2023- 24 ನೇ ಸಾಲಿನ ಆಸ್ತಿ ತೆರಿಗೆಯನ್ನು ಏ.01 ರಿಂದ 30 ರೊಳಗಾಗಿ ಪಾವತಿಸಿದಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ.5% ರಷ್ಟು ವಿನಾಯಿತಿಯನ್ನು ಕಲ್ಪಿಸಲಾಗಿದೆ. ಆದ್ದರಿಂದ ಆಸ್ತಿ ಮಾಲೀಕರು ಶೇ.5% ರ ವಿನಾಯಿತಿಯ ಪ್ರಯೋಜನ ಪಡೆದುಕೊಳ್ಳಬಹುದೆಂದು ಶಿರಾಳಕೊಪ್ಪದ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆಯನ್ನು ಏ.01 ರಿಂದ 30 ರವರೆಗೆ ಶೇ. 5% ರಿಯಾಯಿತಿಯಲ್ಲಿ, ಮೇ.01 ರಿಂದ ಜೂ.30 ರವರೆಗೆ ದಂಡ ರಹಿತವಾಗಿ ಹಾಗೂ ಜು.01 ರಿಂದ ಮಾಸಿಕ ಶೇ.2% ರಂತೆ ದಂಡ ವಿಧಿಸಿ ಪಾವತಿ ಮಾಡಲಾಗುವುದು.
ವಿಶೇಷ ಸೂಚನೆ : ಕಟ್ಟಡ / ಖಾಲಿ ನಿವೇಶನ ಛಾಯಾಚಿತ್ರ, ಮಾಲೀಕರ ಭಾವಚಿತ್ರ ಮಾಲೀಕತ್ವದ ದಾಖಲೆ, ಚುನಾವಣಾ ಗುರುತಿನ ಚೀಟಿ, ಇತ್ತೀಚಿನ ವಿದ್ಯುತ್ ಬಿಲ್ ಪ್ರತಿಯನ್ನು ತೆರಿಗೆ ವಿವರ ಪಟ್ಟಿಯೊಂದಿಗೆ ಸಲ್ಲಿಸಿ ನಿಮ್ಮ ಆಸ್ತಿಯ ಆನ್ ಲೈನ್ ದಾಖಲಾತಿಗೆ ಸಹಕರಿಸುವಂತೆ ಕೋರಿದ್ದಾರೆ.