ನ್ಯಾಮತಿ ಃ ಪುರತನ ಕಾಲದಿಂದಲೂ ನಡೆದು ಬಂದಿರುವ ‘ನಿಸರ್ಗ’ ಪೂಜೆಗೆ ಅತ್ಯುತ್ತಮ ಉದಾಹರಣೆಯಂತಿರುವ ‘ಭೂಮಿ ಹುಣ್ಣಿಮೆ’ ಹಬ್ಬ. ಈ ಹಬ್ಬವನ್ನು ಅರೆಮಲೆನಾಡಿನ ಭಾಗವಾಗಿರುವ ನ್ಯಾಮತಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ರೈತರು ಅತ್ಯಂತ ಸಂಭ್ರಮದಿಂದ ಭಾನುವಾರ ಆಚರಿಸಿದರು.
.ಭೂಮಿಹುಣ್ಣೆಮೆಯನು ಅತ್ಯಂತ ಸಂಭ್ರಮದಿಂದ ರೈತರು ಆಚರಿಸುತ್ತಾ ಬಂದಿದ್ದಾರೆ. ಸೀಮಂತ ಕಾರ್ಯದಂತೆ ಭೂತಾಯಿಗೆ ಪೂಜೆ ತುಂಬಿದ ತುಂಬಿದ ಗರ್ಭಿಣಿಯ ಇದು ಯಾವ ರೀತಿ ಬೈಕಿ ಶಾಸ್ತ್ರ ಮಾಡಿ ಆಕೆಗೆ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಅದೇ ರೀತಿಯಲ್ಲಿ ಈ ಭೂಮಿ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ ಇದಕ್ಕೆ ಜನಪ್ರಿಯ ಆಚರಣೆಗಳು ಅತ್ಯಂತ ವೈಶಿಷ್ಟ ಪೂರ್ಣವಾಗಿದೆ ಹಬ್ಬಕ್ಕೆ ಹೀರೆಕಾಯಿ ಕುಂಬಳಕಾಯಿ ಬದನೆಕಾಯಿ ಮೊದಲಾದ ತರಕಾರಿಗಳನ್ನು ಹೆಚ್ಚಿ ಭೂಮಿಗೆ ಬೀಸಲಾಗುತ್ತದೆ ರೈತರು ಇಪ್ಪತ್ತೈದು ಬಗ್ಗೆ ಹೆಚ್ಚು ವಿವಿಧ ಆಹಾರವನ್ನು ತಯಾರಿಸಿ ಭೂತಾಯಿಗೆ ನೈವೇದ್ಯ ಅರ್ಪಿಸುತ್ತಾರೆ.
ಕುಟುಂಬದವರೆಲ್ಲರೂ ಒಟ್ಟಿಗೆ ಸೇರಿ ಕೃಷಿ ಭೂಮಿಯಲ್ಲಿ ಊಟ ಮಾಡುತ್ತಾರೆ.ಆಧುನಿಕತೆಯಿಂದಾಗಿ ನಮ್ಮ ಅನೇಕ ಸಾಂಪ್ರದಾಯಿಕ ಆಚರಣೆಗಳು ಮೂಲೆಗೆ ಸರಿಯುತ್ತಿದ್ದರೂ ಭೂಮಿ ಹುಣ್ಣಿಮೆ ಹಬ್ಬದ ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿವೆ. ಈ ಹಬ್ಬದ ಆಚರಣೆಗಳು ನಿಸರ್ಗಕ್ಕೆ ಹತ್ತಿರವಾದದ್ದು ಮತ್ತು ನಿಸರ್ಗದಲ್ಲೆ ದೇವರನ್ನು ಕಾಣುವುದು ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ ಮೋಹನಕುಮಾರ್.

Leave a Reply

Your email address will not be published. Required fields are marked *