ಇಂದಿನ ಆಧುನಿಕ ಯುಗದಲ್ಲಿ ಶಿಲ್ಪಿಕಲೆ ನಶಿಸಿಹೋಗುತ್ತಿದೆ.. ಅಮರ ಶಿಲ್ಪಿ ಜಕಣಾಚಾರಿ ಅವರ ಪರಂಪರೆಯನ್ನು ನಾವು ಉಳಿಸಿ ಬೆಳೆಸೋಣ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ಹೇಳಿದರು.
ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಇವರ ಸಂಯುಕ್ತಶ್ರಯದಲ್ಲಿ, ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಕಣಾಚಾರಿ ತಮ್ಮ ಜೀವನವನ್ನೇ ಶಿಲ್ಪ ಕಲೆಗಾಗಿ ಮುಡಿಪಿಟ್ಟಿದ್ದರು ಅವರ ಕೆತ್ತನೆಯ ಬೇಲೂರಿನ ಚನ್ನಕೇಶವ ದೇವಾಲಯವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದು, ಇದು ಅವರ ಅತ್ಯಂತ ಮಹತ್ತರವಾದ ಕೊಡುಗೆಯಾಗಿದೆ,ಇಂತಹ ಅದ್ಬತ ಕಲಾಕೃತಿಯನ್ನು ಉಳಿಸುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ . ಆಧುನಿಕ ಯುಗದಲ್ಲಿ ಶಿಲ್ಪ ಕಲಾ ಕೆತ್ತನೆ ಕಲೆಯು ನಶಿಸಿ ಹೋಗುತ್ತಿದ್ದು, ಇದನ್ನು ಉಳಿಸಿಕೊಂಡು ಹೋಗುವಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಬಿ.ವಿ ಶಿವಾನಂದ್ ಅವರು ಮಾತನಾಡಿ ಅಮರಶಿಲ್ಪಿ ಜಕಣಾಚಾರಿ ಈ ನಾಡಿನ ಕೊಡುಗೆಯಾಗಿದ್ದಾರೆ, ಇಂದಿನ ದಿನಗಳಲ್ಲಿ ಶಿಲ್ಪಿಗಳ ಸಂಖ್ಯೆ ಕಡಿಮೆ ಆಗುತ್ತಿದೆ ಆದ್ದರಿಂದ ಪ್ರತೀ ಜಿಲ್ಲೆಯಲ್ಲೂ ಶಿಲ್ಪ ಕಲಾ ಕೇಂದ್ರವನ್ನು ತೆರೆಯಲು ಸರ್ಕಾರ ಗಮನ ಹರಿಸಬೇಕು ಇದರಿಂದ ಶಿಲ್ಪಿಗಳ ಜೀವನ ಮಟ್ಟವನ್ನು ಸುಧಾರಿಸಬಹುದು ಮತ್ತು ಶಿಲ್ಪಕಲಾ ಕೌಶಲ್ಯವನ್ನು ಉಳಿಸಿಕೊಂಡು ಹೋಗಬಹುದು ಎಂದರು.
ನಾಗರಾಜ್ ಆಚಾರ್, ದಾವಣಗೆರೆ ಜಕಣಾಚಾರಿ ಜೀವನ ಚರಿತ್ರೆ ಮತ್ತು ಸಾಧನೆಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ದುರ್ಗಾ ಶ್ರೀ. ಗೌರವಕಾರ್ಯದರ್ಶಿ ಎನ್ ಪೂರ್ವಾಚಾರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ರವಿ ಚಂದ್ರ. ಬಸಾಪುರ ನಾಗೇಂದ್ರ ಸತೀಶ್ ಇತರರು ಉಪಸ್ಥಿತರಿದ್ದರು
