ಹೊನ್ನಾಳಿ ಸೆಪ್ಟೆಂಬರ್ 9 ಪಟ್ಟಣದಲ್ಲಿರುವ ಹಿರೇಕಲ್ ಮಠ ಸಮುದಾಯ ಭವನದಲ್ಲಿ ಇಂದು ಶ್ರೀ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಯವರ ಪಟ್ಟಾಭಿಷೇಕ ಆಗಿ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯರವರು ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಭಾವಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ನೆರವೇರಿಸಿದರು.
ಹೊನ್ನಾಳಿ ಮಠದ ಪಟ್ಟ ಅಧ್ಯಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿ ಮಠದ ಸು ಸುಸಜ್ಜಿತವಾದ 100 ಹಾಸಿಗೆಯ ಆಸ್ಪತ್ರೆಯ ಕಟ್ಟಡದ ನೀಲಿ ನಕ್ಷೆ ಲ್ಯಾಬ್ ಟ್ಯಾಬ್ ನಲ್ಲಿ ಬಟನ್ ಒತ್ತುವುದರ ಮೂಲಕ ಆನ್ಲೈನ್ ನಲ್ಲಿ ಚಾಲನೆ ನೀಡಿದರು.
ಸ್ವಾಗತ ಭಾಷಣವನ್ನು ಸುರೇಶ್ ಹೊಸಕೇರಿ ನಡೆಸಿಕೊಟ್ಟರು.


ಶಾಸಕ ಎಂ ಪಿ ರೇಣುಕಾಚಾರ್ಯ ನಂತರ ಮಾತನಾಡಿ ಕೋಟಿ ದೀಪೋತ್ಸವ ಕೋಟಿ ಬಿಲ್ವಾರ್ಚನೆ ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿಯವರು ಹೊನ್ನಾಳಿ ಮಠಕ್ಕೆ ಅಧಿಕಾರ ವಹಿಸಿಕೊಂಡು 50 ವರ್ಷದ ತುಂಬಿದೆ ಆ ಗುರುಗಳು ಅನ್ನದಾಸೋಹ ಶಿಕ್ಷಣ ದಾಸೋಹ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯವನ್ನ ನಡೆಸಿಕೊಂಡು ಬಂದು ಈ ಮಠವನ್ನು ಉನ್ನತ ಮಟ್ಟಕ್ಕೆ ತರಲಿಕ್ಕೆ ಕಾರಣಿ ಬೂತರಾಗಿದ್ದಾರೆ ಅವರ ಸವಿನೆನಪಿಗಾಗಿ ಕೋಟಿ ದೀಪೋತ್ಸವ ಮತ್ತು ಬಿಲ್ವಾರ್ಚನೆಯ ಕಾರ್ಯಕ್ರಮ ಕಟ್ಟಡದ ಉದ್ಘಾಟನೆಗೆ ಅಕ್ಟೋಬರ್ 26ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ ಅವರು ಬಂದು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಉಪಸ್ಥಿತಿ ದಿಡಗೂರು ಅಣ್ಣಪ್ಪ ಸ್ವಾಮಿ ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಡಿ ಎಸ್ ಸುರೇಂದ್ರ ಗೌಡ ಡಿಸಿಸಿ ಬ್ಯಾಂಕಿನ ಹಾಲಿ ಸದಸ್ಯರಾದ ಷಣ್ಮುಖಪ್ಪ ಕೆಂಗಲಹಳ್ಳಿ ಸಾಧು ಲಿಂಗಾಯತ ಸಮಾಜದ ಅಧ್ಯಕ್ಷರಾದ ಎಚ್ಎ ಗದ್ಗೇಶಣ್ಣ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸಣ್ಣಕ್ಕೆ ಬಸನಗೌಡ, ಅರಬಗಟ್ಟಿ ರಮೇಶ್, ಪುರಸಭೆ ಅಧ್ಯಕ್ಷ ರಂಗಪ್ಪ, ಟಿಎಚ್ಒ ಕೆಂಚಪ್ಪ. ಸುರೇಶ್ ಹೊಸಕೇರಿ, ಕುಮಾರಸ್ವಾಮಿ, ಮಠದ ವ್ಯವಸ್ಥಾಪಕರಾದ ಎಚ್ ಎಮ್ ಚನ್ನಬಸಯ್ಯ ಈ ಮಠದ ಕಲಾವಿದರು ಮತ್ತು ಭಕ್ತರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *