ನ್ಯಾಮತಿ: ಪಟ್ಟಣದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ವತಿಯಿಂದ ತ್ರಿಮೂರ್ತಿ ಮಹಾಶಿವರಾತ್ರಿ ಜಾತ್ರೆ ಪ್ರಯುಕ್ತ ಸದ್ಭಾವನ ಶಾಂತಿ ಯಾತ್ರೆಯು ಪಟ್ಟಣದ ಪ್ರಮುಖ ರಾಜಬೀದಿಯಲ್ಲಿ ವೀರಗಾಸೆ ಸಮಾಳದೊಂದಿಗೆ 108 ಲಿಂಗವನ್ನು ವಾಹನಗಳ ಮೂಲಕ ಯಾತ್ರೆಯಲ್ಲಿ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಪರಮಾತ್ಮನನ್ನು ಜಪ ಮಾಡುತ್ತಾ ಸುರಹೊನ್ನೇ ಗ್ರಾಮಕ್ಕೂ ತೆರಳಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಓಂ ಶಾಂತಿ ಭವನಕ್ಕೆ ಬಂದು ಶಿವಧ್ವಜ ಹಾರಿಸಿ, ನಂತರ 108 ಲಿಂಗವನ್ನು ಗದ್ದಿಗೆಯಲ್ಲಿ ಕುಳ್ಳರಿಸಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು .
ಬ್ರಹ್ಮಕುಮಾರಿ ವಂದನ ಯಾತ್ರೆ ಮುಗಿಸಿ ನಂತರ ಮಾತನಾಡಿದ ಅವರು ಈ ಭೂಮಿಯಲ್ಲಿ ಪರಮಾತ್ಮನು ದಿವ್ಯ ಅವತರಣೆಯಾಗಿದೆ ಇಂದಿನ ಜಾಗರಣೆ ಉಪವಾಸದ ಅರ್ಥ ಉಪ ಎಂದರೆ ಹತ್ತಿರ ವಾಸ ಎಂದರೆ ಇರುವುದು, ಮನಸು ಬುದ್ದಿಯಿಂದ ಭಗವಂತನ ಸಮೀಪ ಇರುವುದು. ಜಾಗರಣೆ ಎಂದರೆ ಅಸೂಯೆ ಪ್ರವೃತ್ತಿ ಅಜ್ಞಾನ ನಿದ್ದೆ ವಿಕಾರಗಳು ನಮ್ಮಲ್ಲಿ ಬರದೇ ಇರುವಂತೆ ಜಾಗೃತಿಯಾಗಿರುವುದೆ ಜಾಗರಣೆ ಎಂದು ತಿಳಿಸಿದರು. ಯಾತ್ರಿಯ ಸಂದರ್ಭದಲ್ಲಿ ನ್ಯಾಮತಿ ತಾಲೂಕಿನ ಈ ಈಶ್ವರಿ ವಿಶ್ವವಿದ್ಯಾಲಯದ ಪರಿವಾರದವರು ಪಾಲ್ಗೊಂಡಿದ್ದರು.