ದಿನಾಂಕ: 05-04-2023 ರಂದು ಶಿವಮೊಗ್ಗ ರೈಲ್ವೇ ನಿಲ್ದಾಣದ ಪ್ಲಾಟ್ಫಾರಂ 1 ರಲ್ಲಿ ಭದ್ರಾವತಿ ಕಡೆಗೆ ಇರುವ ರೈಲ್ವೇ ನಿಲ್ದಾಣದ ಪ್ಲಾಟ್ಫಾರಂ ಶೆಲ್ಟರ್ ಕಂಬಿಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ.
ಸುಮಾರು 25 ರಿಂದ 30 ವರ್ಷದ ಅಪರಿಚಿತ ಶವ ಪತ್ತೆಯಾಗಿದ್ದು, ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಮೃತನು ಸುಮಾರು 5.8 ಅಡಿ ಎತ್ತರ, ಸಾಧಾರಣ ಮೈಕಟ್ಟು, ಸಾಧಾ ಕಪ್ಪು ಮೈಬಣ್ಣ, ಕೋಲು ಮುಖ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು ಕೂದಲು ಹಾಗೂ ಸುಮಾರು 1 ಇಂಚು ಉದ್ದದ ಗಡ್ಡ ಮೀಸೆ ಬಿಟ್ಟಿರುತ್ತಾನೆ. ನೀಲಿ ಗುಲಾಬಿ ಬಣ್ಣದ ಟೀ ಶರ್ಟ್, ಬೂದು ಬಣ್ಣದ ಕಾಟನ್ ಪ್ಯಾಂಟ್, ಕೈಯಲ್ಲಿ ಸಿಲ್ವಟ್ ಬಣ್ಣದ ಕಡಗ, ಎರಡು ಕಿವಿಯಲ್ಲಿ ಫ್ಯಾಷನ್ ರಿಂಗ್ ಧರಿಸಿರುತ್ತಾನೆ. ಬಲಗೈಯಲ್ಲಿ ಅಮ್ಮ & ರಾಜಹುಲಿ ಹಾಗೂ ತೋಳಿನಲ್ಲಿ ಸುಜಾತ ಎಂದು ಹಚ್ಚೆ ಹಾಕಿಸಿರುತ್ತಾನೆ ಹಾಗೂ ಎಡಗಡೆ ಎದೆ ಮೇಲೆ ವಿಷ್ಣುದಾದ ಎಂದು ಹಚ್ಚೆ ಇರುತ್ತದೆ.
ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೇ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೂ.ಸಂ: 08182-222974, 9480802124 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ರೈಲ್ವೇ ಸ್ಟೇಷನ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.