ನ್ಯಾಮತಿ:
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಸೆ.10ರಂದು ಬೆಳಿಗ್ಗೆ 7-30ಕ್ಕೆ ಎಪಿಎಂಸಿ ಯಾರ್ಡ್‍ನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದೆ.
11ಕ್ಕೆ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಮಂಜುಳಾ ವಹಿಸಲಿದ್ದಾರೆ. ಶಾಸಕ ಎಂ.ಪಿ.ರೇಣುಕಾಚಾರ್ಯ ಸಭೆಯನ್ನು ಉದ್ಘಾಟಿಸಲಿದ್ದಾರೆ. ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡರು, ಡಾ.ಡಿ.ಬಿ.ಗಂಗಪ್ಪ, ತಹಶೀಲ್ದಾರ್ ಎಂ.ರೇಣುಕಾ, ಪಿಎಸ್‍ಐ ಪಿ.ಎಸ್. ರಮೇಶ, ಡಾ.ಮಹಾಲಕ್ಷ್ಮಿ, ಬಿ.ಕೆ.ಕೊಟ್ರೇಶಿ ಆಗಮಿಸಲಿದ್ದು. ಪೂಜೆ ನಂತರ ಸಾಮೂಹಿಕ ಪ್ರಸಾದ ವಿತರಣೆ ಏರ್ಪಡಿಸಲಾಗಿದೆ ಎಂದು ಸತ್ಯನಾರಾಯಣ ಪೂಜಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
