ನ್ಯಾಮತಿ: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ(ಮುನಿಸಿಪಾಲಿಟಿ) ಯೋಜನೆ ಅಡಿಯಲ್ಲಿ ನ್ಯಾಮತಿ ಪಟ್ಟಣದ ವಾರ್ಡ್‍ಗಳಲ್ಲಿ ರೂ. 2.61 ಕೋಟಿ ವಿವಿಧ ಕಾಮಗಾರಿಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.
ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಗಮಹರಿಸುವೆ.
ನ್ಯಾಮತಿ:
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್‍ಗಳಿಗೆ ಆದ್ಯತೆ ಮೇಲೆ ಮೂಲ ಸೌಲಭ್ಯ ಹಾಗೂ ರಸ್ತೆ,ಚರಂಡಿ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ(ಮುನಿಸಿಪಾಲಿಟಿ) ಯೋಜನೆ ಅಡಿಯಲ್ಲಿ ಪಟ್ಟಣ ಪಂಚಾಯಿತಿಗೆ ಒಟ್ಟು 6 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪ್ರಸ್ತುತ ಪಟ್ಟಣದ ವಾರ್ಡ್‍ಗಳಲ್ಲಿ ಈಶ್ವರಿ ವಿಶ್ವವಿದ್ಯಾನಿಲಯ ರಸ್ತೆ(25 ಲಕ್ಷ),ಚಂದ್ರಹಾಸ ಲೇಔಟ್ ಚರಂಡಿ ಸಿಡಿ ನಿರ್ಮಾಣ(25), ಶಿವಾನಂದಪ್ಪ ಬಡಾವಣೆ(20), ವಿನೋಬನಗರ ಸಿಡಿ ರಸ್ತೆಚರಂಡಿ(45), ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿಚರಂಡಿ ನಿರ್ಮಾಣ(15),ವಾಲ್ಮೀಕಿ ಬೀದಿಯಲ್ಲಿಚರಂಡಿ ಮತ್ತುಕವರ್‍ಸ್ಲ್ಯಾಬ್ ನಿರ್ಮಾಣ(24),ತುಂಬುಹಳ್ಳ ರಸ್ತೆ ಬಾಕ್ಸ್‍ಚರಂಡಿ (34), ಎ.ಕೆ.ಕಾಲೋನಿ ಸಿಸಿ ಡ್ರೈನ್ ನಿರ್ಮಾಣ(25),ದಾನಹಳ್ಳಿ ರಸ್ತೆಚರಂಡಿ ನಿರ್ಮಾಣ(20), ಕೋವೇರ ಬೀದಿ ಎರಡು ಬದಿ ಚರಂಡಿ ನಿರ್ಮಾಣ(16) ರೂ. 2.61 ಕೋಟಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆಎಂದರು.
ಪಟ್ಟಣ ಪಂಚಾಯಿತಿ 11 ವಾರ್ಡ್‍ಗಳ ವಿಂಗಡಣೆ ಕಾರ್ಯ ಮುಗಿದಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ನಡೆದಿದೆ ಹಾಗೂ ಸರ್ಕಾರದಿಂದ ಮೀಸಲಾತಿ ಘೋಷಣೆಯಾದ ನಂತರ ಚುನಾವಣೆ ಪ್ರಕ್ರಿಯೆ ನಡೆಯಲಿದೆ.ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ.ಕೆ.ಕೊಟ್ರೇಶಿ, ಜೂನಿಯರ್ ಎಂಜಿನಿಯರ್ ದೇವರಾಜನಾಯ್ಕ, ಗುತ್ತಿಗೆದಾರ ದಾವಣಗೆರೆ ಎ.ಜಿ.ಪಂಚಪ್ಪ, ಸ್ಥಳೀಯ ಗುತ್ತಿಗೆದಾರ ಟಿ.ಎಂ.ಕುಮಾರಸ್ವಾಮಿ, ಪಟ್ಟಣದ ಬಿಜೆಪಿ ಮುಖಂಡರು ಇದ್ದರು.
ಆಂಜನೇಯಸ್ವಾಮಿ ದೇವಸ್ಥಾನz Àಆರ್ಚಕ ಜಯಲಿಂಗಸ್ವಾಮಿ ಪೂಜಾಕಾರ್ಯಕ್ರಮ ನೆರವೇರಿಸಿದರು