ನ್ಯಾಮತಿ:ತಾಲ್ಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಗಾಗಿ ಚರ್ಚಿಸಲು ಜ.31ರ ಸಂಜೆ 4 ಗಂಟೆಗೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಬಿ.ವಿ.ಗಿರೀಶಬಾಬು ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯನ್ನು ಫೆಬ್ರವರಿ 3ರ ಸಂಜೆ 4 ಗಂಟೆಗೆ ಮುಂದೂಡಲಾಗಿದೆ.
ತಹಶೀಲ್ದಾರ್ ಅವರು ತರಬೇತಿಗೆ ತೆರಳಿರುವುದರಿಂದ ಅವರ ಸೂಚನೆಯಂತೆ ಸಭೆ ಮುಂದೂಡಲಾಗಿದೆ. ಎಂದಿನಂತೆ
ಈ ಸಭೆಗೆ ಕನ್ನಡಾಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರುಗಳು, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ಶಾಲಾ-ಕಾಲೇಜುಗಳು ಮುಖ್ಯಸ್ಥರು, ರೈತಪರ ಸಂಘಟನೆಗಳು, ವಿವಿಧ ಮಹಿಳಾ ಸಂಘಟನೆಗಳು ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ,ಸಹಕಾರ ನೀಡಬೇಕು ಎಂದು ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಂ.ಜಿ.ಬಸವರಾಜಪ್ಪ ಮತ್ತು ಬಿ.ಜಿ.ಚೈತ್ರಾ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *