ನ್ಯಾಮತಿ: ತಾಲೂಕಿನ ಕುಂಕುವ ಗ್ರಾಮದ ಮುಂಬಾಗಿಲು ಭಾಗದಲ್ಲಿರಿವ ಕೆರೆಯ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ ರವರು ನಾಮಫಲಕ ಅನಾವರಣ ಮಾಡಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಯೋಜನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮ ವಿಶೇಷವಾಗಿದ್ದು ಬಹಳ ಶಿಸ್ತಿನಿಂದ ಮಹಿಳೆಯರು ಸಂಘಗಳ ವ್ಯವಹಾರವನ್ನು ನಡೆಸಬೇಕು ಹಾಗೂ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಪರಿಸರ ಉಳಿಸಿ ಕೊಂಡು ಹೋಗಬೇಕು ಎಂದರು.
ಯೋಜನೆಯ ಹಿರಿಯ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ್ ನಾಗನಾಳ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತವಿಕ ಮಾತನಾಡಿದ ಅವರು ಡಾಕ್ಟರ್ ಡಿ ವೀರೇಂದ್ರ ಹೆಗಡೆಯವರು ಹಾಗೂ ಡಾಕ್ಟರ್ ಹೇಮಾವತಿ ವಿ ಹೆಗಡೆಯವರ ಮಾರ್ಗದರ್ಶನದಲ್ಲಿ ಹೊನ್ನಾಳಿ ಯೋಜನಾಧಿಕಾರಿ ಕಚೇರಿ ಮತ್ತು ಕುಂಕೋವ ಗ್ರಾಮ ಪಂಚಾಯಿತಿ ಹಾಗೂ ಕುಂಕುಮ ಗ್ರಾಮದ ಮುಂಭಾಗಲಿನಲ್ಲಿರುವ ಸಮಿತಿ ಸಹಕಾರದೊಂದಿಗೆ 533ನೇ ನಮ್ಮೂರು ನಮ್ಮ ಕೆರೆ ಹೂಳ ತೆಗೆಯುವ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ 2,6870 ಹಾಗೂ ಕುಂಕುವ ಗ್ರಾಮಸ್ಥರಿಂದ ಹೂಳೆತ್ತುವ ಸಾಗಾಟ ಮೌಲ್ಯ 1,26,600ರೊಂದಿಗೆ ಸೇರಿ ಒಟ್ಟುಕೆರೆ ಕಾಮಗಾರಿಯ ವೆಚ್ಚ 33470 ರೂ ಖರ್ಚು ಮಾಡಿ ಕೆರೆ ಕಾಮಗಾರಿ ನಡೆಸಲಾಗಿದೆ ಎಂದು ತಿಳಿಸಿ ನೀರು ತುಂಬಿದ ಕೆರೆ ಗ್ರಾಮಕ್ಕೆ ಎಷ್ಟು ಮುಖ್ಯವೊ ಅಷ್ಟೇ ಕೆರೆಯಿಂದ ಉಪಯೋಗ ಹಾಗೂ ಅನುಕೂಲಗಳ ಬಗ್ಗೆ ನಮ್ಮ ಜವಾಬ್ದಾರಿ ಹಾಗೂವಿಶೇಷವಾಗಿ ಕೆರೆಯನ್ನು ಸ್ವಚ್ಛತೆ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ಕೆರೆ ಸಮಿತಿ ಅಧ್ಯಕ್ಷ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಸುನಿಲ್, ಕುಮಾರ್ ಯೋಜನಾಧಿಕಾರಿಗಳಾದ ಬಸವರಾಜ್ ಅಂಗಡಿ, ಅಭಿಯಂತರರಾದ ಮಂಜುನಾಥ್, ಶಶಿಧರ್, ಕೆರೆ ಸಮತಿಯ ಎಲ್ಲಾ ಸದಸ್ಯರು, ಒಕ್ಕೂಟ ಅಧ್ಯಕ್ಷ ಸೋಮಶೇಖರ್, ಜನಜಾಗೃತಿ ವೇದಿಕೆ ಸದಸ್ಯರಾದ ರುದ್ರೇಶ್, ಶ್ರೀನಿವಾಸ್, ನಟರಾಜ್ ಹಾಗೂ ಬಸವರಾಜ್, ಶಿವು,ತೋಟಪ್ಪ ಸೇವಾಪ್ರತಿನಿಧಿ ಗೀತಾ ಶಿಲ್ಪಾ ಉಪಸ್ಥಿತರಿದ್ದರು, ಕಾರ್ಯಕ್ರಮದ ನಿರೂಪಣೆ ಕೃಷಿ ಅಧಿಕಾರಿ ಪ್ರೇಮ್ ಕುಮಾರ್ ನಡೆಸಿಕೊಟ್ಟರು, ಮೇಲ್ವಿಚಾರಕ ಪ್ರಕಾಶ್ ವಂದಿಸಿದರು,