ನ್ಯಾಮತಿ : ಒಂದು ವರ್ಷದ ಅವಧಿಯಲ್ಲಿ ನೂರು ಕೋಟಿಗೂ ಹೆಚ್ಚು ಅನುದಾನವನ್ನು ತಂದು ನ್ಯಾಮತಿ ಪಟ್ಟಣವನ್ನು ಸಮಗ್ರ ಅಭಿವೃದ್ದಿ ಮಾಡಲಾಗುತ್ತಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ,ಪ್ರಧಾನಮAತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು ಯೋಜನೆಯಡಿಯಲ್ಲಿ ೧೦೦ ಮನೆಗಳ ನಿರ್ಮಾಣ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಇದ್ದ ನ್ಯಾಮತಿಯನ್ನು ಪಟ್ಟಣ ಪಂಚಾಯಿತಯನ್ನಾಗಿ ಮೇಲ್ಡರ್ಜೆಗೇರಿಸಲಾಗಿದ್ದು, ನ್ಯಾಮತಿ ಪಟ್ಟಣದಲ್ಲಿ ಮೂರು ಸ್ಲಂಗಳನ್ನು ಗುರುತಿಸಲಾಗಿದ್ದು, ಈ ಮೂರು ಸ್ಲಂಗಳಲ್ಲಿ ೧೦೦ ಮನೆಗಳನ್ನು ನಿರ್ಮಾಣ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಈಗಾಗಲೇ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದ ಶಾಸಕರು, ಕಳಪೆ ಕಾಮಗಾರಿ ಮಾಡಿದರೇ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲಾ ಎಂದು ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದ್ದೇನೆ ಎಂದರು.
ರಾಜ್ಯ ಸರ್ಕಾರ ನಗರೋತ್ತಾನ ಯೋಜನೆ ಜಾರಿಗೆ ತಂದಿದ್ದು ನಗರೋತ್ತಾನ ಯೋಜನೆ ಮೂಲಕ ನ್ಯಾಮತಿ ಪಟ್ಟಣಕ್ಕೆ ಆರು ಕೋಟಿ ಅನುದಾನ ತಂದಿದ್ದು ಇದರಿಂದ ನ್ಯಾಮತಿ ಪಟ್ಟಣವನ್ನು ಅಭಿವೃದ್ದಿ ಮಾಡಲಾಗುತ್ತಿದೆ ಎಂದರು.
ನ್ಯಾಮತಿ ಪಟ್ಟಣಕ್ಕೆ ಶುದ್ದ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಾಮಗಾರಿಗೆ ೭೪ ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದ ಶಾಸಕರು, ನ್ಯಾಮತಿ ಪಟ್ಟಣದಾಧ್ಯಂತ ಎರಡು ಕೋಟಿಗೂ ಹೆಚ್ಚು ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿ ಮಾಡಲಾಗಿದೆ ಎಂದರು.
ನ್ಯಾಮತಿ ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿನಿಲಯಕ್ಕೆ ಮೂರು ಕೋಟಿ, ಪದವಿ ಕಾಲೇಜು ಅಭಿವೃದ್ದಿಗೆ ಮೂರು ಕೋಟಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಅಭಿವೃದ್ದಿಗೆ ೨.೫೦ ಕೋಟಿ, ಪ್ರವಾಸಿ ಮಂದಿರ ಐದು ಕೋಟಿ ರೂಪಾಯಿ, ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಮೂರು ಕೋಟಿ ರೂಪಾಯಿ ಸೇರಿದಂತೆ ನೂರಾರು ಕೋಟಿ ಅನುದಾನವನ್ನು ನ್ಯಾಮತಿ ಪಟ್ಟಕ್ಕೆ ತಂದು ಅಭಿವೃದ್ದಿ ಮಾಡಲಾಗುತ್ತಿದೆ ಎಂದರು. ನ್ಯಾಮತಿ ಪಟ್ಟಣದಲ್ಲಿ ಅಲಂಕಾರಿಕ ದೀಪಗಳ ಅಳವಡಿಕೆ ಜೊತೆಗೆ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ೨೫ ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು
ಹತ್ತು ಹಾಸಿಗೆ ಇದ್ದ ನ್ಯಾಮತಿ ಸಾರ್ವಜನಿಕ ಆಸ್ಪತ್ರೆಯನ್ನು ಮೂವತ್ತು ಹಾಸಿಗೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು, ಇದೀಗ ನೂರು ಹಾಸಿಗೆ ಆಸ್ಪತ್ರೆಯನ್ನಾಗಿ ಮಾಡಲು ಮನವಿ ಮಾಡಿದ್ದೇನೆ ಎಂದರು.
ಅದೇ ರೀತಿ ನ್ಯಾಮತಿ ತಾಲೂಕು ಕಚೇರಿ ಆಡಳಿತ ಸೌಧಕ್ಕೂ ಮನವಿ ಮಾಡಿದ್ದು ಅದು ಕೂಡ ಸದ್ಯದರಲ್ಲೇ ಮಂಜೂರು ಮಾಡಿಸುವುದಾಗಿ ಹೇಳಿದ ಶಾಸಕರು ಈ ರೀತಿಯಾಗಿ ನ್ಯಾಮತಿ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ದಿ ಮಾಡುತ್ತಿದ್ದೇನೆ ಎಂದರು.
ಶಿವಾನAದಪ್ಪ ಬಡಾವಣೆಯ ಮನೆಗಳ ಸಮಸ್ಯೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈಗ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ರೂ ೭.೫೦ ಲಕ್ಷ ಅಂದಾಜಿನ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಪಿ ರವಿಕುಮಾರ್, ಮುಖಂಡರಾದ ಗಿರೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೊಟ್ರೇಶ್, ಸ್ಲಂ ಮಂಡಳಿ ಇಂಜಿನಿಯರ್ ಜೆ.ಎಂ.ಸಿದ್ದಾರ್ಥ ಸೇರಿದಂತೆ ಮತ್ತೀತರರಿದ್ದರು.
