ನ್ಯಾಮತಿ: 20 23ನೇ ಸಾಲಿನ ವಿಧಾನಸಭಾ ಚುನಾವಣೆಯ ಘೋಷಣೆಯಾಗಿ ನೀತಿ ಸಂಹಿತೆ ಬಂದಿರುವ ಹಿನ್ನೆಲೆಯಲ್ಲಿ
ಕಂದಾಯ ಇಲಾಖೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಪಟ್ಟಣದ ವಿವಿಧ ಭಾಗದಲ್ಲಿರುವ ಫ್ಲಕ್ಸ್ ಮತ್ತು ಬ್ಯಾನರ್ ಗಳನ್ನ ತೆರವುಗೊಳಿಸಿದರು.
ಪಟ್ಟಣದ ಬಸ್ ನಿಲ್ದಾಣ ತಾಪಂ, ತಾಲೂಕು ತಹಸಿಲ್ದಾರ್ ಕಚೇರಿ ಗೋಡೆಗೆ ಹಾಕಿದ್ದ ಬ್ಯಾನರ್ ತೆರವುಗೊಳಿಸಿದರು . ನ್ಯಾಮತಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಗಣೇಶ್ ರಾವ್ ಪಿ ತೆರವು ಗೊಳಿಸಿದ ನಂತರ ಮಾತನಾಡಿದ ಅವರು ನಮ್ಮ ಪಟ್ಟಣ ಪಂಚಾಯಿತಿಯ ಅನುಮತಿ ಇಲ್ಲದೆ ಜಾಹೀರಾತು ಅಥವಾ ಪ್ರಚಾರದ ಬ್ಯಾನರ್ ಅಳವಡಿಸುವಂತಿಲ್ಲ. ಅಳವಡಿಸಿದ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ದಂಡ ವಿಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಂದಾಯ ವಸೂಲಿಗಾರ ಪ್ರವೀಣ್ ಕುಮಾರ್, ಕರವಸಲಿಗಾರ ಮಂಜುನಾಥ್, ಕೆ ಎಸ್ ಮಂಜುಳಾ, ಹನುಮಂತಪ್ಪ, ಮನು ,ಪ್ರಶಾಂತ್, ಕೆಎಂ ಶಿವಕುಮಾರ್ ಸಹ ಇದ್ದರು.