ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಜೀವ ಸದಸ್ಯತ್ವ ಪಡೆಯಲು, ರೂಪಾಯಿ 250-00 ಆನ್ಲೈನ್ ಮೂಲಕವೇ ಪಾವತಿಸಿ ಸದಸ್ಯತ್ವ ಪಡೆಯುವ ಸದಾವಕಾಶವನ್ನು 18 ವರ್ಷ ತುಂಬಿದ ಪ್ರತಿಯೊಬ್ಬ ಕನ್ನಡಿಗರಿಗೂ ಕಲ್ಪಿಸಿ ಕೊಟ್ಟಿದೆ.
ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಸದುದ್ದೇಶದಿಂದಲೂ, ವಿಶ್ವದಾದ್ಯಂತ ಕನ್ನಡವನ್ನು ಒಗ್ಗೂಡಿಸಲು ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸುವ ದೃಷ್ಟಿಯಿಂದಲೂ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರಸ್ತುತ ಐದು ವರ್ಷಗಳ ಈ ಅವಧಿಯಲ್ಲಿ ಒಂದು ಕೋಟಿ ಸದಸ್ಯತ್ವವನ್ನು ಹೊಂದುವ ದೃಷ್ಟಿಯಿಂದ ಶ್ರೀಸಾಮಾನ್ಯನೂ ಸಹ ಸದಸ್ಯತ್ವ ಪಡೆಯಲು ಅನುಕೂಲವಾಗುವಂತೆ ರೂ.500-00 ಗಳಿದ್ದ ಸದಸ್ಯತ್ವ ಶುಲ್ಕವನ್ನು ರೂ. 250-00 ಗಳಿಗೆ ಇಳಿಸಲಾಗಿದೆ. ಜೊತೆಗೆ ಸಾಧಾರಣ ಗುರುತಿನ ಚೀಟಿ ನೀಡಲಾಗುತ್ತಿದ್ದನ್ನು ಬದಲಾಯಿಸಿ, ರೂ. 150-00 ಗಳಿಗೆ ಅತ್ಯಾಧುನಿಕ ತಂತ್ರಾಂಶದ ಚಿಪ್ ವುಳ್ಳ ಸ್ಮಾರ್ಟ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಹೊಸದಾಗಿ ನೋಂದಾಯಿಸುವ ಸದಸ್ಯರಿಗೆ ವಿತರಿಸಲಾಗುತ್ತಿದೆ. ಈ ಹಿಂದೆ ಸದಸ್ಯತ್ವ ಪಡೆದವರು ಸಹ ರೂ 150-00 ಗಳನ್ನು ಪಾವತಿಸಿ ಸ್ಮಾರ್ಟ್ ಕಾರ್ಡನ್ನು ಪಡೆಯಬಹುದಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಇದುವರೆಗೆ ಪರಿಷತ್ತಿನ ಕಚೇರಿಗೆ ಬರಬೇಕಿದ್ದ ಕನ್ನಡಿಗರು, ಇನ್ನುಮುಂದೆ ಮನೆಯಲ್ಲಿಯೇ ಕುಳಿತು, ಸುಲಭವಾಗಿ ಆನ್ಲೈನ್ ಮೂಲಕ ಸದಸ್ಯತ್ವವನ್ನು ಪಡೆಯಲು ಸರಳವಾದ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಧುನಿಕ ಮೊಬೈಲ್ ಆ್ಯಪ್ ಅನ್ನು ಇದೀಗ ಸಿದ್ಧಪಡಿಸಿ, ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಹಸ್ತದಿಂದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ನಾಡೋಜ ಡಾ ಮಹೇಶ್ ಜೋಶಿಯವರ ನೇತೃತ್ವದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ .
ಈ ಆ್ಯಪ್ ಅನ್ನು ತಮ್ಮ ಮೊಬೈಲಿನಲ್ಲಿ ಅನುಸ್ಥಾಪಿಸಲು https://play.google.com/store/apps/details?id=com.knobly.kasapa ಈ ಕೊಂಡಿಯನ್ನು ಒತ್ತಿ.
ಜಾಲತಾಣದ ಮೂಲಕವೂ ಸದಸ್ಯತ್ವ ಪಡೆಯಲು https://kannadasahithyaparishattu.in/app ಈ ಲಿಂಕ್ ಬಳಸಿಕೊಳ್ಳಬಹುದಾಗಿದೆ.
ಎಂದು ನ್ಯಾಮತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶ್ರೀ ಡಿ ಎಂ ಹಾಲಾರಾಧ್ಯರು ಈ ಪ್ರಕಟಣೆಯ ಮೂಲಕ ತಾಲ್ಲೂಕಿನ ಎಲ್ಲ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು,ಸರ್ವಜನತೆಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿಯೊಬ್ಬ ಕನ್ನಡಿಗರು ಆಜೀವ ಸದಸ್ಯರಾಗಲು ಆಸಕ್ತರು ತಮ್ಮ
ಹೆಸರು
ಜನ್ಮದಿನಾಂಕ
ಆಧಾರ್ ಸಂಖ್ಯೆ
ವಿದ್ಯಾರ್ಹತೆ
ಉದ್ಯೋಗ
ರಕ್ತದ ಗುಂಪು
ಮೊಬೈಲ್ ಸಂಖ್ಯೆ
ವಿಳಾಸ
ಸಾಹಿತ್ಯಿಕ ಸಾಧನೆ ವಿವರ(ಇದ್ದರೆ ವಿವರ)
ವಿಶೇಷ ಸಾಧನೆ(ಇದ್ದರೆ ವಿವರ )
ಭಾವಚಿತ್ರ ಇತ್ತೀಚಿನ ಒಂದು ಭಾವಚಿತ್ರ ಹಾಗೂ
ನೊಂದಣಿ ಶುಲ್ಕ ಮತ್ತು ಸ್ಮಾರ್ಟ್ ಕಾರ್ಡ್ ಶುಲ್ಕ ಒಟ್ಟು 400 =00 (ನಾಲ್ಕು ನೂರು ರೂಪಾಯಿಗಳು) ಹಣದೊಂದಿಗೆ ತಮ್ಮ ವಿವರಗಳನ್ನು ನೀಡಿದರೆ ಸದಸ್ಯತ್ವ ನೋಂದಣಿ ಮಾಡಿಕೊಡಲಾಗುವುದು.ದಯವಿಟ್ಟು ಸದಸ್ಯತ್ವ ಪಡೆದು ಕೊಳ್ಳುವ ಅಪೇಕ್ಷೆ ಉಳ್ಳವರು ಅಧ್ಯಕ್ಷರಾದ ಡಿ ಎಂ ಹಾಲಾರಾಧ್ಯರು –9916245615
ನಿಕಟಪೂರ್ವ ಅಧ್ಯಕ್ಷರಾದ ನಿಜಲಿಂಗಪ್ಪನವರನ್ನು–8660734966 ಸಂಪರ್ಕಿಸಬಹುದಾಗಿದೆ
ಇಂದ:ಅಧ್ಯಕ್ಷರು -ಕಾರ್ಯದರ್ಶಿಗಳು
ನ್ಯಾಮತಿ ತಾ.ಕಸಾಪ.