ಹೊನ್ನಾಳಿ : ಕಾಂಗ್ರೇಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪನವರಿಗೆ ಟಿಕೇಟ್ ಸಿಗದ ಹಿನ್ನೆಯಲ್ಲಿ ಹೊನ್ನಾಳಿ ತಾಲೂಕಿನ ಸಿಂಗಟಗೆರೆ ಗ್ರಾಮದ 20 ಕ್ಕೂ ಹೆಚ್ಚು ಜನರು ಕಾಂಗ್ರೇಸ್ ತೊರೆದು ಶಾಸಕ ಎಂ.ಪಿ.ರೇಣುಕಾಚಾರ್ಯನವರ ಸಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಸಿಂಗಟಗೆರೆ ಗ್ರಾಮದ ತಿಪ್ಪಣ್ಣ, ಮಹಾಂತೇಶ್.ಕೆ, ನಾಗರಾಜ್.ಡಿ, ರಾಕೇಶ್,ನರಸಪ್ಪ ದಿಳ್ಳೆಪ್ಪಾರ್,ಎಸ್.ಎಚ್.ನಾಗರಾಜ್,ಎಸ್.ಎಚ್.ಸಿದ್ದೇಶ್,ಬೆನಕೇಶ್,ದಾನೇಶ್,ಅಭಿ,ದರ್ಶನ್,ಗಜೇಂದ್ರ ಕುಮಾರ್ ಸೇರಿದಂತೆ 20 ಕ್ಕೂ ಹೆಚ್ಚು ಜನರು ಹಾಲುಮತ ಸಮಾಜದವರು ಬಿಜೆಪಿ ಸೇರ್ಪಡೆಯಾದರು
ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ಮಂಜುನಾಥ್ ಎಚ್.ಬಿ.ಮಂಜಪ್ಪನವರಿಗೆ ಕಾಂಗ್ರೇಸ್‍ನಿಂದ ಟಿಕೇಟ್ ನೀಡದೇ ಇರುವುದು ಹಾಲಮತ ಸಮಾಜಕ್ಕೆ ನೋವುಂಟು ಮಾಡಿದೇ, ಆಗಾಗೀ ನಾವು ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದೇವೆ ಎಂದರಲ್ಲದೇ ಇನ್ನು ಸಾಕಷ್ಟು ಜನರು ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಯಾಲಿದ್ದಾರೆಂದರು.
ಇದೇ ವೇಳೆ ಮಾತನಾಡಿದ ಶಾಸಕ ರೇಣುಕಾಚಾರ್ಯ ಅತ್ಯಂತ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ. ಬಿಜೆಪಿಗೆ ಕಾರ್ಯಕರ್ತರೆ ಶಕ್ತಿ ಎಂದ ಶಾಸಕರು, ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಯಾದ ಎಲ್ಲರಿಗೂ ಸ್ವಾಗತ ಕೋರುತ್ತೇನೆಂದರಲ್ಲದೇ ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡುವ ಮೂಲಕ ಮತ್ತೋಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರೋಣ ಎಂದರು.
ಇನ್ನು ಕೋಣನತಲೆ ಗ್ರಾಮದ ಮಾಜಿ ಗ್ರಾ.ಪಂ ಸದಸ್ಯ ಅಣ್ಣಪ್ಪ.ಎ.ಕೆ, ನರಸಿಂಹಪ್ಪ.ಎ.ಕೆ, ದೇವೇಂದ್ರಪ್ಪ.ಎ.ಕೆ,ಚಂದ್ರಪ್ಪ.ಎ.ಕೆ,ನಾಗರಾಜಪ್ಪ.ಎ.ಕೆ,ದೇವಗಂಗೇರ ಅಣ್ಣಪ್ಪ, ವಾಲ್ಮೀಕಿ ಸಮಾದ ಭೀಮನಗೌಡ್ರು, ದೇವರಾಜ್, ಅರುಣ್ ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಯಾದರು.