ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಯುಗ ಪುರುಷ ಎಂದೆ ಖ್ಯಾತರಾದ ಶ್ರೀ ಸವಿತಾ ಮಹರ್ಷಿಗಳ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ತಾಲೂಕು ಉಪ ವಿಭಾಗಾಧಿಕಾರಿ ಹುಲ್ಲಮನಿ ತಿಮ್ಮಣ್ಣ ತಿಳಿಸಿದರು.
ತಾಲೂಕ್ ಆಡಳಿತ ಹಾಗೂ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದ ಅವರು
ಸಕಲ ಜೀವರಾಶಿಗಳಿಗೆ ಸೂರ್ಯನು ಹೇಗೆ ಅವಶ್ಯಕವಾಗಿದ್ದಾನೂ ಹಾಗೆ ಆಧುನಿಕ ಕಾಲದ ಸಕಲರಿಗೂ ಸವಿತ ಸಮಾಜದ ಸೇವೆ ಅಗತ್ಯವಾಗಿದೆ. ಧಾರ್ಮಿಕವಾಗಿ ಶಿವನ ಎಡಗಣ್ಣಿನಿಂದ ಹುಟ್ಟಿದ ಸವಿತ ಮಹರ್ಷಿಯು ದೇವಾನು ದೇವತೆಗಳ ಆಯುಷ್ಕಾರ್ಯಗಳನ್ನು ಮಾಡುತ್ತಿದ್ದ ಈ ನಿಟ್ಟಿನಲ್ಲಿ ಸಮಾಜದವರು ಕೂಡ ವೃತ್ತಿಯನ್ನಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ತಳಸಮುದಾಯದ ಸವಿತಾ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸದೃಡರಾಗಿ, ಸಂಘಟಿತರಾಗುವ ಮೂಲಕ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ತಿರುಪತಿ ಪಟೇಲ್. ಸಮಾಜದ ಅಧ್ಯಕ್ಷರಾದ ನಾಗರಾಜ್ ಸಾಸಿವೆಹಳ್ಳಿ. ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಮಾಜದ ಮುಖಂಡರುಗಳು ಸಹ ಭಾಗಿಯಾಗಿದ್ದರು.