ಹೊನ್ನಾಳಿಯ ಹಿರೆಕಲ್ಮಠದ ಜಗದ್ಗುರು ಪಂಚಾಚಾರ್ಯ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿಸ್ಮೃತಿ ಹಾಗೂ ನವಜೀವನೊತ್ಸವ ಕಾರ್ಯಕ್ರಮ ಆಯೊಜಿಸಲಾಗಿತ್ತು, ಕಾರ್ಯಕ್ರಮವನ್ನು ಶಾಸಕರಾದ ಶ್ರೀ M P ರೆಣುಕಾಚಾರ್ಯರವರು ಉದ್ಘಾಟಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿ ಜೊತೆಗೆ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ‌ಅತ್ಯಂತ ಮಹತ್ವದ ಪಾತ್ರ ವಹಿಸಿಸುತ್ತಿದೆ ಎಂದು ಶುಭಕೊರಿದರು.ಪಾನಮುಕ್ತರ ನವಜಿವನ ಸದಸ್ಯರಿಗೆ ಅಭಿನಂದಿಸಲಾಯಿತು, ಪೌರಕಾರ್ಮಿಕರಿಗೆ ಅಭಿನಂದಿಸಲಾಯಿತು.ಮುಖ್ಯ ಅತಿಥಿಗಳಾಗಿ CPI ಶ್ರಿ ಸಿದ್ದನಗೌಡರವರು ಭಾಗವಹಿಸಿ ಮಾತನಾಡಿದರು, ಜನಜಾಗೃತಿ ವೇದಿಕೆ ಯೊಜನಾಧಿಕಾರಿ ಶ್ರೀ ನಾಗರಾಜ್ ಪ್ರಧಾನ ಭಾಷಣ ಮಾಡಿ ನವಜಿವನ ಸದಸ್ಯರ ಮುಂದಿನ ಭವಿಷ್ಯ ನಿರ್ಮಾಣ ಮಾಡಿಕೊಂಡು ಉತ್ತಮ ಜೀವನ ನಡೆಸುವ ಮಾರ್ಗಗಳ ಮಾಹಿತಿ ನಿಡಿದರು. ಜಿ.ಜನ ಜಾಗೃತಿ ವೆದಿಕೆ ನಿಕಟಪೂರ್ವ ಅಧ್ಯಕ್ಷ ಸುರೇಶ್ ಹೊಸ್ಕೆರಿ ಅಧ್ಯಕ್ಷತೆ ವಹಿಸಿದ್ದರು.ಹಿರೆಕಲ್ಮಠದ ವ್ಯವಸ್ಥಾಪಕ ಶ್ರೀ ಪ್ರಭು ಗೌಡ, ಜಿ ಜ ಜಾಗೃತಿ ವೆದಿಕೆ ಸದಸ್ಯರು ಭಾಗವಹಿಸಿದ್ದರು. ನವಜಿವನ ಸದಸ್ಯರು, ಅವರ ಕುಟುಂಬದವರು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು. ಸಭೆಯಲ್ಲಿ ಜನಜಾಗೃತಿ ವೆದಿಕೆ ವತಿಯಿಯಿಂದ ಹಕ್ಕೊತ್ತಾಯ ಮಂಡಿಸಿ CPI ರವರ ಮೂಲಕ ಮಾನ್ಯ ಮುಖ್ಯಮಂತ್ರಯವರಿಗೆ ಹಕ್ಕೊತ್ತಾಯ ನಿರ್ಣಯ ಸಲ್ಲಿಸಲಾಯಿತು ಯೊಜನಾಧಿಕಾರಿ ಬಸವರಾಜ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಕೊರಿದರು. ಯೊಜನಾಧಿಕಾರಿ ಕಾರ್ಯಕ್ರಮ ನಿರ್ವಹಿಸಿದರು. ಮೆಲ್ವಿಚಾರಕ ಬಸ್ಸಪ್ಪ ಧನ್ಯವಾದ ಕೊರಿದರು.ವಲಯ ಮೆಲ್ವಿಚಾರಕರು, ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *