ನ್ಯಾಮತಿ :- ಪಟ್ಟಣದಲ್ಲಿಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ 75ನೇ ಅಮೃತ ಸ್ವತಂತ್ರ ಮಹೋತ್ಸವದ ಕಾರ್ಯಕ್ರಮವನ್ನು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಶಾಸಕರು, ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯರವರು ಚಾಲನೆಯನ್ನು ನೀಡಿದರು.
ನಂತರ ಶಾಸಕರೊಂದಿಗೆ ಆ ಕಾಲೇಜಿನ 500 ವಿದ್ಯಾರ್ಥಿಗಳು ಪಟ್ಟಣದ ರಾಜ ಬೀದಿ ಮಾರ್ಗವಾಗಿ ಜಾತಾ ಹೊರಟು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಸ್ವತಂತ್ರ ಚಳುವಳಿಯ ನಾಯಕರ ಘೋಷಣೆ ಯೊಂದಿಗೆ ಸ್ವತಂತ್ರ ಚಳುವಳಿಯ ಹೋರಾಟಗಾರರ ಸ್ತಬ್ಧ ಚಿತ್ರಗಳನ್ನು ಹಾಗೂ ತಿರಂಗ ಬಾವುಟವನ್ನು ಹಿಡಿದು ಘೋಷಣೆಯನ್ನು ಕೂಗುತ್ತಾ ವಿದ್ಯಾರ್ಥಿಗಳಿಂದ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಎಂಪಿ ರೇಣುಕಾಚಾರ್ಯ, ಪ್ರಾಂಶುಪಾಲರಾದ ಡಾ// ಬಿ ಆನಂದ್ ಕಾಲೇಜಿನ ಅಧ್ಯಾಪಕರು ಅತಿಥಿ ಉಪನ್ಯಾಸಕರು ಹಾಗೂ ಸಿಡಿಸಿ ಸದಸ್ಯರುಗಳಾದ ರವಿಕುಮಾರ್ ಅಜಯ್ ರೆಡ್ಡಿ .ಪ್ರಸಾದ್. ಶ್ರೀನಿವಾಸ್. ಕರುಣಾಕರ್. ಸಿದ್ದಲಿಂಗಪ್ಪ ಶ್ರೀಮತಿ ರಾಜೇಶ್ವರಿ, ರಾಮೇಗೌಡ, ಕುಮಾರಸ್ವಾಮಿ, ಸಂಗಪ್ಪ ಅವರ್ ಸಂಗ್ ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಸಹ ಭಾಗಿಯಾಗಿದ್ದರು.
