ನ್ಯಾಮತಿ: ಗ್ರಾಮದ ವೀರಭದ್ರೇಶ್ವರಸ್ವಾಮಿ ರಥೋತ್ಸವ ಬುಧವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಈ ಸಲುವಾಗಿ ಬೆಳಿಗ್ಗೆ ವೀರಭದ್ರೇಶ್ವರಸ್ವಾಮಿ ಶಿಲಾಮೂರ್ತಿಗೆ ಅಭಷೇಕ, ವಿಶೇಷ ಆಲಂಕಾರ ಪೂಜೆ ನೆರವೇರಿಸಿ, ನೂರಾರು ಭಕ್ತರ ಜಯಘೋಷದೊಂದಿಗೆ ವೀರಭದ್ರೇಶ್ವರಸ್ವಾಮಿ ಮತ್ತು ಕಾಳಿಕಾಂಬಾ ಉತ್ಸವ ಮೂರ್ತಿಯನ್ನು ಆಲಂಕೃತಗೊಂಡ ರಥದಲ್ಲಿ ಪ್ರÀ್ರತಿಷ್ಠಾಪಿಸಿ, ವಿವಿಧ ಮಂಗಳ ವಾದ್ಯಗಳೊಂದಿಗೆ ಭಕ್ತರು ರಥವನ್ನು ಎಳೆದರು.
ದೇವಸ್ಥಾನದಿಂದ ಅರಳಿಕಟ್ಟೆ ವೃತ್ತದವರೆಗೆ ಸಾಗಿದ ರಥಕ್ಕೆ ಭಕ್ತರು ಬಾಳೆಹಣ್ಣು, ಉತ್ತತ್ತಿ ಎರಚಿದರು ಹಾಗೂ ಮಂಗಳಾರತಿ ಮಾಡಿಸುವ ಮೂಲಕ ಭಕ್ತಿ ಮೆರೆದರು.
ವೀರಭದ್ರೇಶ್ವರಸ್ವಾಮಿ ರಥೋತ್ಸವ ಸಮಿತಿ ಮತ್ತು ಗ್ರಾಮಸ್ಥರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.