ನ್ಯಾಮತಿ :ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದ ಗ್ರಾಮದೇವತೆ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಕಳೆದ ಎರಡು ದಶಕಗಳಿಂದ ರಥೋತ್ಸವ ನಡೆದಿರಲಿಲ್ಲ. ಈ ಬಾರಿ ನೂತರ ರಥವನ್ನು ನಿರ್ಮಾಣ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಬೆಳಿಗ್ಗೆ ವಿವಿಧ ದಾರ್ಮಿಕ ಕಾರ್ಯಕ್ರಮಗಳ ನಂತರ ಆಲಂಕೃತಗೊಂಡ ರಥದಲ್ಲಿ ಮಲ್ಲಿಕಾರ್ಜುನಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು ಮತ್ತು ಹಿರೇಕಲ್ಮಠ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರು ಸಹಾ ರಥದಲ್ಲಿ ಅಸೀನರಾದ ನಂತರ ಸಾವಿರಾರು ಭಕ್ತರ ಜಯಘೋಷದೊಂದಿಗೆ ರಥವನ್ನು ಎಳೆಯಲಾಯಿತು.
ಹರಕೆ ಹೊತ್ತ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎರಚಿ, ಮಂಗಳಾರತಿ ಮಾಡಿಸಿ ಭಕ್ತಿ ಮೆರೆದರು.
ರಥೋತ್ಸವದಲ್ಲಿ ಗ್ರಾಮದ ರಂಗನಾಥಸ್ವಾಮಿ, ಬಿದರಹಳ್ಳಿ ಸಿದ್ಧಪ್ಪ ದೇವರು ಪಾಲ್ಗೊಂಡಿದ್ದು ರಥಕ್ಕೆ ಮೆರಗು ಬಂದಿತು.
ಭಾನುವಾರ ನಡೆದ ರಥದ ಕಳಾಸಾರೋಹಣ ಮತ್ತು ಧಾರ್ಮಿಕ ಸಭೆಯ ನೇತೃತ್ವವನ್ನು ಹಿರೇಕಲ್ಮಠ ಒಡೆಯರ ಚನ್ನಮಲ್ಲಿಕಾರ್ಜುನಸ್ವಾಮಿ ವಹಿಸಿದ್ದರು.
ದೇವಸ್ಥಾನ ಸಮಿತಿಯಿಂದ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನ ಸಮಿತಿ, ಗ್ರಾಮಸ್ಥರು ಮತ್ತು ಸುತ್ತಮುತ್ತಲ ಗ್ರಾಮದವರ ನೇತೃತ್ವದಲ್ಲಿ ನಡೆಯಿತು.

Leave a Reply

Your email address will not be published. Required fields are marked *

You missed