ಬೇಡಜಂಗಮರಿಗೆ ಬೇಡಜಂಗಮ ಪ್ರಮಾಣಪತ್ರ ವಿತರಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗುವುದೆಂದು ನಮಗೆ ಭರವಸೆ ನೀಡಿದ್ದರು ಅದರೆ ಮಾತು ತಪ್ಪಿರುವ ರಾಜ್ಯ ಸರಕಾರದ ವಿರುದ್ದ ಕಿಡಿಕಾರಿದರು.
ಬೈರನಹಳ್ಳಿ ಪಂಚಾಕ್ಷರಯ್ಯ ಮಾತನಾಡಿ ಮಂಳವಾರ ಬೇಡಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಡಿ. ಹಿರೇಮಠ ಹಾಗೂ ಸಮಾಜದ ಮುಖಂಡರು ಮುಖ್ಯಮಂತ್ರಿಗಳ ನಿವಾಸಕ್ಕೆ ಮನವಿಪತ್ರ ಸಲ್ಲಿಸಲು ಹೋಗುವ ಸಂದರ್ಭದಲ್ಲಿ ಪೋಲಿಸರು ತಡೆದು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಇದನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ. ಪ್ರಮುಖ ಬೇಡಿಕೆಗಳಾದ ಸಂವಿಧಾನ ಬಧ್ದವಾಗಿ ಕೇಂದ್ರ ಸರಕಾರದ ಪಟ್ಟಿಯಲ್ಲಿರುವ ಬೇಡಜಂಗಮರಿಗೆ ಜಾತಿಪ್ರಮಾಣ ಪತ್ರ ವಿತರಿಸಲು ತಕ್ಷಣ ನಿರ್ದೇಶನ ನೀಡಬೇಕು,ಬೇಡಜಂಗಮ ಪ್ರಮಾಣಪತ್ರ ವಿತರಿಸಲು ಹಳೆಯ ಸುತ್ತೋಲೆಗಳನ್ನು ಮುಂದಿಟ್ಟುಕೊಂಡು ವಿಳಂಬ ಹಾಗೂ ಗೊಂದಲ ಸೃಷ್ಟಿಸುತ್ತಿರುವ ಅಧಿಕಾರಿ ವರ್ಗದವರನ್ನು ಅಮಾನತು ಮಾಡಬೇಕು,ಬಿ.ಡಿ.ಹಿರೇಮಠ ಅವರನ್ನು ತಡೆದು ಅಜ್ಙಾತ ಸ್ಥಳಕ್ಕೆ ಪೋಲಿಸರ ಮೂಲಕ ಪ್ರತಿಭಟನೆ ಹಕ್ಕನ್ನು ಕಸಿಯಲು ಪ್ರಯತ್ನಿಸುತ್ತಿರುವ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಸಮಾಜಕಲ್ಯಾಣ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಒತ್ತಾಯಿಸಿದರು.
ಹೊನ್ನಾಳಿ ಎಂ.ಎಸ್.ಶಾಸ್ತ್ರಿಹೊಳೆಮಠ್ ಮಾತನಾಡಿ ನಮ್ಮ ರಾಜ್ಯದಲ್ಲಿ ವಿನಾಕಾರಣ ವಿವಿಧ ಸಮಾಜದ ಮುಖಂಡರು ಹಾಗೂ ಅಧಿಕಾರಿಗಳ ಮೇಲೇ ಸುಳ್ಳು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸುತ್ತಿರುವ ಪೋಲಿಸರನ್ನು ಅಮಾನತುಗೊಳಿಸಬೇಕು ಸೇರಿದಂತೆ ಇತರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಹೊನ್ನಾಳಿ ಮತ್ತು ನ್ಯಾಮತಿ ಬೇಡಜಂಗಮ ಸಮಾಜದ ಮುಖಂಡರಾದ ಬೈರನಹಳ್ಳಿ ಪಂಚಾಕ್ಷರಯ್ಯ , ಕುಳಗಟ್ಟೆ ಪರಮೇಶ್ವರಯ್ಯ , ಕುಳಗಟ್ಟೆ ಬಸಯ್ಯ , ಬನ್ನಿಕೊಡು ಬಸಯ್ಯ , ಹೊನ್ನಾಳಿ ಎಂ.ಎಸ್.ಶಾಸ್ತ್ರಿಹೊಳೆಮಠ್ , ಒಡೆಯರಹತ್ತೂರು ಬಸಯ್ಯ , ಚನ್ನಿಕಟ್ಟೆ ಮುರಿಗೆಶ್‌ಯ್ಯ, ಬೆನಕನಹಳ್ಳಿಬೆನಕಯ್ಯಶಾಸ್ತ್ರೀ, ರೇಣುಕಯ್ಯಶಾಸ್ತ್ರಿಹೊಳೆಮಠ್ , ನಾಗರಾಜಯ್ಯಶಾಸ್ತ್ರಿವಿಎಂ , ದಯಾನಂದಸ್ವಾಮಿ , ನಾಗರಾಜಯ್ಯ ಶಿಂಗಟಗೆರೆ , ನೀಲಮ್ಮ ಸೇರಿದಂತೆ ಅವಳಿ ತಾಲೂಕಿನ ನೂರಾರು ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *