ನ್ಯಾಮತಿ:
ಪಟ್ಟಣದ ಬೇಡರ ಕಣ್ಣಪ್ಪ ದೇವಸ್ಥಾನದ 53ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸೆ. 10ರಂದು ಬೆಳಿಗ್ಗೆ 10-30ಕ್ಕೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಆಗಮಿಸಲಿದ್ದಾರೆ.
ಸಮುದಾಯದ ಹಿರಿಯರಾದ ತಿಮ್ಮಜ್ಜಿ ಹಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಲಿದ್ದಾರೆ. ಸಾಲುಮರದ ತಿಮ್ಮಕ್ಕ ಅವರಿಗೆ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಸನ್ಮಾನಿಸಲಿದ್ದಾರೆ.
ಎಸಿ ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್ ಎಂ.ರೇಣುಕಾ, ಪಿಎಸ್‍ಐ ಪಿ.ಎಸ್.ರಮೇಶ, ಸಮುದಾಯದ ಅಧ್ಯಕ್ಷ ಬಿ.ಸೋಮಶೇಖರ, ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಳ್ಳೂರು ಉಮೇಶ, ಸಿಒ ಬಿ.ಕೆ.ಕೊಟ್ರೇಶಿ ಆಗಮಿಸಲಿದ್ದಾರೆ.ಎಂದು ಸಮಿತಿಯವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *