ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ 12 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಟಿಸಿ ಅವರು ಮಾತನಾಡಿದರು.
ಹೈನುಗಾರಿ ಸಾಕಷ್ಟು ಜನರ ಬೆನ್ನಲುಬಾಗಿದ್ದು ಅದರಿಂದ ಸಾಕಷ್ಟು ಜನರ ಜೀವನ ನಿರ್ವಹಣೆಯಾಗುತ್ತಿದೆ ಎಂದ ರೇಣುಕಾಚಾರ್ಯ, ಮನೆಗೊಂದು ಹಸು ಸಾಕುವ ಮೂಲಕ ಆರ್ಥಿಕ ಅಭಿವೃದ್ದಿ ಹೊಂದುವುದರ ಜೊತೆಗೆ ಸಂಘ ಹಾಗೂ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.
ರೈತರು ಆರ್ಥಿಕವಾಗಿ ಮುಂದುವರೆಯಲು ಹಾಲು ಉತ್ಪಾದನೆ ಬಹಳ ಮುಖ್ಯವಾಗಿದ್ದು, ಹೈನುಗಾರಿಕೆಯು ಬಹಳ ದೊಡ್ಡ ಉದ್ಯಮವಾಗಿ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ ಎಂದರು.
ರೈತರು ಸಹಕಾರ ಸಂಘದ ಮೂಲಕ ವಹಿವಾಟು ಮಾಡಿದಲ್ಲಿ ಸಂಘ ಹಾಗೂ ಹಾಲು ಉತ್ಪಾದಕರಿಬ್ಬರೂ ಉತ್ತಮ ಲಾಭಾಂಶ ಪಡೆಯ ಬಹುದು ಎಂದ ಶಾಸಕರು, ಹಾಲಿನ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ರೈತರದಾಗಿದ್ದು, ಹಾಲಿನ ಗುಣಮಟ್ಟ ಕಾಪಾಡಿಕೊಳ್ಳುವಂತೆ ರೈತರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶೋಭಾಪ್ರಭು, ಉಪಾಧ್ಯಕ್ಷ ಶೈಲಾ ವಿಶ್ವನಾಥ್,ಸದಸ್ಯರಾದ ಗೌರಮ್ಮ ಮಲ್ಲಿಕಾರ್ಜುನ್, ಪುಪ್ಪಮಲ್ಲಿಕಾರ್ಜುನ್, ಸುಧಾರಾಜಪ್ಪ, ಗಂಗಮ್ಮ ಲಿಂಗಮೂರ್ತಿ, ಉಮಾ ನಾಗರಾಜಪ್ಪ, ನಿರ್ಮಲ ಪರಮೇಶ್ವರಪ್ಪ, ರತ್ನಮ್ಮ ರಾಜಪ್ಪ, ಮಧು ಮಹೇಂದ್ರ ಸೇರಿದಂತೆ ಮುಖಂಡರಾದ ಕಾಡಾ ನಿರ್ದೇಶಕರಾದ ಹನುಮಂತಪ್ಪ, ಎ.ಜಿ.ಚಂದ್ರಶೇಖರ್ ಗ್ರಾ.ಪಂ.ಅಧ್ಯಕ್ಷರಾದ ರತ್ನಮ್ಮ ಬಸವರಾಜಪ್ಪ, ಗ್ರಾ.ಪಂ.ಸದಸ್ಯ ಗಂಗಾಧರ್,ರತ್ನಮ್ಮ ಗಣೇಶ್,ರಾಜು,ಎಪಿಎಂಸಿ ಮಾಜಿ ಅಧ್ಯಕ್ಷ ರಾಜು ಜಿ.ವಿ, ಕಿ.ವಿ.ಹಾಲೇಶ್ ಸೇರಿದಂತೆ ಮತ್ತೀತತರಿದ್ದರು.

Leave a Reply

Your email address will not be published. Required fields are marked *