ನ್ಯಾಮತಿ:ತಾಲ್ಲೂಕು ಜೀನಹಳ್ಳಿ- ಕೆಂಚಿಕೊಪ್ಪ ಮಧ್ಯೆಚಿಕ್ಕಯ್ಯನಗುಡಿ ಬಳಿ ಮಂಗಳವಾರ ಸೆರೆಯಾದ ಕಾಡಾನೆ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ವಿದ್ಯಾರ್ಥಿನಿ ಸಾವಿಗೆ ಕಾರಣವಾದ ಹಾಗೂ ೬ ಮಂದಿ ಮೇಲೆ ದಾಳಿ ನಡೆಸಿದ್ದ ೧೬ ವರ್ಷದ ಸಲಗ ಮಂಗಳವಾರ ನ್ಯಾಮತಿ ತಾಲ್ಲೂಕು ಜೀನಹಳ್ಳಿ-ಕೆಂಚಿಕೊಪ್ಪ ಮಧ್ಯೆ ಚಿಕ್ಕಯ್ಯನಗುಡಿ ಬಳಿ ಜಮೀನಿನಲ್ಲಿ ಸೆರೆ ಸಿಗುವ ಮೂಲಕ ಎರಡು ತಾಲ್ಲೂಕಿನ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮಂಗಳವಾರ ಬೆಳಿಗ್ಗೆ ಹೊನ್ನಾಳಿ-ಶಿಕಾರಿಪುರ ಮಾರ್ಗದ ಸೊರಟೂರು ಬಳಿ ಕುರಿಗಾಯಿಗಳು ಆನೆಯನ್ನು ಕಂಡು ಕೆಂಚಿಕೊಪ್ಪ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಗುಂಪಾಗಿ ತೆರಳಿ ನೋಡಿದಾಗ ಹನುಮಾಪುರಕೆರೆಯಲ್ಲಿ ಆನೆ ಇರುವುದು ಕಂಡುಬAದಿದೆ.ಜನರಗಲಾಟೆಯಿAದ ಆನೆ ಜಮೀನಿನ ಕಡೆ ಹೋಗಿದೆ. ಜನರು ಅರಣ್ಯಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ಸ್ಥ¼ಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅರವಳಿಕೆ ಮದ್ದು ನೀಡಿ, ಸಕ್ರೆಬೈಲು ಆನೆ ಶಿಬಿರದಿಂದ ಬಂದಿದ್ದ ಮೂರು ಸಾಕಾನೆಗಳÀ ನೆರವಿನೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಪುಂಡಾನೆಯನ್ನು ಸೆರೆಹಿಡಿದು, ಲಾರಿಯ ಮೂಲಕ ಸಕ್ರೆಬೈಲು ಆನೆ ಬಿಡಾರಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದರು.


ಚನ್ನಗಿರಿ ತಾಲ್ಲೂಕಿನಲ್ಲಿ ಆನೆ ಸೆರೆ ಹಿಡಿಯಲು ಎರಡು ದಿನದಿಂದ ಶ್ರಮಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣತಪ್ಪಿಸಿ ಯಾವ ಮಾರ್ಗದಲ್ಲಿ ಆನೆ ಹೊನ್ನಾಳಿ ತಾಲ್ಲೂಕಿಗೆ ಪ್ರವೇಶ ಮಾಡಿತು ಎಂಬುದು ಸಾರ್ವಜನಿಕರ ಕುತೂಹಲಕ್ಕೆಕಾರಣವಾಗಿತ್ತು. ಹೊಸಹಳ್ಳಿ,ದಾಗಿನಕಟ್ಟೆ, ಕಂಚುಗಾರನಹಳ್ಳಿ, ಅರಬಗಟ್ಟೆ, ಸೊರಟೂರು ಮಾರ್ಗವಾಗಿ ಬಂದಿರಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ.
ಕಾರ್ಯಚರಣೆಯಲ್ಲಿ ಶಿವಮೊಗ್ಗ ಸಿಸಿಎಫ್ ಡಾ.ಕೆ.ಟಿ. ಹನುಮಂತಪ್ಪ, ಬಳ್ಳಾರಿ ಸಿಸಿಎಫ್ ಪಿ.ಹೀರಾಲಾಲ್, ದಾವಣಗೆರೆಡಿಎಫ್‌ಒಎನ್.ಎಚ್.ಜಗನ್ನಾಥ್, ಭದ್ರಾವತಿಡಿಎಫ್‌ಒ ಶಿವಶರಣಯ್ಯ, ಸಿಸಿಎಫ್ ಹನುಮಂತರಾಯ, ಎಸಿಎಫ್‌ಗಳಾದ ಮೋಹನಕುಮಾರ, ಗೋಪ್ಯಾನಾಯ್ಕ, ರಮೇಶ ಪಟ್ನಳ್ಳಿ, ಚನ್ನಗಿರಿ ಆರ್‌ಎಫ್‌ಒ ಜಗದೀಶ, ಬಿ.ಟಿ.ಶ್ರೀನಿವಾಸ, ತಾಲ್ಲೂಕಿನ ಅರಣ್ಯಇಲಾಖೆಯ ಭರ್ಕತ್‌ಆಲಿ, ಶಿವಯೋಗಿ, ಚಾಂದ್, ಕೃಷ್ಣಮೂರ್ತಿ, ಪ್ರಭಾಕರ ಹಾಗೂ ದಾವಣಗೆರೆ, ಶಿವಮೊಗ್ಗ ಮತ್ತು ಭದ್ರಾವತಿ ಅರಣ್ಯಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ವೈದ್ಯಾಧಿಕಾರಿ ಮೇಲೆ ದಾಳಿ ಮಾಡಿದ ಆನೆ:
ಮಂಗಳವಾರ ಬೆಳಿಗ್ಗೆ ನ್ಯಾಮತಿ ತಾಲ್ಲೂಕಿನಲ್ಲಿಕಂಡು ಬಂದ ಆನೆ ಸೆರೆ ಹಿಡಿಯಲು ಅರವಳಿಕೆ ಮದ್ದು ನೀಡುವ ಸಂದರ್ಭದಲ್ಲಿ ಆನೆ, ವೈದ್ಯಾಧಿಕಾರಿ ವಿನಯ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಇತರ ಸಿಬ್ಬಂದಿಗಳು ಆನೆಯನ್ನು ಓಡಿಸಿ ವೈದ್ಯರನು ್ನಚಿಕಿತ್ಸೆಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *