ನ್ಯಾಮತಿ: ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿಂದು ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಏ 12ರಂದು ಸೋಮವಾರ ಬೆಳಗ್ಗೆ 7:30ಕ್ಕೆ ಸರಿಯಾಗಿ ವಿಜೃಂಭಣೆಯಿಂದ ಜರುಗಿತು.
ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿಯ ಕಾರ್ಯದರ್ಶಿ ಪರಮೇಶಪ್ಪ ರಥೋತ್ಸವ ಕುರಿತು ನಂತರ ಮಾತನಾಡಿ ಎ.8 ಶನಿವಾರ ರಾತ್ರಿ 10ಗಂಟೆಗೆ ಆಂಜನೇಯ ಸ್ವಾಮಿಗೆ ಕಂಕಣಧಾರಣೆಯಿಂದ ಪ್ರಾರಂಭಗೊಂಡು ಏ. 11 ಸಾಯಂಕಾಲ 6.30ಕ್ಕೆ ಕಳಸಾರೋಹಣ ನೆರವೇರಿ ಏ. 12 ಬುಧವಾರ ಬೆಳಗ್ಗೆ 7.30ಕ್ಕೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಶ್ರೀ ಬಸವ ದೇವರು ಮತ್ತು ಭೂತಪ್ಪ ದೇವರುಗಳ ಸಮ್ಮುಖದಲ್ಲಿ ಹಲಗೆ , ಡೊಳ್ಳು ಕುಣಿತ ಸನಾಯಿ ವಾದ್ಯ ಮೇಳದೊಂದಿಗೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಜರಗಿ, ಮಧ್ಯಾಹ್ನ 12 ಗಂಟೆಗೆ “ಭೇಟಿಮರ” ತರುವುದರೊಂದಿಗೆ ನಂತರ ಕೊಲ್ಲಾಪುರ ಬಂಡಿ ಮೆರವಣಿಗೆ ನಡೆದು, ಅಂದೇ ಸಾಯಂಕಾಲ ಭೂತಪ್ಪ ಮತ್ತು ದಾಸಪ್ಪಗಳಿಂದ “ಮಣೇವು” ಆಡಿಸಿ ಸಂಜೆ 6:30 ಗಂಟೆಗೆ ಓಳಿ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಂಡಿತು ಎಂದು ತಿಳಿಸಿದರು. ದೇವಸ್ಥಾನ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸರ್ವ ನಿರ್ದೇಶಕರುಗಳು, ಊರಿನ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸಹ ಪಾಲ್ಗೊಂಡಿದ್ದರು.