ನ್ಯಾಮತಿ: ಪಟ್ಟಣದಲ್ಲಿ ಭಾರತೀಯ ಚುನಾವಣಾ ಆಯೋಗ ಆದೇಶದ ಅನ್ವಯ ಜಿಲ್ಲಾಡಳಿತ ಮತ್ತು ಜಿಲ್ಲಾ ನಗರ ಅಭಿವೃದ್ಧಿ ಇಲಾಖೆ ಆದೇಶದಂತೆ ನ್ಯಾಮತಿ ಪಟ್ಟಣ ಪಂಚಾಯಿತಿ ವತಿಯಿಂದ ಮತದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮತದಾನದ ಜಾಗೃತಿ ನಡೆಸಿದ ಮುಖ್ಯಾಧಿಕಾರಿ ಗಣೇಶ್ ರಾವ್ ನಂತರ ಮಾತನಾಡಿ ಶುಕ್ರವಾರದಂದು ಇಂದು ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಹಾಗೂ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಮತದಾನದ ಜಾಗೃತಿ ಮೂಡಿಸಿ ನಂತರ ಪಟ್ಟಣದ ಶಿವಾನಂದಪ್ಪ ಬಡಾವಣೆಯಲ್ಲಿ ಕಳೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿತ್ತು ಅದನ್ನು ಮನಗೊಂಡು ಬಡಾವಣೆಯ ಸದರಿ ನಿವಾಸಿಗಳಿಗೆ ಮನೆ ಮನೆಗೆ ತೆರಳಿ ಮತದಾನದ ಜಾಗೃತಿಯನ್ನು ಪ್ರತಿಯೊಬ್ಬರೂ ಈ ಚುನಾವಣೆಯಲ್ಲಿ ಮತದಾನ ಮಾಡುವಂತೆ ಮನವೊಲಿಸಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಾ ಧಿಕಾರಿ ಗಣೇಶ್ ರಾವ್ ಪಿ, ಇ ಇಒ ರಾಮಭೋವಿ, ಕಂದಾಯ ನಿರೀಕ್ಷಕ ಪ್ರವೀಣ್, ಕಿರಿಯ ಆರೋಗ್ಯ ನಿರೀಕ್ಷಕ ಹರ್ಷ, ಮಂಜು ,ಶಿವು, ಮನು, ಹಾಗೂ ಪೌರಕಾರ್ಮಿಕರು ಸಹ ಇದ್ದರು.