ಹೊನ್ನಾಳಿ : ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಪ್ರಚಾರಕ್ಕಾಗಿ, ಮೋಜು ಮಸ್ತಿಗಾಗೀ ಮಾಡುತ್ತಿಲ್ಲಾ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೊಡ ಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರಿಗಳು ಹಾಗೂ ಸರ್ಕಾರ ಜನರ ಮನೆ ಬಾಗಿಲಿಗೆ ಹೋಗ ಬೇಕೆಂಬ ಉದ್ದೇಶದಿಂದ ನನ್ನ ಸರ್ಕಾರ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಈ ಕಾರ್ಯಕ್ರಮಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರುವುದಿಲ್ಲಾ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಮುಖಂಡರು ನೀಡಿದ ಹಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದು, ಅವಳಿ ತಾಲೂಕಿನ ಪ್ರತಿಯೊಂದು ಗ್ರಾ.ಪಂನಲ್ಲಿ ಮಾಡಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ನಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಮುಕ್ತೇನಹಳ್ಳಿ, ಕೆಂಗಲಹಳ್ಳಿ,ಕೆಂಗಲಹಳ್ಳಿ ಗ್ರಾಮಗಳ ಪ್ರತಿಯೊಂದು ರಸ್ತೆಗಳನ್ನು ಸಿಸಿ ರಸ್ತೆ ಮಾಡಿಸಿದ್ದು ಪ್ರತಿಯೊಂದು ಗ್ರಾಮಕ್ಕೂ ಕೋಟ್ಯಾಂತರ ರೂಪಾಯಿ ಅನುದಾನವನ್ನು ಹಾಕಿ ಗ್ರಾಮಗಳನ್ನು ಅಭಿವೃದ್ದಿ ಮಾಡಿದ್ದೇನೆ ಎಂದರು.
ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬುವಂತೆ ನಾನು ಯಾವುದೇ ಗ್ರಾಮಕ್ಕೂ ತಾರತಮ್ಯ ಮಾಡಿಲ್ಲಾ ಎಲ್ಲಾ ಗ್ರಾಮಗಳಿಗೆ ಸಮಾನವಾಗಿ ಅನುದಾನವನ್ನು ಹಾಕಿ ಅಭಿವೃದ್ದಿ ಮಾಡಿದ್ದೇನೆ ಎಂದರು.
ಅವಳಿ ತಾಲೂಕಿನಾಧ್ಯಂತ ನೀರಾವರಿಗೆ ಹೆಚ್ಚಿನ ಅಧ್ಯತೆ ನೀಡುವುದರ ಜೊತೆಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ವಿಭಾಗಕ್ಕೂ ಪ್ರಾಮುಖ್ಯತೆ ನೀಡಿ ಅವಳಿ ತಾಲೂಕುಗಳನ್ನು ಶಕ್ತಿ ಮೀರಿ ಅಭಿವೃದ್ದಿ ಮಾಡಿದ್ದೇನೆ ಎಂದರು.
ನಾನು ಎಂದು ರಾಜಕಾರಣ ಮಾಡಿಲ್ಲಾ, ನನಗೆ ಅದರ ಅವಶ್ಯಕತೆಯೂ ಎಲ್ಲಾ ಶಾಸಕರು, ಸಾಮಾನ್ಯ ಶಿಕ್ಷಕನ ಮಗನನ್ನು ಅವಳಿ ತಾಲೂಕಿನ ಜನರು ಮೂರು ಬಾರೀ ಶಾಸಕನ್ನಾಗಿ ಮಾಡಿದ್ದು, ನಾನು ಸದಾ ಅವರಿಗೆ ಚಿರ ಋಣಿ ಎಂದರು.
ಕೆಂಗಲಹಳ್ಳಿ ಮುಕ್ತೇನಹಳ್ಳಿ ರಸ್ತೆ ಅಭಿವೃದ್ದಿ ಕಾಮಗಾರಿ ಪ್ರಗತಿಯಲ್ಲಿದ್ದು ಗುತ್ತಿಗೆದಾರ ಕಾಮಗಾರಿ ಕಳಪೆ ಮಾಡುತ್ತಿದ್ದು ಕೂಡಲೇ ಆತನಿಗೆ ನೋಟಿಸ್ ನೀಡಿ, ಕಪ್ಪುಪಟ್ಟಿಗೆ ಸೇರಿಸುವಂತೆ ಇದೇ ವೇಳೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಾರು ದಕ್ಷತೆಯಿಂದ ಕೆಲಸ ಮಾಡುತ್ತಾರೋ ಅವರನ್ನು ನಾನು ಹೊಗಳುತ್ತೇನೆಂದ ಶಾಸಕರು, ತಹಶೀಲ್ದಾರ್ ರಶ್ಮಿ ಅವರಿಗೆ ಕೆಎಎಸ್ ಮಾಡಿದ್ದು ಮುಂದೆ ಎಸಿ ಆಗುತ್ತಾರೆ ಎಂದರು.
ಟ್ಯಾಕ್ಟರ್ ಚಲಾಯಿಸಿ ಶಾಸಕರು : ಮುಕ್ತೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಟ್ಯಾಕ್ಟರ್ ಚಲಾಯಿಸುವ ಮೂಲಕ ಗಮನ ಸೆಳೆದರು. ಇನ್ನು ಶಾಸಕರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಪೂರ್ಣಕುಂಭದೊಂದಿಗೆ ಸ್ವಾಗತ ಮಾಡಿ ಗ್ರಾಮದಾಧ್ಯಂತ ಶಾಸಕರನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಗಮನ ಸೆಳೆದವು.
ವಿವಿಧ ಸವಲತ್ತುಗಳ ವಿತರಣೆ : ಮುಕ್ತೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ 8, ಇಂದಿರಾಗಾಂಧಿ ವೃದ್ಯಾಪ್ಯ ಯೋಜನೆಯಡಿ 33, ಮನಸ್ವಿನಿ ಯೋಜನೆ ಮೂಲಕ 1,ವಿಧವಾ ವೇತನ 04, ಬಗರ್ ಹುಕ್ಕುಂ ಸಾಗುವವಳಿ 5, 94 ಸಿ ಅಕ್ರಮ ಸಕ್ರಮದಡಿ ಮನ ಮಂಜೂರಾತಿ ಹಕ್ಕು ಪತ್ರ 11 ಫಲಾನುಭವಿಗಳು ಸೇರಿ ಒಟ್ಟು 62 ಜನರಿಗೆ ಆದೇಶ ಪತ್ರ ವಿತರಿಸಲಾಯಿತು.ಇದೇ ಏಳು ಜನರಿಗೆ ಸೀಮಂತ ಕಾರ್ಯ ನೆರವೇರಿಸಲಾಯಿತು.
ಈ ವೇಳೆ ತಹಶೀಲ್ದಾರ್ ರಶ್ಮಿ,ಇಓ ರಾಮಬೋಬಿ, ಬಗರ್‍ಹುಕ್ಕುಂ ಕಮಿಟಿ ಅಧ್ಯಕ್ಷ ನಾಗರಾಜ್, ಸದಸ್ಯ ಶಾಂತರಾಜ್ ಸೇರಿದಂತೆ ಗ್ರಾ,ಪಂ ಅಧ್ಯಕ್ಷರಾದ ಯಶೋಧಮ್ಮ, ಉಪಾಧ್ಯಕ್ಷ ಹನುಮಂತಪ್ಪ ಸದಸ್ಯರಾದ ಪುಪ್ಪ, ಹನುಮಂತಪ್ಪ,,ಬಾಲಪ್ಪ, ಕಲ್ಲೇಶ್,ಮಹಂತೇಶ್, ಶಾರದಮ್ಮ ಸೇರಿದಂತೆ ಗ್ರಾಮದ ಮುಖಂಡರು ವಿವಿಧ ಇಲಾಖೆ ಅಧಿಕಾರಿಗಳಿದ್ದರು.